66 ಕೋಟಿ ಅಕ್ರಮ ಆಸ್ತಿ ಕೇಸಿನ ದೋಷಿಗೆ ದಿನಕ್ಕೆ 50 ರು. ಸಂಬಳ

By: ವಿಕಾಸ್ ನಂಜಪ್ಪ
Subscribe to Oneindia Kannada
ಬೆಂಗಳೂರು, ಫೆಬ್ರವರಿ 15: 66.5 ಕೋಟಿ ರುಪಾಯಿ ಅಕ್ರಮ ಆಸ್ತಿ ಪ್ರಕರಣದಲ್ಲಿ ಶಿಕ್ಷೆ ಅನುಭವಿಸಲಿರುವ ಶಶಿಕಲಾ ನಟರಾಜನ್ ದಿನಕ್ಕೆ 50 ರುಪಾಯಿ ದುಡಿಯಲಿದ್ದಾರೆ. ಮೋಂಬತ್ತಿ ಮಾಡುವ ಕೆಲಸಕ್ಕೆ ಅವರನ್ನು ನಿಯೋಜಿಸಲಾಗಿದೆ. ಜೈಲಿನೊಳಗೆ ಪ್ರವೇಶಿಸುವ ಎಲ್ಲ ಕೈದಿಗಳಿಗೂ ಮೊದಲು ಈ ರೀತಿ ನಿಯೋಜಿಸಲಾಗುತ್ತದೆ.

ವೈದ್ಯಕೀಯ ಪರೀಕ್ಷೆ ಮಾಡಿದ ಬಳಿಕ, ಕೈದಿ ಸಂಖ್ಯೆ ವಿತರಿಸಿದ ನಂತರ ಈ ರೀತಿ ಒಂದೊಂದು ಕೆಲಸವನ್ನು ಕೈದಿಗಳಿಗೆ ನೀಡಲಾಗುತ್ತದೆ. ಶಶಿಕಲಾ ಮತ್ತು ಇಳವರಸಿ ಇಬ್ಬರಿಗೂ ಮೋಂಬತ್ತಿ ಮಾಡುವ ಕೆಲಸಕ್ಕೆ ನಿಯೋಜಿಸಲಾಗಿದೆ. ದಿನವೊಂದಕ್ಕೆ ಐವತ್ತು ರುಪಾಯಿ ಸಂಬಳ ನಿಗದಿಪಡಿಸಲಾಗಿದೆ.[ಶಶಿಕಲಾಗೆ ಜೈಲೂಟವೇ ಗ್ಯಾರಂಟಿ, ಜತೆಗಿಬ್ಬರು ಸಹ ಕೈದಿ]

Sasikala Natarajan

ಜೈಲು ಅಧಿಕಾರಿಗಳು ನೀಡಿದ ಮಾಹಿತಿ ಪ್ರಕಾರ, ಜೈಲು ಪ್ರವೇಶಿಸುವ ಮುನ್ನ ಬಳಲಿದಂತೆ ಕಂಡು ಬಂದ ಶಶಿಕಲಾ, ತಮ್ಮ ಪತಿ ನಟರಾಜನ್ ಅವರನ್ನು ತಬ್ಬಿಕೊಂಡು ಅತ್ತಿದ್ದಾರೆ. ಜೈಲು ಪ್ರವೇಶಿಸಿದ ನಂತರ ಆಕೆ ಆರೋಗ್ಯ ತಪಾಸಣೆ ಮಾಡಲಾಗಿದೆ. ಆಕೆ ಧರಿಸಿದ್ದ ವಾಚ್, ಚಿನ್ನದ ಒಡವೆಗಳನ್ನು ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ.[ಜೈಲಿಗೆ ತೆರಳುವ ಮುನ್ನ ಶಶಿಕಲಾ ಭೀಷ್ಮ ಪ್ರತಿಜ್ಞೆ, ದ್ರೌಪದಿ ಶಪಥ!]

ಆಕೆಗೆ ಜೈಲಿನಲ್ಲಿ ಧರಿಸಲು ನೀಲಿ ಸೀರೆ ನೀಡಲಾಗಿದೆ. ಅದು ಜೈಲಿನಲ್ಲಿ ಧರಿಸುವ ಸಮವಸ್ತ್ರ. ಒಂದು ತಟ್ಟೆ ಹಾಗೂ ಮಗ್ ನೀಡಲಾಗಿದೆ. ಆಕೆ ಕೈದಿ ಸಂಖ್ಯೆ 9934. ಈ ಹಿಂದೆ ಅಂದರೆ 2015ರಲ್ಲಿ ಆಕೆ ಇದೇ ಜೈಲಿನಲ್ಲಿದ್ದಾಗ ಕೈದಿ ಸಂಖ್ಯೆ 7403 ನೀಡಲಾಗಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Sasikala Natarajan who was convicted in the Rs 66.5 crore disproportionate assets case will earn Rs 50 a day. The work allotted to her in jail is candle making.
Please Wait while comments are loading...