ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊನೆಗೂ ಬಿಬಿಎಂಪಿ ಸ್ಥಾಯಿ ಸಮಿತಿಗಳಿಗೆ ಅಧ್ಯಕ್ಷರ ಆಯ್ಕೆ, ಯಾರ್ಯಾರು?

|
Google Oneindia Kannada News

ಬೆಂಗಳೂರು, ಜನವರಿ 18: ಬಿಬಿಎಂಪಿಯ 12 ಸ್ಥಾಯಿ ಸಮಿತಿಗಳ ಅಧ್ಯಕ್ಷರನ್ನು ಆಯ್ಕೆಮಾಡಿ ಬಹುದಿನಗಳ ಗೊಂದಲಗಳನ್ನು ನಿವಾರಿಸುವಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಯಶಸ್ವಿಯಾಗಿದೆ.

ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನಗಳಿಗೆ ಡಿ.14ರಂದು ಚುನಾವಣೆ ನಿಗದಿಯಾಗಿತ್ತು. ಜೆಡಿಎಸ್‌ನ ಬಂಡಾಯ ಸದಸ್ಯರಾದ ಲಗ್ಗೆರೆ ವಾರ್ಡ್‌ನ ಮಂಜುಳಾ ನಾರಾಯಣಸ್ವಾಮಿ ಮತ್ತು ಬಿಟಿಎಂ ಲೇಔಟ್‌ನ ಕೆ. ದೇವದಾಸ್ ಅವರು ಬಿಜೆಪಿ ಬೆಂಬಲದೊಂದಿಗೆ ಅಧ್ಯಕ್ಷ ಸ್ಥಾನಗಳಿಗೆ ನಾಮಪತ್ರ ಸಲ್ಲಿಸಲು ಮುಂದಾಗಿತ್ತು.

ಬೆಂಗಳೂರು ಜನರ ಮೇಲೆ ಮತ್ತೊಂದು ಸೆಸ್ ಹೇರಲು ಬಿಬಿಎಂಪಿ ಸಿದ್ಧತೆಬೆಂಗಳೂರು ಜನರ ಮೇಲೆ ಮತ್ತೊಂದು ಸೆಸ್ ಹೇರಲು ಬಿಬಿಎಂಪಿ ಸಿದ್ಧತೆ

ಇದರಿಂದ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟಕ್ಕೆ ವಾರ್ಡ್ ಮಟ್ಟದ ಕಾಮಗಾರಿ ಸ್ಥಾಯಿ ಸಮಿತಿ ಮತ್ತು ನ್ಯಾಯ ಸಮಿತಿಯ ಅಧ್ಯಕ್ಷ ಸ್ಥಾನ ತಪ್ಪುವ ಭೀತಿ ಎದುರಾಗಿತ್ತು. ಹೀಗಾಗಿ ಚುನಾವಣೆ ಮುಂದೂಡಲಾಗಿತ್ತು.

Congress jds bags BBMPs all standing commitee chairman posts

ಕಾಂಗ್ರೆಸ್‌ಗೆ 6, ಜೆಡಿಎಸ್‌ಗೆ 4 ಮತ್ತು ಪಕ್ಷೇತರರಿಬ್ಬರಿಗೆ ಅಧ್ಯಕ್ಷ ಪಟ್ಟ ಒಲಿದಿದೆ. ಚುನಾವಣೆಗೆ ಜೆಡಿಎಸ್‌ನ ಇಬ್ಬರು ಬಂಡಾಯ ಶಾಸಕರು ಗೈರಾಗಿದ್ದರು. ಮೇಯರ್ ಕೊಠಡಿಯಲ್ಲಿ ಚುನಾವಣೆ ನಡೆಯಿತು.

ಆಸ್ತಿ ತೆರಿಗೆ ಮೋಸ: ಇಸ್ರೋಗೆ ಮೊರೆ ಹೋದ ಬಿಬಿಎಂಪಿಆಸ್ತಿ ತೆರಿಗೆ ಮೋಸ: ಇಸ್ರೋಗೆ ಮೊರೆ ಹೋದ ಬಿಬಿಎಂಪಿ

-ತೆರಿಗೆ ಮತ್ತು ಸ್ಥಾಯಿ ಸಮಿತಿ- ಹೇಮಲತಾ ಗೋಪಾಲಯ್ಯ
-ಶಿಕ್ಷಣ ಸ್ಥಾಯಿ ಸಮಿತಿ- ಇಮ್ರಾನ್ ಪಾಷಾ
- ವಾರ್ಡ್ ಮಟ್ಟದ ಸಾರ್ವಜನಿಕ ಕಾಮಗಾರಿ ಸ್ಥಾಯಿ ಸಮಿತಿ- ಉಮ್ಮೇ ಸಲ್ಮಾ
-ತೋಟಗಾರಿಕೆ ಸ್ಥಾಯಿ ಸಮಿತಿ- ಐಶ್ವರ್ಯಾಂ
-ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ- ಎಸ್‌ಜಿ ನಾಗರಾಜ್
-ಬೃಹತ್ ಸಾರ್ವಜನಿಕ ಕಾಮಗಾರಿ ಸ್ಥಾಯಿ ಸಮಿತಿ-ಲಾವಣ್ಯ ಗಣೇಶ್
-ಲೆಕ್ಕಪತ್ರ ಸ್ಥಾಯಿ ಸಮಿತಿ-ವೇಲುನಾಯ್ಕರ್
-ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ- ಪಿ. ಸೌಮ್ಯ
-ಅಪೀಲುಗಳ ಸ್ಥಾಯಿ ಸಮಿತಿ- ಸುಜಾತಾ ರಮೇಶ್
-ಮಾರುಕಟ್ಟೆ ಸ್ಥಾಯಿ ಸಮಿತಿ- ಫರೀದಾ ಇಸ್ತಿಯಾಕ್
-ಸಾರ್ವಜನಿಕ ಆರೋಗ್ಯ ಸ್ಥಾಯಿ ಸಮಿತಿ- ಮುಜಾಹಿದ್ ಪಾಷಾ

English summary
Congress JDS coalition bags all standing commitee chairman posts of BBMP. BJP even didn't contest for the election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X