ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಒಂದು ದೇಶ, ಒಂದು ಚುನಾವಣೆ ಸಿದ್ಧಾಂತಕ್ಕೆ ಕಾಂಗ್ರೆಸ್‌ ತೀವ್ರ ವಿರೋಧ

By Nayana
|
Google Oneindia Kannada News

ಬೆಂಗಳೂರು, ಜು.12: ದೇಶದಲ್ಲಿ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗೆ ಏಕ ಕಾಲಕ್ಕೆ ಚುನಾವಣೆ ನಡೆಯುವುದನ್ನು ಕಾಂಗ್ರೆಸ್‌ ಪಕ್ಷ ತೀವ್ರವಾಗಿ ವಿರೋಧಿಸಿದ್ದು, ಇಂತಹ ಏಕರೂಪ ಚುನಾವಣೆಗಳಿಂದ ಪ್ರಾದೇಶಿಕ ಪಕ್ಷಗಳು ಸಂಪೂರ್ಣವಾಗಿ ನಾಶವಾಗಲಿದೆ ಎಂದು ಕಾಂಗ್ರೆಸ್‌ ಆತಂಕ ವ್ಯಕ್ತಪಡಿಸಿದೆ.

ನಗರದ ಟೌನ್‌ಹಾಲ್‌ನಲ್ಲಿ ಗುರುವಾರ ಸಮಂಜಸ ಸಂಸ್ಥೆ ಆಯೋಜಿಸಿದ್ದ ಏಕ ಕಾಲದಲ್ಲಿ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ ಸ್ಥಿತಿ-ಗತಿ ಕುರಿತ ವಿಚಾರ ಮಂಥನ ಕಾರ್ಯ ಕಾರ್ಯದಲ್ಲಿ ಹಿರಿಯ ನಾಯಕ, ಸಂಸದ ಜೈರಾಮ್‌ ರಮೇಶ್‌ ಏಕರೂಪ ಚುನಾವಣೆ ನೀತಿಯಿಂದ ಪ್ರಾದೇಶಿಕ ಪಕ್ಷಗಳು ಸಂಪೂರ್ಣ ನಾಶವಾಗಲಿದೆ ಇದರಿಂದ ಬಹುಸಂಸ್ಕೃತಿ ಭಾರತ ಅಸ್ತಿತ್ವಕ್ಕೆ ಭಾರಿ ಗಂಢಾಂತರ ಎದುರಾಗಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಅವಧಿಗೆ ಮುನ್ನ ತೆಲಂಗಾಣ ವಿಧಾನಸಭೆ ಮತ್ತು ಲೋಕಸಭೆಗೂ ಚುನಾವಣೆ?ಅವಧಿಗೆ ಮುನ್ನ ತೆಲಂಗಾಣ ವಿಧಾನಸಭೆ ಮತ್ತು ಲೋಕಸಭೆಗೂ ಚುನಾವಣೆ?

ಹಿಟ್ಲರ್ ನೀತಿ: ಈ ಮೊದಲು ಪ್ರಧಾನಿ ನರೇಂದ್ರ ಮೋದಿ ಜಿಎಸ್ಟಿ ಜಾರಿಗೊಳಿಸಿ, 'ಒಂದು ದೇಶ-ಒಂದು ತೆರಿಗೆ'ಎಂದು ಕರೆ ನೀಡಿದರು.ಆದರೆ,ಮತ್ತೇ ಒಂದು ದೇಶ-ಒಂದೇ ಚುನಾವಣೆ ಎನ್ನುತ್ತಿದ್ದಾರೆ ಎಂದರು.

Congress opposes one nation, one election policy

1930 ಜರ್ಮನಿಯಲ್ಲಿ ಹಿಟ್ಲರ್: ಒಂದೇ ಸಂಸ್ಕೃತಿ, ಒಂದು ಜನಾಂಗ, ಓರ್ವ ನಾಯಕ ಎಂದು‌ ಕರೆ ನೀಡಿದ್ದ.ಇಂತಹ ನೀತಿಗಳನ್ನು ಪ್ರಧಾನಿ ನರೇಂದ್ರ ಮೋದಿ ದೇಶದೊಳಗೆ ಜಾರಿಗೊಳಿಸಲು ಹೊರಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ದೇಶದೊಳಗೆ 2.5 ಲಕ್ಷಕ್ಕೂ ಅಧಿಕ ಗ್ರಾಮ ಪಂಚಾಯತಿಗಳಿವೆ. ಅದೇರೀತಿ, ನಗರಸಭೆ, ವಿಧಾನಸಭೆಗಳಿದ್ದು, ವಿಭಿನ್ನ ಅಭಿಪ್ರಾಯ ಹೊಂದಿವೆ.ಆದರೆ, ಬಿಜೆಪಿ ಮತ್ತು ಸಂಘ ಪರಿವಾರ, ದೇಶಕ್ಕೆ ಸಮವಸ್ತ್ರ ಧರಿಸಲು ಮುಂದಾಗಿದ್ದು,ಇದರಿಂದ ಏಕತೆಗೆ ಧಕ್ಕೆ ಆಗಲಿದೆ ಎಂದರು.

ಬಿಜೆಪಿ ಗೆದ್ದರೆ ಭಾರತ ಹಿಂದು ಪಾಕಿಸ್ತಾನವಾಗುತ್ತೆ: ಶಶಿ ತರೂರ್ಬಿಜೆಪಿ ಗೆದ್ದರೆ ಭಾರತ ಹಿಂದು ಪಾಕಿಸ್ತಾನವಾಗುತ್ತೆ: ಶಶಿ ತರೂರ್

ಕಾಂಗ್ರೆಸ್ ಎಂದೂ ಚುನಾವಣೆ ಯಲ್ಲಿ ಗೆಲುವು ಸಾಧಿಸಲು ಹೋಗಲಿಲ್ಲ.ಬದಲಾಗಿ, ಸಿದ್ದಾಂತ ಗಳನ್ನು ಉಳಿಸಲು ಚುನಾವಣೆಯಲ್ಲಿ ಸ್ಪರ್ಧಿಸಿದೆ ಎಂದ ಅವರು, ಏಕರೂಪ ನೀತಿಗಳಿಂದ ಪ್ರಾದೇಶಿಕ ರಾಜಕೀಯ ಪಕ್ಷಗಳು ನಾಶವಾಗಲಿದೆ ಎಂದು ತಿಳಿಸಿದರು.

English summary
Senior congressman Jairam Ramesh has strongly opposed one nation, one election policy alleging that regional party would be vanished if the same policy adopted.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X