ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಜಧಾನಿಯಲ್ಲಿ ಕೊಂಚ ಕಾಂಗ್ರೆಸ್‌ ಮೇಲುಗೈ

By Nayana
|
Google Oneindia Kannada News

ಬೆಂಗಳೂರು, ಮೇ 16: ಬೆಂಗಳೂರಿನಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ಸಮಬಲ ಕಾಯ್ದುಕೊಂಡಿದೆ. ಯಾರೂ ಏಳಲಿಲ್ಲ ಯಾರೂ ಬೀಳಲಿಲ್ಲ ಆದರೆ ಜೆಡಿಎಸ್‌ಗೆ ಅಲ್ಪ ನಷ್ಟವಾಗಿದೆ.

ಅತಂತ್ರ ವಿಧಾನಸಭೆ ಸೃಷ್ಟಿಯಾದರೆ ಜೆಡಿಎಸ್‌ ಕಿಂಗ್‌ ಮೇಕರ್‌ ಆಗಬಹುದು ಎಂಬ ಲೆಕ್ಕಾಚಾರ ನಡೆದಿತ್ತು. ಆದರೆ ಈಗ ತಾನೇ ಕಿಂಗ್ ಆಗುವ ಅವಕಾಸ ಒದಗಿಬಂದಿದೆ. ರಾಜರಾಜೇಶ್ವರಿನಗರ ಮತ್ತು ಜಯನಗರ
ವಿಧಾನಸಭಾ ಕ್ಷೇತ್ರಗಳನ್ನು ಹೊರತುಪಡಿಸಿ 26 ಕ್ಷೇತ್ರಗಳನ್ನು ಲೆಕ್ಕಕ್ಕೆ ತೆಗೆದುಕೊಂಡರೆ ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್‌ 13 ಕ್ಷೇತ್ರಗಳಲ್ಲಿ ಬಿಜೆಪಿ 11 ಹಾಗೂ ಜೆಡಿಎಸ್‌ 2 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಈ ಅಂಕಿ ಅಂಶಗಳನ್ನು ಗಮನಿಸಿದರೆ ಜೆಡಿಎಸ್‌ ಒಂದು ಕ್ಷೇತ್ರವನ್ನು ಕಳೆದುಕೊಂಡಿದೆ. ಕಾಂಗ್ರೆಸ್‌ ಸರ್ಕಾರದ ಹಲವು ಸಚಿವರು ಸೋತು ಸುಣ್ಣವಾಗಿದ್ದರೆ. ನಗರದಲ್ಲಿರುವ ಐವರು ಸಚಿವರೂ ಗೆದ್ದಿರುವುದು ವಿಶೇಷ.

ಬೆಂಗಳೂರಿನಲ್ಲಿ ಕಾಂಗ್ರೆಸ್‌-ಬಿಜೆಪಿ ಸಮಬಲ ಪ್ರದರ್ಶನ!ಬೆಂಗಳೂರಿನಲ್ಲಿ ಕಾಂಗ್ರೆಸ್‌-ಬಿಜೆಪಿ ಸಮಬಲ ಪ್ರದರ್ಶನ!

ಹೆಬ್ಬಾಳ ಬಿಜೆಪಿಯ ಭದ್ರಕೋಟೆ ಎಂದು ಪರಿಗಣಿಸಲ್ಪಟ್ಟಿತ್ತು. ಕಳೆದ ಉಪ ಚುನಾವಣೆಯಲ್ಲೂ ಕಾಂಗ್ರೆಸ್‌ಬಿಜೆಪಿ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿತ್ತು, ಆಗ ಬಿಜೆಪಿಯ ವೈಎ ನಾರಾಯಣ ಗೆಲುವು ಸಾಧಿಸಿದ್ದರು. ಕಾಂಗ್ರೆಸ್‌ನ ಭೈರತಿ ಸುರೇಶ್‌ ಮತ್ತು ಅವರ ಮಧ್ಯೆ ಪೈಪೋಟಿ ಏರ್ಪಟ್ಟಿತ್ತು. ಅಂತಿಮವಾಗಿ ಗೆಲುವು ಸುರೇಶ್‌ ಪಾಲಾಗಿದೆ.

ಕಾಂಗ್ರೆಸ್‌ 2 ಕ್ಷೇತ್ರವನ್ನು ಬಿಜಪಿ ನೀಡಿ ಮೂರು ಕ್ಷೇತ್ರವನ್ನು ವಶಪಡಿಸಿಕೊಂಡಿದೆ

ಕಾಂಗ್ರೆಸ್‌ 2 ಕ್ಷೇತ್ರವನ್ನು ಬಿಜಪಿ ನೀಡಿ ಮೂರು ಕ್ಷೇತ್ರವನ್ನು ವಶಪಡಿಸಿಕೊಂಡಿದೆ

ಪಕ್ಷಗಳ ವಯಕ್ತಿಕ ಲಾಭ-ನಷ್ಟಗಳನ್ನು ಲೆಕ್ಕ ಹಾಕುವುದಾದರೆ, ಕಾಂಗ್ರೆಸ್‌ ಎರಡು ಕ್ಷೇತ್ರಗಳನ್ನು ಕಮಲಕ್ಕೆ ಬಿಟ್ಟುಕೊಟ್ಟು ಅದರಿಂದ ಒಂದನ್ನು ಕಿತ್ತುಕೊಂಡಿದೆ. ಕಾಂಗ್ರೆಸ್‌ ಚಿಕ್ಕಪೇಟೆ ಹಾಗೂ ಗೋವಿಂದರಾಜನಗರ ಕ್ಷೇತ್ರಗಳನ್ನು ಬಿಜೆಪಿಗೆ ಬಿಟ್ಟುಕೊಟ್ಟಿದ್ದರೆ ಅತ್ತ ಹೆಬ್ಬಾಳವನ್ನು ಬಿಜೆಪಿಯಿಂದ ಕಿತ್ತುಕೊಳ್ಳುವುದರ ಜತೆಗೆ ಜೆಡಿಎಸ್‌ ವಶವಾಗಿದ್ದ ಪುಲಕೇಶಿನಗರ ಮತ್ತು ಚಾಮರಾಜಪೇಟೆಯನ್ನು ತನ್ನ ವಶಕ್ಕೆ ತೆಗೆದುಕೊಂಡಿದೆ.

ಬೆಂಗಳೂರಿನಲ್ಲಿ ನಷ್ಟ ಅನುಭವಿಸಿದ ಜೆಡಿಎಸ್‌

ಬೆಂಗಳೂರಿನಲ್ಲಿ ನಷ್ಟ ಅನುಭವಿಸಿದ ಜೆಡಿಎಸ್‌

2013ರಲ್ಲಿ ಜೆಡಿಎಸ್‌ ಪುಲಕೇಶಿನಗರ ಚಾಮರಾಜಪೇಟೆ ಮತ್ತು ಮಹಾಲಕ್ಷ್ಮೀ ಲೇಔಟ್‌ಗಳಲ್ಲಿ ಗೆಲುವು ಸಾಧಿಸಿತ್ತು. ಆದರೆ ಬದಲಾದ ಸ್ಥಿತಿಯಲ್ಲಿ ಪುಲಕೇಶಿನಗರದಿಂದ ಅಖಂಡ ಶ್ರೀನಿವಾಸಮೂರ್ತಿ ಹಾಗೂ ಚಾಮರಾಜಪೇಟೆಯಿಂದ ಜಮೀರ್‌ ಅಹಮದ್‌ ಖಾನ್‌ ಅವರುಗಳು ಪಕ್ಷಾಂತರ ಮಾಡಿ, ಕಾಂಗ್ರೆಸ್‌ ನಿಂದ ಗೆದ್ದುಕೊಂಡು ಬಂದಿದ್ದಾರೆ. ಆ ಮೂಲಕ ಅವರು ತಮ್ಮ ವಯಕ್ತಿಕ ವರ್ಚಸ್ಸನ್ನು ಸಾಭೀತುಪಡಿಸಿದ್ದಾರೆ.

ಮಹಾರಾಣಿ ಕಾಲೇಜಿನಲ್ಲಿ ಫಲಿತಾಂಶ ತಡ

ಮಹಾರಾಣಿ ಕಾಲೇಜಿನಲ್ಲಿ ಫಲಿತಾಂಶ ತಡ

ಮಹಾರಾಣಿ ಕಾಲೇಜಿನ ಮತ ಎಣಿಕೆ ಕೇಂದ್ರವನ್ನು ಮಾದರಿ ಕೇಂದ್ರವೆಂದು ಪರಿಗಣಿಸಲಾಗಿತ್ತು. ಆದರೆ ಉಳಿದ ನಾಲ್ಕು ಕೇಂದ್ರಗಳಿಗೆ ಹೋಲಿಸಿದರೆ ಈ ಕೇಂದ್ರದ ಫಲಿತಾಂಶ ತಡವಾಗಿ ಹೊರಬಿದ್ದಿತ್ತು. ಕೇಂದ್ರದಲ್ಲಿ ಒಳಗೆ ಅಭ್ಯರ್ಥಿಗಳ ಕಡೆಯವರಿಗೆ ಹಾಗೂ ಮಾಧ್ಯಮದವರಿಗೆ ವೀಕ್ಷಿಸಲು ಎರಡು ಎಲ್‌ಇಡಿ ಪರದೆಗಳನ್ನು ಅಳವಡಿಸಲಾಗಿತ್ತು.

ಬೆಂಗಳೂರಿನಲ್ಲಿ ಮೇಯರ್‌ ಹಾಗೂ ಮಾಜಿ ಮೇಯರ್‌ ಪರಾಭವ

ಬೆಂಗಳೂರಿನಲ್ಲಿ ಮೇಯರ್‌ ಹಾಗೂ ಮಾಜಿ ಮೇಯರ್‌ ಪರಾಭವ

ಸಿವಿ ರಾಮನ್‌ನಗರ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಮೇಯರ್‌ ಸಂಪತ್‌ರಾಜ್‌ ಪರಾಭವಗೊಂಡಿದ್ದಾರೆ. ಕ್ಷೇತ್ರದಲ್ಲಿ ಬಿಜೆಪಿಯ ಎಸ್‌.ರಘು ಗೆಲುವಿನ ನಗೆ ಬೀರಿದ್ದಾರೆ. ರಾಜಾಜಿನಗರದಲ್ಲಿ ಕಾಂಗ್ರೆಸ್‌ನಿಂದ ಮಾಜಿ ಮೇಯರ್‌ ಪದ್ಮಾವತಿ ಮಾಜಿ ಸಚಿವ ಎಸ್‌. ಸುರೇಶ್‌ ವಿರುದ್ಧ ಪರಾಭವಗೊಂಡಿದ್ದಾರೆ.

English summary
With triumphing 13 seats out of 26 in Bengaluru city, previously ruling Congress party has tightened its grip as Bjp was satisfied with 11 seats and JDS won only two seats as well.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X