ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಧಾನ ಸೌಧವನ್ನು ಪಾರಂಪರಿಕ ಕಟ್ಟಡ ಎಂದು ಘೋಷಿಸಲು ಒತ್ತಾಯ

By Nayana
|
Google Oneindia Kannada News

ಬೆಂಗಳೂರು, ಜು.12: ವಿಧಾನಸೌಧವನ್ನು ಪಾರಂಪರಿಕ ಕಟ್ಟಡವೆಂದು ಘೋಷಿಸಿದಾಗ ಮಾತ್ರ ನವೀಕರಣದ ಹೆಸರಿನಲ್ಲಿ ವಿಧಾನಸೌಧ ಕೊಠಡಿಗಳನ್ನು ಒಡೆಯುವುದು ನಿಲ್ಲಿಸಬಹುದು ಎಂದು ಪರಿಷತ್‌ನ ಕಾಂಗ್ರೆಸ್‌ ಸದಸ್ಯ ಗೋವಿಂದರಾಜು ಹೇಳಿದರು.

ಗೋವಿಂದರಾಜು ಅವರ ಪ್ರಸ್ತಾಪಕ್ಕೆ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಕೂಡ ಬೆಂಬಲ ಸೂಚಿಸಿದ್ದಾರೆ, ವಿಧಾನಸೌಧದಲ್ಲಿ ಕೊಠಡಿಗಳನ್ನು ನವೀಕರಣ ಮಾಡುವುದರಿಂದ ಮೂಲ ಸ್ವರೂಪ ಬದಲಾಗುತ್ತದೆ ಆದರೆ ಅದನ್ನು ಪಾರಂಪರಿಕ ಕಟ್ಟಡ ಎಂದು ಘೋಷಿಸಿದರೆ ಕಟ್ಟಡದ ಘನತೆಗೆ ಧಕ್ಕೆ ತರುವ ಕೆಲಸಗಳು ನಡೆಯುವುದಿಲ್ಲ ಎಂದು ಅಭಿಪ್ರಾಯಪಟ್ಟರು.

ಈ ಬಜೆಟ್‌ ಬಿಬಿಎಂಪಿಯದ್ದಾ, ಕರ್ನಾಟಕದ್ದಾ?: ಸದನದಲ್ಲಿ ಹೀಗೊಂದು ಪ್ರಶ್ನೆಈ ಬಜೆಟ್‌ ಬಿಬಿಎಂಪಿಯದ್ದಾ, ಕರ್ನಾಟಕದ್ದಾ?: ಸದನದಲ್ಲಿ ಹೀಗೊಂದು ಪ್ರಶ್ನೆ

ಕೆಂಗಲ್​ ಹನುಮಂತಯ್ಯನವರು ರಾಜ್ಯ ವಿಧಾನಸಭೆಗೆ ಕಟ್ಟಡವೊಂದನ್ನು ನಿರ್ಮಿಸುವಾಗ ವಾಸ್ತುಶಿಲ್ಪ ವಿಚಾರದಲ್ಲಿ ಅತ್ಯಂತ ಎಚ್ಚರ ವಹಿಸಿದ್ದರು. ಈ ಕಟ್ಟಡ ಮುಂದೊಂದು ದಿನ ಐತಿಹಾಸಿಕ, ಪಾರಂಪರಿಕ ಕಟ್ಟಡವಾಗಬಹುದು ಎಂಬ ಮನ್ನೋಟ ಅವರಿಗಿದ್ದಿರಬಹುದು.

Congress MLC urges to heritage status for Vidhana soudha

ಈ ಕಾರಣಕ್ಕೇ ನಿರ್ಮಾಣ ಹಂತದಲ್ಲಿ ಅವರು ಆ ಮಟ್ಟಿಗಿನ ಅಸಕ್ತಿ ವಹಿಸಿರಬಹುದು. ಅದರಂತೆ, ದ್ರಾವಿಡ ಮತ್ತು ಇಂಡೋ ಸಾರ್ಸೆನಿಕ್​ ವಾಸ್ತು ಶಿಲ್ಪದಲ್ಲಿ ವಿಧಾನಸೌಧವನ್ನು ನಿರ್ಮಿಸಿದ್ದರು. ಹೀಗಾಗಿ ಇಂದು ವಿಧಾನಸೌಧವನ್ನು ಕಂಡೊಡನೆ ಸಾವಿರಾರು ವರ್ಷಗಳ ಹಿನ್ನೆಲೆ ಇರುವ ಪಾರಂಪರಿಕ ಕಟ್ಟಡವೇನೋ ಎಂದು ಅನಿಸುತ್ತದೆ ಎಂದು ಹೇಳಿದರು.

English summary
Congress MLC Govindraj urges that Vidhana soudha should be declared as heritage site. Every government is altering the vidhana soudha. so need to take this kind of action.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X