ಬೆಂಗಳೂರಿನಲ್ಲಿ ಹೊಸ ಬದುಕು ಪಡೆದ ನೈಜೀರಿಯಾದ ಸಯಾಮಿ ಅವಳಿ

Posted By:
Subscribe to Oneindia Kannada

ಬೆಂಗಳೂರು, ಡಿಸೆಂಬರ್ 20: ಆರು ತಿಂಗಳ ವಯಸ್ಸಿನ ಜೇಮ್ಸ್ ಮತ್ತು ಜಾನ್, ನಾರಾಯಣ ಹೆಲ್ತ್ ಸಿಟಿಯಲ್ಲಿ ಯಶಸ್ವಿ ಚಿಕಿತ್ಸೆಯ ಬಳಿಕ ಆಟದ ಸಂಭ್ರಮಕ್ಕೆ ಮರಳಿದ್ದಾರೆ.

ನೈಜೀರಿಯಾ ಮೂಲದ ಜೇಮ್ಸ್ ಮತ್ತು ಜಾನ್ ಸಯಾಮಿ ಅವಳಿಗಳು. ಹೊಟ್ಟೆಯ ಮೇಲ್ಭಾಗದಲ್ಲಿ ಹುಟ್ಟಿನಿಂದಲೇ ಪರಸ್ಪರ ಅಂಟಿಕೊಂಡಿದ್ದರು. ನಾರಾಯಣ ಹೆಲ್ತ್ ಸಿಟಿಯ ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ ಬೇರ್ಪಡಿಸಿದ್ದು, ಈ ಶಿಶುಗಳಿಗೆ ಹೊಸ ಬದುಕು ನೀಡಿದ್ದಾರೆ.

ಚೆನ್ನೈ ವ್ಯಕ್ತಿಯ ಜೀವ ಉಳಿಸಿದ ಬೆಂಗಳೂರು ಮಹಿಳೆಯ ಹೃದಯ!

ಇದೊಂದು ಅಪರೂಪದ ಪ್ರಕರಣ. 100,000 ಜನನಗಳಿಗೆ ಒಂದು ಸಯಾಮಿ ಅವಳಿಗಳು ಕಂಡುಬರಬಹುದು. ಇಂಥ ಪ್ರಕರಣಗಳಲ್ಲಿ ಉಳಿಯುವ ಅವಧಿಯೂ ಕಡಿಮೆ. ಇಂಥ ಅರ್ಧಕ್ಕೂ ಹೆಚ್ಚು ಪ್ರಕಣಗಳಲ್ಲಿ ಜನನಕ್ಕೂ ಮೊದಲೇ ಸಾವು ಸಂಭವಿಸಲಿದೆ.

ಶೇ 25ರಷ್ಟು ಪ್ರಕರಣಗಳು ಜನಿಸಿದ ನಂತರ ಮರಣ ಹೊಂದುತ್ತವೆ. ಶೇ 25ರಷ್ಟು ಮಾತ್ರ ಬದುಕುಳಿಯುವ ಸಾಧ್ಯತೆಗಳಿವೆ. ಸಯಾಮಿ ಅವಳಿಗಳು ಒಂದೇ ಭ್ರೂಣದಿಂದ ಜನಿಸುತ್ತವೆ. ದೇಹದ ಕೆಲವು ಭಾಗಗಳಲ್ಲಿ ಅಂಟಿಕೊಂಡಿರಲಿದ್ದು, ದೇಹದ ಒಳಾಂಗಗಳನ್ನು ಎರಡು ಜೀವಗಳು ಹಂಚಿಕೊಂಡಿರುತ್ತವೆ.

Conjoined twins from Nigeria successfully separated at Narayana Health City

ಜೇಮ್ಸ್ ಮತ್ತು ಜಾನ್ ಯಕೃತ್ (ಲಿವರ್) ಹೊರತುಪಡಿಸಿ, ಕರುಳುಗಳು ಮತ್ತು ಇತರ ಅಂಗಗಳನ್ನು ಪ್ರತ್ಯೇಕವಾಗಿ ಹೊಂದಿದ್ದವು. ಶಿಶುಗಳ ಯಕೃತನ್ನು ಬಹಳ ಎಚ್ಚರಿಕೆಯಿಂದ ವಿಂಗಡಿಸಿ ಅವಳಿಗಳನ್ನು ಬೇರ್ಪಡಿಸಲಾಯಿತು. ಮಕ್ಕಳಿಗೆ ಅವರ ಹೊಟ್ಟೆಯ ಭಾಗವನ್ನು ಮುಚ್ಚಲು ಮೆಷ್ ಬಳಕೆಯ ಅಗತ್ಯವಿದ್ದು, ಅದನ್ನು ಸಹ ಯಶಸ್ವಿಯಾಗಿ ನೆರವೇರಿಸಲಾಯಿತು. ಶಸ್ತ್ರಚಿಕಿತ್ಸೆಯ ತರುವಾಯ, ಈ ಮಕ್ಕಳು ನಿರೀಕ್ಷೆ ಮೀರಿ ಚೇತರಿಸಿಕೊಂಡಿದ್ದು, ಸ್ವತಂತ್ರವಾಗಿ ಜೀವಿಸುವ ಸ್ಥಿತಿ ತಲುಪಿದವು.

ಕಣ್ಮಣಿ : ಅವಳಿ-ಜವಳಿಗಳ ಹೃದಯಂಗಮ ಕಥೆ

ಈ ಪ್ರಕರಣದಲ್ಲಿ ಎದುರಾದ ಸವಾಲುಗಳನ್ನು ವಿವರಿಸಿದ ಮಕ್ಕಳ ಶಸ್ತ್ರಚಕಿತ್ಸಾ ತಜ್ಞ ಯುರಾಲಾಜಿಸ್ಟ್, ಹಿರಿಯ ಕನ್ಸಲ್ಟಂಟ್ ಡಾ. ಆಶ್ಲೇ ಡಿ'ಕ್ರೂಜ್ ಅವರು, ಸಯಾಮಿ ಅವಳಿಗಳನ್ನು ಬೇರ್ಪಡಿಸುವುದು ಕಠಿಣವಾದ ಕೆಲಸ. ಮೊದಲಿಗೆ ಮಕ್ಕಳಿಗೆ ನೀಡಬೇಕಾದ ಚಿಕಿತ್ಸೆ, ಔಷಧವನ್ನು ಸರಿಯಾಗಿ ಗುರುತಿಸಬೇಕು.

ಜೇಮ್ಸ್ ಮತ್ತು ಜಾನ್ ಪ್ರಕರಣದಲ್ಲಿ ವೈದ್ಯಕೀಯ, ನರ್ಸಿಂಗ್, ಆಡಳಿತ ವಿಭಾಗವು ಚಿಕಿತ್ಸೆಗೆ ಪೂರ್ಣ ನೆರವು ನೀಡಿತು. ಶಸ್ತ್ರಚಿಕಿತ್ಸೆಯನ್ನು ಆರು (6) ಅರಿವಳಿಕೆ ತಜ್ಞರು, ಆರು (6) ನುರಿತ ವೈದ್ಯರು, ಆರು (6) ಮಂದಿ ದಾದಿಯರು ಹಾಗು ನಾಲಕ್ಕು (4) ಅರಿವಳಿಕೆ ತಂತ್ರಜ್ಞರ ನೆರವಿನಲ್ಲಿ ನಡೆಸಲಾಯಿತು' ಎಂದು ಮಕ್ಕಳ ಶಸ್ತ್ರಚಿಕಿತ್ಸೆ ವಿಭಾಗದ ಮುಖ್ಯಸ್ಥ, ಹಿರಿಯ ಕನ್ಸಲ್ಟಂಟ್ ಡಾ. ಸಂಜಯ್ ರಾವ್ ಅವರು ಹೇಳಿದರು.

Conjoined twins from Nigeria successfully separated at Narayana Health City

ಬೆಂಗಳೂರಿನ ನಾರಾಯಣ ಹೆಲ್ತ್ ಮಕ್ಕಳ ಶಸ್ತ್ರಚಿಕಿತ್ಸೆ ವಿಭಾಗವು ಸಯಾಮಿ ಮಕ್ಕಳಿಗೆ ಚಿಕಿತ್ಸೆ ನೀಡಿದ ಅನೇಕ ಅನುಭವ ಹೊಂದಿವೆ. ಇದುವರೆಗೆ ಇಂಥ ಆರು (6) ಸಂಕೀರ್ಣ ಪ್ರಕರಣಗಳನ್ನು ಯಶಸ್ವಿಯಾಗಿ ನಿಭಾಯಿಸಿದೆ. ಸಯಾಮಿ ಅವಳಿಗಳನ್ನು ಪ್ರತ್ಯೇಕಗೊಳಿಸಿದ ಪ್ರಕರಣಗಳು ಇದರಲ್ಲಿ ಸೇರಿವೆ.

ನಾರಾಯಣ ಹೆಲ್ತ್ ಕುರಿತು: ವಿಶ್ವದಲ್ಲಿ ದೊರೆಯುವ ಸೂಪರ್ ಸ್ಪೆಷಾಲಿಟಿ ಸೌಲಭ್ಯಗಳ ಜೊತೆಗೆ ನಾರಾಯಣ ಹೆಲ್ತ್ ಈಗ ಎಲ್ಲ ಚಿಕಿತ್ಸೆಯ ಅಂತಿಮ ತಾಣವಾಗಿದೆ. ಡಾ. ದೇವಿಶೆಟ್ಟಿ ಅವರು ಬೆಂಗಳೂರಿನಲ್ಲಿ 2000ರಲ್ಲಿ 225 ಹಾಸಿಗೆಗಳ ಸಾಮಥ್ರ್ಯದೊಂದಿಗೆ ಇದನ್ನು ಆರಂಭಿಸಲಾಗಿದ್ದು, ಈಗ 23 ನೆಟ್‍ವರ್ಕ್ ಆಸ್ಪತ್ರೆಗಳು, 7 ಹೃದ್ರೋಗ ಕೇಂದ್ರಗಳಿವೆ. ಕೇಮನ್ ಉಪಖಂಡದಲ್ಲಿ ಆಸ್ಪತ್ರೆಯನ್ನು ಹೊಂದಿದೆ. ಎಲ್ಲ ಕೇಂದ್ರಗಳಿಂದ 5,900 ಹಾಸಿಗೆಗಳಿದ್ದು, ಈಗ ಸಾಮರ್ಥ್ಯದ 6,800 ಹಾಸಿಗೆಗಳಿಗೆ ಏರಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Hailing from Nigeria Six month old James and John are back to their playful self after the corrective surgery at Narayana Health City. The babies were omphalopagus twins, The doctors at Narayana Health City have successfully separated them giving them a new lease of life.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ