ಗ್ರಾಹಕ ಸಂಬಂಧಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 03 : ಕೇಬಲ್ ಟಿವಿ, ಮೊಬೈಲ್, ಈ ಕಾಮರ್ಸ್, ಗ್ರಾಹಕ ರಕ್ಷಣೆ ಅಥವಾ ಆರೋಗ್ಯ ವಿಮೆಗೆ ಸಂಬಂಧಿಸಿದಂತೆ ಸಮಸ್ಯೆಗಳನ್ನು ಎದುರಿಸುತ್ತಿರುವಿರಾ? ಚಿಂತೆ ಬೇಡ, ಈ ವರ್ಕ್ ಶಾಪ್ ನಲ್ಲಿ ಭಾಗವಹಿಸಿ, ನಿಮ್ಮೆಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ.

ಜೇಬಿನ ತುಟಿ ಕಚ್ಚುವಷ್ಟು ತುಟ್ಟಿಯಾಗಲಿದೆ ನವೆಂಬರ್ ತಿಂಗಳು, ಏಕೆ?

ಕೊ ಮೀಡಿಯಾ ಲ್ಯಾಬ್ ಮತ್ತು ಗ್ರಾಹಕ ಹಿತರಕ್ಷಣಾ ಸಂಘವು ಸಿಟಿಜನ್ ಮ್ಯಾಟರ್ಸ್ ಸಹಯೋಗದೊಂದಿಗೆ ನವೆಂಬರ್ 4ರಂದು ಶನಿವಾರ ಸಾರ್ವಜನಿಕರಿಗಾಗಿ ಬೆಂಗಳೂರಿನ ಪ್ಯಾಲೆಸ್ ರಸ್ತೆಯ, ಏಟ್ರಿಯಾ ಟವರ್ಸ್ ನಲ್ಲಿ 'ಗ್ರಾಹಕ ಜಾಗೃತಿ ಕಾರ್ಯಕ್ರಮ' ಆಯೋಜಿಸಿದೆ.

Consumer Awareness Programme by Co Media Lab and Citizen Matters

ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 1ರ ವರೆಗೆ ನಡೆಯುವ ಕಾರ್ಯಕ್ರಮದಲ್ಲಿ ಪ್ರಮುಖ ಭಾಷಣಕಾರರಾಗಿ ಮಾಹಿತಿ ತಂತ್ರಜ್ಞಾನ ಇಲಾಖೆಯ ಮಾಜಿ ವಿಜ್ಞಾನಿ ರವೀಂದ್ರನಾಥ ಗುರು, ಜಿ-ಮಂತ್ರ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋಪಾಲ ರತ್ನಮ್, ಮಾಹಿತಿ ತಂತ್ರಜ್ಞಾನ ಕಾನೂನು ಸಲಹೆಗಾರರಾದ ಪ್ರತಿಮಾ ನಾರಾಯಣ್, ಯುನೈಟೆಡ್ ಇನ್ಸುರೆನ್ಸ್ ಸಂಸ್ಥೆಯ ನಿವೃತ್ತ ವ್ಯವಸ್ಥಾಪಕ ಎಂ.ಏ.ಅಜೀಜ್, ಸರ್ಕಾರದ ವಿವಿಧ ಪ್ರತಿಷ್ಠಿತ ಹುದ್ದೆಗಳಲ್ಲಿ ಸೇವೆ ಸಲ್ಲಿಸಿರುವ ಎಂ.ಎಲ್.ಅಶೋಕ್ ಅವರುಗಳು ಭಾಗವಹಿಸಲಿದ್ದಾರೆ.

ಭಾಗವಹಿಸಬೇಕಿದ್ದರೆ ನೀವು ಮೊದಲೇ ನೋಂದಾಯಿಸಿಕೊಳ್ಳಬೇಕು. ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Are you facing problems with mobile, telecom cable TV, health insurance, consumer protection? This workshop will help you! Co Media Lab and Consumer Care Society in association with Citizen Matters present ‘Consumer Awareness Programme’. Register now to participate.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ