ಕಾಂಗ್ರೆಸ್ ಮುಖಂಡ ಮದನ್ ಪಟೇಲ್ ಗೆ ಜೀವಬೆದರಿಕೆ

Posted By: Gururaj
Subscribe to Oneindia Kannada

ಬೆಂಗಳೂರು, ಆ.07 : ನಿರ್ಮಾಪಕ, ಕಾಂಗ್ರೆಸ್ ಮುಖಂಡ ಮದನ್ ಪಟೇಲ್ ಜೀವ ಬೆದರಿಕೆ ಇದೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ತಮ್ಮ ಪಕ್ಷದ ಮುಖಂಡರೊಬ್ಬರು ಜೀವ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಡಿಕೆಶಿ ಅಕ್ಕ-ಪಕ್ಕ ಕಾಣಿಸಿಕೊಳ್ಳುತ್ತಿರುವ ಜೆಡಿಎಸ್ ರೆಬೆಲ್ ಶಾಸಕರು

ಸೋಮವಾರ ಮದನ್ ಪಟೇಲ್ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ತಮಗೆ ಜೀವ ಬೆದರಿಕೆ ಇದೆ ಎಂದು ದೂರು ನೀಡಿದ್ದಾರೆ. ಸಿ.ವಿ.ರಾಮನ್ ನಗರದ ರಮೇಶ್ ಎಂಬ ಕಾಂಗ್ರೆಸ್ ಮುಖಂಡರು ತಮಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.

Congress leader Madan Patel fears threat to life complaint to police

ಸಿ.ವಿ.ರಾಮನ್ ನಗರದಲ್ಲಿ ಓಡಾಡಬಾರದು ಎಂದು ರಮೇಶ್‌ ದೂರವಾಣಿ ಕರೆ ಮಾಡಿ ತಮಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಮದನ್ ಪಟೇಲ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಕಳಂಕರಹಿತ ಸರಕಾರಕ್ಕೆ ಮಸಿ ಬಳಿಯಲು ಕೇಂದ್ರ ಯತ್ನ: ಖಾದರ್

ಕಾಂಗ್ರೆಸ್ ಪಕ್ಷದ ಮುಖಂಡರೇ ಜೀವ ಬೆದರಿಕೆ ಹಾಕಿರುವುದರಿಂದ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರಿಗೂ ಮದನ್ ಪಟೇಲ್ ದೂರು ಕೊಟ್ಟಿದ್ದಾರೆ.

ಅಧಿಕೃತವಾಗಿ ಇಂದು ಕಾಂಗ್ರೆಸ್ ಗೆ ಸೇರ್ಪಡೆಯಾದ ಧನಂಜಯ ಕುಮಾರ್

Gujarat Congress MLAs Are Back To Home Town Gujarat | Oneindia Kannada

ನಟ, ನಿರ್ಮಾಪಕ ಮತ್ತು ನಿರ್ದೇಶಕರಾಗಿರುವ ಮದನ್ ಪಟೇಲ್ ಕಾಂಗ್ರೆಸ್ ಪಕ್ಷದಲ್ಲಿದ್ದಾರೆ. ನಂಜನಗೂಡು ಕ್ಷೇತ್ರದ ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ತಾನು ಆಸಕ್ತಿ ಹೊಂದಿದ್ದೇನೆ ಎಂದು ಕೆಲವು ತಿಂಗಳ ಹಿಂದೆ ಹೇಳಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Fearing threat to his life Congress leader Madan Patel field complaint to Bengaluru police commissioner on August 7, 2017.
Please Wait while comments are loading...