ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರ್ನಾಟಕ ವಿಧಾನಸಭೆಯಲ್ಲಿ 79ಕ್ಕೇರಿದ ಕಾಂಗ್ರೆಸ್ ಸಂಖ್ಯಾಬಲ

By Nayana
|
Google Oneindia Kannada News

ಬೆಂಗಳೂರು, ಜೂನ್ 13: ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯರೆಡ್ಡಿ ಜಯಗಳಿಸುವ ಮೂಲಕ ಕರ್ನಾಟಕ ವಿಧಾನಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಒಟ್ಟು ಸಾಮರ್ಥ್ಯ 79ಕ್ಕೆ ಏರಿದೆ.

ಕಳೆದ ವಿಧಾನಸಭೆ ಚುನಾವಣೆ ವೇಳೆ ಒಟ್ಟು 222 ಕ್ಷೇತ್ರಗಳಿಗೆ ಮತದಾನ ನಡೆದಿತ್ತು. ಆದರೆ ಬೆಂಗಳೂರಿನ ಜಯನಗರ ಮತ್ತು ರಾಜರಾಜೇಶ್ವರಿನಗರ ಕ್ಷೇತ್ರಗಳ ಚುನಾವಣೆ ಬೇರೆ ಬೇರೆ ಕಾರಣಗಳಿಗಾಗಿ ಮುಂದೂಡಲ್ಪಟ್ಟಿತ್ತು.

 ಗೆದ್ದರೆ ಸೌಮ್ಯಾ ರೆಡ್ಡಿಗೆ ಸಚಿವಸ್ಥಾನ? ಕಾಂಗ್ರೆಸ್ ನಲ್ಲಿ ಮತ್ತೆ ಕಿಚ್ಚು? ಗೆದ್ದರೆ ಸೌಮ್ಯಾ ರೆಡ್ಡಿಗೆ ಸಚಿವಸ್ಥಾನ? ಕಾಂಗ್ರೆಸ್ ನಲ್ಲಿ ಮತ್ತೆ ಕಿಚ್ಚು?

ಈ ಹಿನ್ನೆಲೆಯಲ್ಲಿ ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬಿದ್ದಾಗ 222 ಕ್ಷೇತ್ರಗಳ ಪೈಕಿ ಕಾಂಗ್ರೆಸ್ 78 ಜೆಡಿಎಸ್ 38 ಸ್ಥಾನಗಳಲ್ಲಿ ಜಯಗಳಿಸಿದ್ದವು. ಆದರೆ ಜಮಖಂಡಿ ಕಾಂಗ್ರೆಸ್ ಶಾಸಕ ಸಿದ್ದು ನ್ಯಾಮಗೌಡ ರಸ್ತೆ ಅಪಘಾತದಲ್ಲಿ ನಿಧನ ಹೊಂದಿದ್ದರಿಂದ ಕಾಂಗ್ರೆಸ್ ಬಲ 77ಕ್ಕೆ ಕುಸಿದಿತ್ತು. ಎರಡೂ ಪಕ್ಷಗಳು ಸೇರಿ ಸಮ್ಮಿಶ್ರ ಸರ್ಕಾರ ರಚನೆ ಮಾಡಿದಾಗ ಇತರೆ ಪಕ್ಷದ ಸಾಮರ್ಥ್ಯದ ವಿಧಾನಸಭೆಯಲ್ಲಿ 116ರಷ್ಟಿತ್ತು.ಒಬ್ಬರು ಪಕ್ಷೇತರರು ಕೂಡ ಕೈಜೋಡಿಸಿದ್ದರಿಂದ ಸಮ್ಮಿಶ್ರ ಸರ್ಕಾರದ ಬಲ 118ರಷ್ಟು ಇತ್ತು.

Congress strength increases by 79 in Karnataka assembly

ಮುಖ್ಯಮಂತ್ರಿ ಕುಮಾರಸ್ವಾಮಿ ಎರಡು ಕ್ಷೇತ್ರದಲ್ಲಿ ಜಯಗಳಿಸಿದ್ದರಿಂದ ಜೆಡಿಎಸ್‌ನ ಸಂಖ್ಯಾಬಲ 37ಕ್ಕೆ ಇಳಿದ ಪರಿಣಾಮ ಇದೀಗ ಸರ್ಕಾರದ ಬಲ 117 ಆಗಿದೆ.

ಈ ಹಿನ್ನೆಲೆಯಲ್ಲಿ ರಾಮನಗರ ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಬೇಕಿದೆ. ಈ ಮಧ್ಯೆ ಜಯನಗರ, ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರಗಳ ಚುನಾವಣೆಯಲ್ಲಿ ಎರಡೂ ಕಡೆ ಕಾಂಗ್ರೆಸ್‌ ಜಯಗಳಿಸಿರುವುದರಿಂದ 78ರಷ್ಟಿದ್ದ ಕಾಂಗ್ರೆಸ್‌ನ ಸಂಖ್ಯಾಬಲ ಈಗ 79ಕ್ಕೆ ಏರಿದಂತಾಗಿದೆ.

ಜಯನಗರದ ಗೆಲುವಿನಲ್ಲಿ ಮೈತ್ರಿ ಸರ್ಕಾರದ ಪಾತ್ರವೇನು?ಜಯನಗರದ ಗೆಲುವಿನಲ್ಲಿ ಮೈತ್ರಿ ಸರ್ಕಾರದ ಪಾತ್ರವೇನು?

ಮತ್ತೊಂದೆಡೆ ಜೆಡಿಎಸ್‌ನ 37ರಷ್ಟು ಸಂಖ್ಯಾಬಲ ಸಮ್ಮಿಶ್ರ ಸರ್ಕಾರಕ್ಕಿರುವುದರಿಂದ ಅದರರ ಸಂಖ್ಯಾಬಲ 117ಕ್ಕೆ ಏರಿದಂತಾಗಿದೆ. ಮುಂದಿನ ತಿಂಗಳು ಜೂನ್ ಎರಡನೇ ವಾರದ ವೇಳೆಗೆ ನಡೆಯಲಿರುವ ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಹಾಗು ಬಿಜೆಪಿ ನಡುವೆ ನೇರ ಸ್ಪರ್ಧೆ ಉಂಟಾಗಲಿದ್ದು, ಮುಖ್ಯಮಂತ್ರಿ ಕುಮಾರಸ್ವಾಮಿ ಸೂಚಿಸುವ ಜೆಡಿಎಸ್‌ನ ಅಭ್ಯರ್ಥಿಗೆ ಬೆಂಬಲ ಸೂಚಿಸಲಿದೆ.

Congress strength increases by 79 in Karnataka assembly

ಹೀಗಾಗಿ ಸಮ್ಮಿಶ್ರ ಸರ್ಕಾರದ ಸಂಖ್ಯಾಬಲ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇದ್ದು ಬಿಜೆಪಿ ವಿಧಾನಸಭೆ ಚುನಾವಣೆಯಲ್ಲಿ ಜಯಗಳಿಸಿದ್ದ 104 ಸ್ಥಾನಗಳಿಗೆ ಸೀಮಿತಗೊಂಡಂತಾಗಿದೆ.

ಈ ಮಧ್ಯೆ ಜಯನಗರ ಮತ್ತು ರಾಜರಾಜೇಶ್ವರಿ ಕ್ಷೇತ್ರ ಚುನಾವಣೆ ಬಳಿಕ ಸಮ್ಮಿಶ್ರ ಸರ್ಕಾರದ ಸಂಖ್ಯಾಬಲ 119 ತಲುಪಿದೆ. ಹೀಗಾಗಿ ಬಹುಮತದ ದೃಷ್ಟಿಯಿಂದ ಜೆಡಿಎಸ್ ಕಾಂಗ್ರೆಸ್‌ ಸಮಮ್ಇಶ್ರ ಸರ್ಕಾರ ಮತ್ತಷ್ಟು ಗಟ್ಟಿಗೊಂಡಂತಾಗಿದೆ.

English summary
Tremendous victory in Jayanagar constituency, Congress party total strength has increased to 79 seats in Karnataka assembly. Recently Congress had won Rajarajeshwari Nagar assembly constituency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X