ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

2013ರಲ್ಲಿ ನಡೆದಿದ್ದ ಮಾನಸ ಕೊಲೆ ರಹಸ್ಯ ಬಯಲು

|
Google Oneindia Kannada News

ಬೆಂಗಳೂರು, ಜನವರಿ 4: ಆರು ವರ್ಷಗಳ ಹಿಂದೆ ಕೆಂಪೇಗೌಡ ನಗರದಲ್ಲಿ ನಡೆದಿದ್ದ ಗೃಹಿಣಿ ಮಾನಸ ನಿಗೂಢ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ ಪ್ರಮುಖ ಆರೋಪಿಯನ್ನು ಸೆರೆಹಿಡಿಯುವುದರಲ್ಲಿ ದಕ್ಷಿಣ ವಿಭಾಗದ ಪೊಲೀಸರು ಯಶಸ್ವಿಯಾಗಿದ್ದಾರೆ.

ಕೆಂಪೇಗೌಡ ನಗರದ ರಾಘವೇಂದ್ರ ಬಂಧಿತ, ಇವನ ಜೊತೆ ಕೊಲೆಯಲ್ಲಿ ಭಾಗಿಯಾಗಿದ್ದ ಮೊತ್ತೊಬ್ಬ ಆರೋಪಿ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. ಕೆಂಪೇಗೌಡನಗರದ ನಾಗಪ್ಪ ಬ್ಲಾಕ್‌ನ ಮಾನಸ ಅವರು, ತಮ್ಮ ಪತಿ ನಾಗರಾಜ್ ಮತ್ತು ಮಕ್ಕಳೊಂದಿಗೆ ನೆಲೆಸಿದ್ದರು.

ರಕ್ತದ ಮಡುವಿನಲ್ಲಿದ್ದರೂ ಹೆಂಡತಿಗೆ ಕರೆ ಮಾಡಿ ನನ್ನನ್ನು ಬದುಕಿಸು ಎಂದಿದ್ದ ಸೈಯದ್ ರಕ್ತದ ಮಡುವಿನಲ್ಲಿದ್ದರೂ ಹೆಂಡತಿಗೆ ಕರೆ ಮಾಡಿ ನನ್ನನ್ನು ಬದುಕಿಸು ಎಂದಿದ್ದ ಸೈಯದ್

2013 ಮಾರ್ಚ್ 19ರಂದು ಮಾನಸನ ಮನೆಗೆ ತನ್ನ ಸಹಚರನ ಜೊತೆ ನುಗ್ಗಿದ್ದ ರಾಘವೇಂದ್ರ, ಚಾಕು ತೋರಿಸಿ ಚಿನ್ನಾಭರಣ ನೀಡುವಂತೆ ಅವರಿಗೆ ಬೆದರಿಸಿದ್ದ, ರಕ್ಷಣೆಗೆ ಜೋರಾಗಿ ಕೂಗಿಕೊಳ್ಳಲು ಯತ್ನಿಸಿದ್ದರು.

Cops solve murder of woman after 6 yrs

ಈ ಹಂತದಲ್ಲಿ ಕೋಪಗೊಂಡ ಹಂತಕರು ಅವರನ್ನು ಉಸಿರುಗಟ್ಟಿಸಿ ಕೊಂದು ಬಳಿಕ ಮೃತರ ಮನೆಯಲ್ಲಿ 400 ಗ್ರಾಂ ಚಿನ್ನಾಭರಣ ಹಾಗೂ 1 ಲಕ್ಷ ನಗದು ದೋಚಿ ಪರಾರಿಯಾಗಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಶಾಲೆಗೆ ಹೋಗಿದ್ದ ಮಾನಸ ಅವರ ನಾಲ್ಕು ವರ್ಷದ ಮಗಳು ಮನೆಗೆ ಬಂದಾಗ ಮಲಗಿರುವ ತಾಯಿ ಏಳುತ್ತಿಲ್ಲ ಎಂದು ಅಳುತ್ತಾ ಕುಳಿತಿದ್ದಳು, ಇದನ್ನು ಗಮನಿಸಿದ ಮನೆ ಮಾಲೀಕರ ಪತ್ನಿ ಬಂದು ನೋಡಿದಾಗ ಮಾನಸ ಮೃತಪಟ್ಟಿದ್ದಳು .

ಶಿವನಸಮುದ್ರದಲ್ಲಿ ನವದಂಪತಿ ಶವ ಪತ್ತೆ: ಮರ್ಯಾದಾ ಹತ್ಯೆ ಶಂಕೆ ಶಿವನಸಮುದ್ರದಲ್ಲಿ ನವದಂಪತಿ ಶವ ಪತ್ತೆ: ಮರ್ಯಾದಾ ಹತ್ಯೆ ಶಂಕೆ

ಬಳಿಕ ಪೊಲೀಸರಿಗೆ ದೂರು ನೀಡಿದ್ದರು. ಅಲ್ಲದೆ ಆ ದಿನ ಬೆಳಗ್ಗೆ ಮನೆಯ ಹೊರಗಡೆ ಚಪ್ಪಲಿ ಇದ್ದುದನ್ನು ಕೆಲ ನಿಮಿಷಗಳ ನಂತರ ವ್ಯಕ್ತಿಯೊಬ್ಬರು ಹೊರಗೆ ಹೋಗಿದ್ದನ್ನು ನೋಡಿದ್ದಾಗಿ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ತನಿಖೆ ನಡೆಸಿದರೂ ಆರೋಪಿಯ ಸುಳಿವು ಸಿಗಲಿಲ್ಲ.

ಅಕ್ರಮ ಸಂಬಂಧದಿಂದ ಹುಟ್ಟಿದ ನವಜಾತ ಶಿಶುವನ್ನು ಕೊಂದ ಪಾಪಿ ಅಪ್ಪನ ಬಂಧನ ಅಕ್ರಮ ಸಂಬಂಧದಿಂದ ಹುಟ್ಟಿದ ನವಜಾತ ಶಿಶುವನ್ನು ಕೊಂದ ಪಾಪಿ ಅಪ್ಪನ ಬಂಧನ

2016ರಲ್ಲಿ ರಾಜರಾಜೇಶ್ವರಿ ನಗರ ಠಾಣೆ ವ್ಯಾಪ್ತಿಯಲ್ಲಿ ಮತ್ತೊಂದು ಒಂಟಿ ಮಹಿಳೆ ಕೊಲೆ ನಡೆದಿತ್ತು. ಆ ಪ್ರಕರಣದಲ್ಲಿ ಪೊಲೀಸರು ರಾಘವೇಂದ್ರನನ್ನು ಬಂಧಿಸಿದ್ದರು. ಜೈಲಿನಲ್ಲಿ ಇತರೆ ಕೈದಿಗಳೊಂದಿಗೆ ಮಾತನಾಡುತ್ತಿದ್ದಾಗ ಈ ವಿಷಯ ಬಾಯ್ಬಿಟ್ಟಿದ್ದಾನೆ. ಇದು ಪೊಲೀಸರ ಕಿವಿಗೂ ತಲುಪಿತ್ತು. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

English summary
Six years after a 28-year-old homemaker was murdered while she was alone in her house in KG Nagar near Chamarajpet, police on Thursday said they had solved the case with the arrest of one of the two suspects.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X