ಹ್ಯಾಕಥಾನ್ ಆಯೋಜಿಸಲು 250 ಇವಿಎಂ ಕೇಳಿದ ರಾಜ್ಯ ಸರ್ಕಾರ

Posted By:
Subscribe to Oneindia Kannada

ಬೆಂಗಳೂರು, ಜನವರಿ 03: ವಿದ್ಯುನ್ಮಾನ ಮತಯಂತ್ರದ ಬಗ್ಗೆ ಅನುಮಾನ ಹೊಂದಿರುವ ರಾಜ್ಯ ಕಾಂಗ್ರೆಸ್ ಸರ್ಕಾರವು ಇವಿಎಂ ಹ್ಯಾಕಥಾನ್ ಆಯೋಜಿಸಲು ಯೋಜಿಸಿದ್ದು, ಈ ಸಂಬಂಧ ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ.

ರಾಜ್ಯದಲ್ಲಿ ಹ್ಯಾಕಥಾನ್ ನಡೆಸಲು ಅನುಮತಿ ಕೋರಿ ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದು ಹ್ಯಾಕತಾನ್ ಆಯೋಜಿಸಲು 250 ವಿದ್ಯುನ್ಮಾನ ಮತಯಂತ್ರವನ್ನು ನೀಡಲು ಕೋರಿದ್ದಾರೆ. ಜೊತೆಗೆ ಇವಿಎಂಗಳನ್ನು ಪರಿಶೀಸಲಿಸುವುದಕ್ಕಾಗಿ ಇರುವ ದಾಖಲೆ ಪತ್ರಗಳು, ಪರೀಕ್ಷೆಯ ವಿಧಾನ ಮತ್ತು ಫಲಿತಾಂಶ, ಸುರಕ್ಷಾ ವಿಧಾನಗಳ ಬಗ್ಗೆ ಮಾಹಿತಿ ನೀಡುವಂತೆಯೂ ಖರ್ಗೆ ಅವರು ಮನವಿ ಮಾಡಿದ್ದಾರೆ.

ಇವಿಎಂ 'ಹ್ಯಾಕಥಾನ್‌' ಗೆ ಅವಕಾಶ ಕೊಡಿ: ಪ್ರಿಯಾಂಕ್ ಖರ್ಗೆ

ಹ್ಯಾಕಥಾನ್ ಆಯೋಜಿಸಲು ತಂತ್ರಪ್ರವೀಣರನ್ನು, ವಿಜ್ಞಾನಿಗಳು, ಕಾರ್ಪೊರೇಟ್, ಆರ್ ಆಂಡ್ ಡಿ ಇನ್ಸಿಟ್ಯೂಟ್, ಸ್ಟಾರ್ಟ್ ಅಪ್ ಮತ್ತು ಪರಿಣಿತರು ಸೇರಿದಂತೆ ರಾಜಕಾರಣಿಗಳು ಈ ಹ್ಯಾಕಥಾನ್‍ನಲ್ಲಿ ಭಾಗವಹಿಸಬೇಕೆಂದು ಆಹ್ವಾನಿಸುತ್ತೇವೆ ಎಂದು ಖರ್ಗೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

Congress planing to organize EVM Hackathon

ಚುನಾವಣಾ ಆಯೋಗ ನಡೆಸುವ ಹ್ಯಾಕಥಾನ್ ನಲ್ಲಿ ರಾಜಕೀಯ ಪಕ್ಷಗಳು ಮಾತ್ರ ಭಾಗವಹಿಸಬಹುದು ಆದರೆ ಕರ್ನಾಟಕದಲ್ಲಿ ನಡೆಯಲಿರುವ ಹ್ಯಾಕಥಾನ್‍ನಲ್ಲಿ ಸಾರ್ವಜನಿಕರು ಭಾಗವಹಿಸಬಹುದಾಗಿದೆ.

ರಾಜಕೀಯ ಪಕ್ಷಗಳ ಜತೆಗೆ ಇಲ್ಲಿನ ಯುವ ಪ್ರತಿಭೆಗಳಿಗೂ ಅವಕಾಶ ನೀಡಬೇಕು. ಕೇವಲ ರಾಜಕೀಯ ಉದ್ದೇಶದಿಂದ ಕೂಡಿದ ಹ್ಯಾಕಥಾನ್ ಅಲ್ಲ ಹಾಗಾಗಿ ಈ ಹ್ಯಾಕಥಾನ್‌ನಲ್ಲಿ ಸಾರ್ವಜನಿಕರಿಗೂ ಅವಕಾಶ ಕಲ್ಪಿಸಲಾಗಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka IT BT minister Priyan Karge wrote letter to election commission requesting to give 250 EVM's to organize Hackathon.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ