ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭಿನ್ನಮತೀಯ ಶಾಸಕರ ಜೊತೆ ಸಭೆ ನಡೆಸಲಿರುವ ಸಿದ್ದರಾಮಯ್ಯ

|
Google Oneindia Kannada News

ಬೆಂಗಳೂರು, ಜೂನ್ 14: ಸಚಿವ ಸಂಪುಟ ರಚನೆ ನಂತರ ಬಂಡಾಯವೆದ್ದಿರುವ ಕೆಲವು ಶಾಸಕರ ಮನವೊಲಿಸುವ ಸಲುವಾಗಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಮತ್ತು ಶಾಸಕಾಂಗ ಪಕ್ಷದ ಅಧ್ಯಕ್ಷ ಸಿದ್ದರಾಮಯ್ಯ ಭಿನ್ನಮತೀಯ ಶಾಸಕರೊಂದಿಗೆ ಸಭೆ ನಡೆಸಲಿದ್ದಾರೆ.

ಭಿನ್ನಮತೀಯರೊಂದಿಗೆ ಸಭೆ ನಡೆಸುವ ಸಲುವಾಗಿ ಇಂದು(ಜೂನ್ 14) ವೇಣುಗೋಪಾಲ್ ಅವರು ದೆಹಲಿಯಿಂದ ಬೆಂಗಳೂರಿಗೆ ಆಗಮಿಸಲಿದ್ದಾರೆ.

ಬಂಡಾಯ ಶಮನಕ್ಕಾಗಿ ಜೂನ್ 17ರಂದು ಸಚಿವ ಸಂಪುಟ ವಿಸ್ತರಣೆ ಬಂಡಾಯ ಶಮನಕ್ಕಾಗಿ ಜೂನ್ 17ರಂದು ಸಚಿವ ಸಂಪುಟ ವಿಸ್ತರಣೆ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಸೇರಿದಂತೆ ಹಲವು ನಾಯಕರು ಸೇರಿ ಸಭೆ ನಡೆಸಲಿದ್ದು, ಬಂಡಾಯ ಶಮನಕ್ಕೆ ಪ್ರಯತ್ನಿಸಲಿದ್ದಾರೆ.

Congress meeting to be held in presence of KC Venugopal and Siddaramaiah

ಈಗಾಗಲೇ ಜೂನ್ 17 ರಂದು ಸಂಪುಟ ವಿಸ್ತರಣೆ ನಡೆಯಲಿರುವ ಹಿನ್ನೆಲೆಯಲ್ಲಿ ಅತೃಪ್ತಿರಿಗೂ ಅವಕಾಶ ನೀಡುವ ಸಾಧ್ಯತೆ ಇದೆ.

ವೇಣುಗೋಪಾಲ್ ಅವರ ನೇತೃತ್ವದಲ್ಲಿ ನಡೆಯಲಿರುವ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಕುರಿತೂ ಚರ್ಚೆ ನಡೆಯುವ ಸಾಧ್ಯತೆ ಇದೆ.

ಈ ಮಧ್ಯೆ ಜೂನ್ 13 ರಂದು ಸಹ ಭಿನ್ನಮತೀಯ ಶಾಸಕರು ಸಭೆ ನಡೆಸಿದ್ದಾರೆಂಬ ಮಾಹಿತಿ ಲಭ್ಯವಾಗಿದೆ.

ಒಟ್ಟಿನಲ್ಲಿ ವೇಣುಗೋಪಾಲ್ ಅವರು, ಅತೃಪ್ತ ಶಾಸಕರಾದ ಎಂ ಬಿ ಪಾಟೀಲ, ಸತೀಶ್ ಜಾರಕಿಹೊಳಿ, ಶಾಮನೂರು ಶಿವಶಂಕರಪ್ಪ ಅವರ ಮನವೊಲಿಸಲು ಸಫಲರಾಗುತ್ತಾರೆ ಎಂಬುದು ಈಗ ಕುತೂಹಲದ ವಿಷಯವಾಗಿದೆ.

English summary
A meeting for Congress rebel leaders will be held in Bengaluru in AICC general secretary K C Venugopal and EX CM Siddaramaiah's presence.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X