ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿದ್ದು, ಪರಂ, ಡಿಕೆಶಿ ಬೆಂಬಲಿಗರಿಗೆ ಮಾತ್ರ ಅಧಿಕಾರ: ನಿಷ್ಠರ ಆಕ್ರೋಶ

|
Google Oneindia Kannada News

Recommended Video

ಕೆ ಸಿ ವೇಣುಗೋಪಾಲ್ ಉತ್ತರಿಸಲಾಗದ ಪ್ರಶ್ನೆಯನ್ನ ಕೇಳಿದ ಪಕ್ಷದ ಕಾರ್ಯಕರ್ತ | Oneindia Kannada

ಬೆಂಗಳೂರು, ಸೆಪ್ಟೆಂಬರ್ 24: ಸಿದ್ದರಾಮಯ್ಯನವರ ಹಿಂಬಾಲಕರಿಗೆ, ಪರಮೇಶ್ವರ್ ಅನುಯಾಯಿಗಳಿಗೆ, ಡಿ.ಕೆ.ಶಿವಕುಮಾರ್ ಸಪೋರ್ಟರ್ಸ್‌ಗೆ ಮಾತ್ರ ಎಮ್ಮೆಲ್ಲೆ, ಎಮ್ಮೆಲ್ಸಿ, ರಾಜ್ಯಸಭಾ ಸದಸ್ಯ ಸ್ಥಾನ, ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ಕೊಡೋದಾದ್ರೆ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಕಿಮ್ಮತ್ತೇ ಇಲ್ವಾ?

ಹೀಗೊಂದು ಬಹಿರಂಗ ಪ್ರಶ್ನೆಯನ್ನು ನಿಷ್ಠಾವಂತ ಕಾರ್ಯಕರ್ತರು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರ ಮುಂದಿಟ್ಟಿದ್ದಾರೆ. ಈ ಪ್ರಶ್ನೆ ಮುಖಕ್ಕೆ ರಾಚಿದ ಕೂಡಲೇ ವೇಣುಗೋಪಾಲ್ ಕಕ್ಕಾಬಿಕ್ಕಿಯಾದ ಘಟನೆ ಬೆಂಗಳೂರಿನ ಖಾಸಗಿ ಹೊಟೆಲ್‌ನಲ್ಲಿ ನಡೆದ ಕಾಂಗ್ರೆಸ್ ಮುಂಚೂಣಿ ಘಟಕಗಳ ಹಾಗೂ ಜಿಲ್ಲಾ ಘಟಕಗಳ ಪದಾಧಿಕಾರಿಗಳ ಸಭೆಯಲ್ಲಿ ನಡೆದಿದೆ.

ಸಂಪುಟಕ್ಕೆ ಮೇಜರ್ ಸರ್ಜರಿ? ಪರಮೇಶ್ವರ್, ಡಿಕೆಶಿ ಖಾತೆ ಬದಲಾವಣೆ? ಸಂಪುಟಕ್ಕೆ ಮೇಜರ್ ಸರ್ಜರಿ? ಪರಮೇಶ್ವರ್, ಡಿಕೆಶಿ ಖಾತೆ ಬದಲಾವಣೆ?

ಕೇವಲ ಮುಂಚೂಣಿ ನಾಯಕರ ಬಾಲಬಡುಕರಿಗೆ ಮಾತ್ರ ಎಲ್ಲ ಹಂತಗಳಲ್ಲಿ ಅವಕಾಶ ಸಿಗುತ್ತಿದ್ದು, ಪಕ್ಷದ ನಿಷ್ಠಾವಂತ ನಾಯಕರಿಗೆ ಯಾವುದೇ ಬೆಲೆ ಇಲ್ಲದಂತಾಗಿದೆ ಎಂದು ಕಾಂಗ್ರೆಸ್ ಪದಾಧಿಕಾರಿಗಳು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಎದುರೇ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶ ಸ್ಫೋಟ, ದೂರಿದರು ಎಲ್ಲ ನಾಯಕರ ಕಪಟ

ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶ ಸ್ಫೋಟ, ದೂರಿದರು ಎಲ್ಲ ನಾಯಕರ ಕಪಟ

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡುವ ವೇಳೆ ಈ ಘಟನೆ ನಡೆದಿದೆ. ಕಾಂಗ್ರೆಸ್ ಪಕ್ಷ ಶಿಸ್ತಿನ ಪಕ್ಷ. ಪಕ್ಷದ ಕಾರ್ಯಕರ್ತರು, ಪದಾಧಿಕಾರಿಗಳು, ಮುಖಂಡರು ಬಹಿರಂಗವಾಗಿ ಮಾಧ್ಯಮಗಳಿಗೆ ಮಾತನಾಡಬಾರದು. ವಿಶೇಷವಾಗಿ ಸಮ್ಮಿಶ್ರ ಸರ್ಕಾರ ಅಸ್ತಿತ್ವದಲ್ಲಿರುವ ಸಂದರ್ಭದಲ್ಲಂತೂ ಸರ್ಕಾರ ಮತ್ತು ಪಕ್ಷಕ್ಕೆ ಮುಜುಗರ ಆಗದ ರೀತಿಯಲ್ಲಿ ಎಲ್ಲರೂ ಕೆಲಸ ಮಾಡಬೇಕು. ನಿಷ್ಕ್ರಿಯರಾಗಿರುವ ಪದಾಧಿಕಾರಿಗಳು ತೆಗೆದು, ಸಕ್ರಿಯರಾಗಿರುವವರನ್ನು ನೇಮಕ ಮಾಡಲಾಗುವುದು ಎಂದು ದಿನೇಶ್ ಗುಂಡೂರಾವ್ ಹೇಳಿದರು.

ಮನೆಗೆ ಕರೆದು ಡಿ.ಕೆ.ಶಿವಕುಮಾರ್‌ಗೆ ಬುದ್ಧಿವಾದ ಹೇಳಿದ ಸಿದ್ದರಾಮಯ್ಯ ಮನೆಗೆ ಕರೆದು ಡಿ.ಕೆ.ಶಿವಕುಮಾರ್‌ಗೆ ಬುದ್ಧಿವಾದ ಹೇಳಿದ ಸಿದ್ದರಾಮಯ್ಯ

ಕಾಂಗ್ರೆಸ್ ಎಂಎಲ್ಎ, ಎಂಎಲ್ ಸ ಆಗೋರು ಯಾರು?

ಕಾಂಗ್ರೆಸ್ ಎಂಎಲ್ಎ, ಎಂಎಲ್ ಸ ಆಗೋರು ಯಾರು?

ಆಗ ಕೆಲ ಪದಾಧಿಕಾರಿಗಳು, ಸಿದ್ದರಾಮಯ್ಯ ಅವರು ಸಿಎಂ ಆದಾಗ ಅವರ ಬೆಂಬಲಿಗರಿಗೆ ಹುದ್ದೆ ಕೊಡಲಾಗುತ್ತದೆ. ಈಗ ಪರಮೇಶ್ವರ್ ಅವರು ಡಿಸಿಎಂ ಆಗಿದ್ದು, ಅವರ ಬೆಂಬಲಿಗರಿಗೆ ಹುದ್ದೆ ಕೊಡಲಾಗುತ್ತಿದೆ. ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಇರುವುದರಿಂದ ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಕೇಳುವವರೇ ಇಲ್ಲದಂತಾಗಿದೆ. ಶಿಸ್ತಿನ ಸಿಪಾಯಿ ಆಗಿರುವುದು ಕೇವಲ ಕಾರ್ಯಕರ್ತರಿಗೆ ಅನ್ವಯಿಸುತ್ತದೆ. ಮೇಲ್ಮಟ್ಟದ ನಾಯಕರಿಗೆ ಅನ್ವಯಿಸುವುದೇ ಇಲ್ಲ ಎಂದು ಅಸಮಾಧಾನ ಹೊರ ಹಾಕಿದರು ಎಂದು ಪಕ್ಷದ ಮೂಲಗಳು ತಿಳಿಸಿವೆ.

ಶಿಸ್ತು ಎಂದರೆ ಮೌನವಾಗಿರಬೇಕೆ?

ಶಿಸ್ತು ಎಂದರೆ ಮೌನವಾಗಿರಬೇಕೆ?

ಆಗ ದಿನೇಶ್ ಗುಂಡೂರಾವ್ ಸಮಾಧಾನಪಡಿಸಲು ಯತ್ನಿಸಿ, ಪಕ್ಷದಲ್ಲಿ ಎಲ್ಲರಿಗೂ ಅವಕಾಶ ಇರುತ್ತದೆ ಎಂದು ಸಮರ್ಥಿಸಿಕೊಳ್ಳಲು ಮುಂದಾದರು ಎನ್ನಲಾಗಿದೆ. ಆದರೆ ಇದಕ್ಕೆ ಮತ್ತಷ್ಟು ಪದಾಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿ, ಕೆಲವೇ ಕೆಲವರಿಗೆ ಅಧಿಕಾರ ಸಿಗುತ್ತದೆ. ನಿಷ್ಠಾವಂತರಿಗೆ ಪಕ್ಷದಲ್ಲಿ ಕೇಳುವವರೇ ಇಲ್ಲ ಎಂಬ ಆಕ್ಷೇಪ ಪದೇ ಪದೇ ಕೇಳಿಬಂತು.

ಕಾಂಗ್ರೆಸ್ ಶಿಸ್ತಿನ ಪಕ್ಷ ಎಂದ ಯಾರಿಗೂ ಅನ್ಯಾಯ ಆಗೊಲ್ಲ ಎಂದು ವೇಣು

ಕಾಂಗ್ರೆಸ್ ಶಿಸ್ತಿನ ಪಕ್ಷ ಎಂದ ಯಾರಿಗೂ ಅನ್ಯಾಯ ಆಗೊಲ್ಲ ಎಂದು ವೇಣು

ಈ ವೇಳೆ ಮಧ್ಯಪ್ರವೇಶಿಸಿದ ವೇಣುಗೋಪಾಲ್ ಸಮಾಧಾನಪಡಿಸಿ, ಪಕ್ಷದ ಹೈಕಮಾಂಡ್ ಎಲ್ಲವನ್ನೂ ಗಮನಿಸುತ್ತದೆ. ಯಾರಿಗೂ ಅನ್ಯಾಯ ಆಗಲು ಬಿಡುವುದಿಲ್ಲ. ಆದರೆ, ಸಂಯಮದಿಂದ ಪಕ್ಷವನ್ನು ಬಲಪಡಿಸಬೇಕು. ಸದ್ಯ ಲೋಕಸಭಾ ಚುನಾವಣೆಯತ್ತ ಗಮನಹರಿಸಿ, ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕೆಂದು ಮನವಿ ಮಾಡಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಏಐಸಿಸಿ ಕಾರ್ಯದರ್ಶಿಗಳಾದ ವಿಷ್ಣುನಾಥನ್, ಮಧು ಯಕ್ಷಿಗೌಡ, ಮಾಣಿಕ್ಯಂ ಠಾಕೂರ್, ಡಾ.ಸಾಕೆ ಶೈಲಜನಾಥ್, ಯಶೋಮತಿ ಠಾಕೂರ್ ಮತ್ತಿತರರು ಪಾಲ್ಗೊಂಡಿದ್ದರು.

English summary
Many Congress workers have strongly objected party state in charge K.C.Venugopal about discrimination in providing opportunities to the honest workers in government nominations and etc.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X