ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಾಜಿಯಾ ಮಾಡಿದ್ರು ಬಾಯಲ್ಲಿ ನೀರೂರಿಸುವ ಚಿಕನ್ ಸ್ಕೀವರ್ಸ್!

ಖ್ಯಾತ ಪಾಕಶಾಸ್ತ್ರ ಪ್ರವೀಣೆ ಶಾಜಿಯಾ ಖಾನ್, ಇತ್ತೀಚೆಗೆ ಬೆಂಗಳೂರಿನಲ ಫೋನಿಕ್ಸ್ ಮಾರ್ಕೆಟ್ ಸಿಟಿಯಲ್ಲಿ ಅಡುಗೆ ಕಾರ್ಯಕ್ರಮ ನಡೆಸಿಕೊಟ್ಟರು. ಹೊಸ ಬಗೆಯ ರುಚಿಕಟ್ಟಾದ ಅಡುಗೆ ತಯಾರಿಸಿ ಎಲ್ಲರ ಬಾಯಲ್ಲಿ ನೀರೂರುವಂತೆ ಮಾಡಿದರು.

|
Google Oneindia Kannada News

ಬೆಂಗಳೂರು, ಜನವರಿ 16: ಖ್ಯಾತ ಪಾಕತಜ್ಞೆ ಶಾಜಿಯಾ ಖಾನ್ ಅವರು ಇತ್ತೀಚೆಗೆ ಬೆಂಗಳೂರಿನ ಫೋನಿಕ್ಸ್ ಮಾರ್ಕೆಟ್ ಸಿಟಿಯಲ್ಲಿ ಆಯೋಜಿಸಲಾಗಿದ್ದ ಪಾಕಶಾಸ್ತ್ರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು, ಹಲವಾರು ಅಡುಗೆಗಳನ್ನು ವೇದಿಕೆಯ ಮೇಲೆಯೇ ಸಿದ್ಧಪಡಿಸಿದರಲ್ಲದೆ, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹಲವಾರು ಪ್ರೇಕ್ಷಕರ ಫೇವರಿಟ್ ಅಡುಗೆಯನ್ನು ಅವರ ಬಾಯಿಂದಲೇ ಕೇಳಿಸಿಕೊಂಡು, ಆ ಅಡುಗೆಯನ್ನು ಮತ್ತಷ್ಟು ರುಚಿಕಟ್ಟಾಗಿ ಮಾಡುವ ಬಗ್ಗೆ ಕೆಲವಾರು ಟಿಪ್ಸ್ ಗಳನ್ನೂ ನೀಡಿದರು.

ಗ್ರಿಲ್ಡ್ ಕಾಟೇಜ್ ಚೀಸ್ ಪೆಪ್ಪರ್ಸ್ ಖಾದ್ಯದೊಂದಿಗೆ ಕಾರ್ಯಕ್ರಮ ಆರಂಭಿಸಿದ ಅವರು, ದಿನದ ಕೊನೆಯಲ್ಲಿ ಚಾಕೋಲೇಟ್ ಮಾಲ್ಟೆನ್ ಲಾವಾ ಕೇಕ್ ಮಾಡಿ ಎಲ್ಲರ ಮನತಣಿಸಿದರು. ವಿವಿಧ ಭಕ್ಷ್ಯ ಭೋಜನಗಳನ್ನು ಇಷ್ಟಪಡುವವರು, ಸವಿರುಚಿಗೆ ಮಾರುಹೋಗುವವರು, ಅದರಲ್ಲೂ ಹೊಸ ಹೊಸ ಬಗೆಯ ಖಾದ್ಯಗಳನ್ನು ಟ್ರೈ ಮಾಡುವವರಂತೂ ಈ ಕಾರ್ಯಕ್ರಮವನ್ನು ತುಂಬಾ ಇಷ್ಟಪಟ್ಟರು.

ಯಾರು ಈ ಶಾಜಿಯಾ ಖಾನ್?
ಪಾಕಶಾಸ್ತ್ರ ಪರಿಣಿತೆಯಾದ ಶಾಜಿಯಾ ಖಾನ್ ಅವರು ಬೆಂಗಳೂರಿನವರೇ. ಪ್ರತಿಷ್ಠಿತ ಟಿವಿ ವಾಹಿನಿಯಾದ ಸ್ಟಾರ್ ಪ್ಲಸ್ ನ ಜನಪ್ರಿಯ ರಿಯಾಲಿಟಿ ಷೋ ಆದ ಮಾಸ್ಟರ್ ಶೆಫ್- ಸೀಸನ್ 2ನಲ್ಲಿಅವರು ಭಾಗವಹಿಸಿ, ಅಂತಿಮ ಸುತ್ತಿನಲ್ಲಿ ರನ್ನರ್ ಅಪ್ ಆಗಿದ್ದರು. ಅದಾದ ಮೇಲೆ, ಬೆಂಗಳೂರು, ಚೆನ್ನೈ, ಗೋವಾ ಮುಂತಾದೆಡೆ ಹಲವಾರು ಕುಕರಿ ಷೋಗಳನ್ನು ಆಯೋಜಿಸಿದ್ದಾರೆ. ಅವರ ಈ ಶೋಗಳಲ್ಲಿ ಭಾಗಿಯಾದವರಲ್ಲಿ ಅಡುಗೆಯ ಉತ್ಸಾಹ ಪುಟಿದೇಳುವಂತೆ ಸ್ಫೂರ್ತಿ ತುಂಬಬಲ್ಲರು ಶಾಜಿಯಾ.

ಪಾಕಶಾಸ್ತ್ರ ಪ್ರವೀಣೆ ಎಂಬ ಖ್ಯಾತಿಯ ಜತೆಗೆ ಅವರು, ಡೆಲ್ಲಿ ಪಬ್ಲಿಕ್ ಸ್ಕೂಲ್ ನ ವ್ಯವಸ್ಥಾಪಕ ಮಂಡಳಿಯ ಸದಸ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಲ್ಲದೆ, 'ವಾಟ್ಸ್ ಆನ್ ದ ಮೆನು?' ಎಂಬ ಅಡುಗೆ ಪುಸ್ತಕವನ್ನೂ ಬರೆದಿದ್ದಾರೆ.

ಆದರೆ, ಊಟ ನಮ್ಮದೇ!

ಆದರೆ, ಊಟ ನಮ್ಮದೇ!

ಕಾರ್ಯಕ್ರಮ ಆರಂಭವಾದ ಕೂಡಲೇ ಸಭಿರನ್ನುದ್ದೇಶಿಸಿ ಕೆಲವಾರು ಮಾತುಗಳನ್ನಾಡಿದ ಶಾಜಿಯಾ, ಅನೇಕರಿಗೆ ಗೊತ್ತಿಲ್ಲದ ಅಡುಗೆಯ ಅನೇಕ ಮಹತ್ವಗಳನ್ನು ತಿಳಿಸಿದರು. ಕಾರ್ಯಕ್ರಮದಲ್ಲಿ ಅವರು ಮೊದಲು ಮಾಡಿದ ಖಾದ್ಯ ಗ್ರಿಲ್ಡ್ ಕಾಟೇಜ್ ಚೀಸ್ ಪೆಪ್ಪರ್ಸ್. ಇದರ ಜತೆಗೆ ನಂಚಿಕೆಗಾಗಿ ಪೈನಾಪಲ್ ಚೆರಿ, ಟೊಮ್ಯಾಟೊ ರೆಲಿಷ್ ಸಿದ್ಧಪಡಿಸಿದರು ಅವರು.

ತರಕಾರಿಗಳಿಂದ್ಲೂ ಮಾಡಬಹುದು ಕಬಾಬ್ !

ತರಕಾರಿಗಳಿಂದ್ಲೂ ಮಾಡಬಹುದು ಕಬಾಬ್ !

ದಿನದ ಎರಡನೇ ದಿನದ ಕಾರ್ಯಕ್ರಮದ ತಮ್ಮ ಎರಡನೇ ಅಡುಗೆಯನ್ನು ಅವರು ಪ್ರಯೋಗಿಸಿದ್ದು ತರಕಾರಿಗಳ ಮೇಲೆ. ಸುಟ್ಟ ತರಕಾರಿಗಳಿಂದ ಕಬಾಬ್ ತಯಾರಿಸಿದ ಅವರು, ಬಾಯಲ್ಲಿ ನೀರೂರಿಸುವ ಮಸಾಲೆಯನ್ನು ಬೆರೆಸಿ, ವಿಭಿನ್ನವಾದ ಪಲ್ಯದ ರೂಪ ಕೊಟ್ಟರಲ್ಲದೆ, ಡ್ರೈ ಚಪಾತಿ ಹೋಲುವ ತಿನಿಸನ್ನೂ ಸಿದ್ಧಪಡಿಸಿದರು.

ಆಕರ್ಷಿಸೋ ಚಿಕನ್ ಸ್ಕೀವರ್ಸ್

ಆಕರ್ಷಿಸೋ ಚಿಕನ್ ಸ್ಕೀವರ್ಸ್

ಕಾರ್ಯಕ್ರಮದಲ್ಲಿ ಮೊದಲೆರಡೂ ವೆಜ್ ಐಟಂಗಳನ್ನೇ ಮಾಡಿದ ಶಾಜಿಯಾ, ಆನಂತರ ನಾನ್ ವೆಜ್ ಅಡುಗೆಗೆ ಕೈ ಹಾಕಿದರು. ಲೆಬನೀಸ್ ಚಿಕನ್ ಸ್ಕೀವರ್ಸ್ ಖಾದ್ಯ ಮಾಡಿದ ಅವರು, ಎಲ್ಲರ ಚಪ್ಪಾಳೆ ಗಿಟ್ಟಿಸಿದರು. ಈ ಅಡುಗೆಯಗಾಗಿ ಮಾಡಿಕೊಳ್ಳಬೇಕಾದ ತಯಾರಿ, ಬೇಕಾದ ಸಮಯ, ಈ ಖಾದ್ಯವನ್ನು ರುಚಿಕಟ್ಟಾಗಿಸಲು ಕೈಗೊಳ್ಳಬೇಕಾದ ಕ್ರಮಗಳೆಲ್ಲವನ್ನೂ ಸವಿವರವಾಗಿ ಖಾದ್ಯದೊಂದಿಗೆ ಉಣಬಡಿಸಿದರು ಅವರು.

ಬಾಯಲ್ಲಿ ನೀರೂರಿಸೋ ಚಾಕೊಲೇಟ್ ಲಾವಾ

ಬಾಯಲ್ಲಿ ನೀರೂರಿಸೋ ಚಾಕೊಲೇಟ್ ಲಾವಾ

ಚಾಕೋಲೇಟ್ ಲಾವಾ ಎಂಬ ತಿನಿಸು ಈಗಾಗಲೇ ಜನಪ್ರಿಯ ಖಾದ್ಯ. ಮಕ್ಕಳಿಗಂತೂ ಇದು ಅಚ್ಚುಮೆಚ್ಚು. ಆದರೆ, ಇದರಲ್ಲೂ ವೆರೈಟಿಗಳಿವೆ ಅನ್ನೋದು ಬಹಳಷ್ಟು ಮಂದಿಗೆ ಗೊತ್ತಿರಲಿಕ್ಕಿಲ್ಲ. ಅದನ್ನು ತಿಳಿಸಿದ್ದು ಶಾಜಿಯಾ. ತಮ್ಮ ಅಡುಗೆ ಕಾರ್ಯಕ್ರಮದ ಅಂತಿಮ ಭಾಗದಲ್ಲಿ ಅವರು, ಚಾಕೋಲೇಟ್ ಮಾಲ್ಟೆನ್ ಲಾವಾ ಕೇಕ್ ಮಾಡಿ ಎಲ್ಲರನ್ನು ಸೆಳೆದರು.

English summary
The cookery workshop by Celebrity Chef Shazia Khan recently at Phoenix Marketcity, with the chef presenting a mouth-watering array of Indian fusion recipes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X