ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಎಸ್ ವೈ ಮೇಲೆ 4 ಕೋಟಿ ಲಂಚ ಆರೋಪ: ಕಾಂಗ್ರೆಸ್ ನಿಂದ ದಾಖಲೆ ಬಿಡುಗಡೆ

By Manjunatha
|
Google Oneindia Kannada News

Recommended Video

ಬಿ ಎಸ್ ಯಡಿಯೂರಪ್ಪ ಮೇಲೆ ಲಂಚದ ಆರೋಪ | ದಾಖಲೆಗಳನ್ನ ರಿಲೀಸ್ ಮಾಡಿದ ಕಾಂಗ್ರೆಸ್ | Oneindia Kannada

ಬೆಂಗಳೂರು, ಏಪ್ರಿಲ್ 06: ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದ ಸಮಯದಲ್ಲಿ ಮುರುಡೇಶ್ವರ ಪವರ್ ಕಾರ್ಪೊರೇಶನ್ ಲಿಮಿಟೆಡ್ ಸಂಸ್ಥೆಯಿಂದ 4.11 ಕೋಟಿ ಲಂಚ ಪಡೆದಿದ್ದಾರೆ ಎಂದು ಕಾಂಗ್ರೆಸ್‌ನ ವಿಧಾನಪರಿಷತ್ ಸದಸ್ಯ ಉಗ್ರಪ್ಪ ಆರೋಪಿಸಿದರು.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | 2018ರ ನಿಮ್ಮ ಕನಸಿನ ಸಂಪುಟವನ್ನು ಆಯ್ಕೆ ಮಾಡಿ

ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭದ್ರಾ ಮೇಲ್ದಂಡೆ ಯೋಜನೆ ಗುತ್ತಿಗೆಗೆ ಸಂಬಂಧಿಸಿದಂತೆ ಈ ಅಕ್ರಮ ನಡೆದಿದ್ದು, ಯಡಿಯೂರಪ್ಪ ಅವರೇ ನೇರವಾಗಿ ಮುರುಡೇಶ್ವರ ಪವರ್ ಕಾರ್ಪೊರೇಶನ್ ಲಿಮಿಟೆಡ್ ಸಂಸ್ಥೆಯಿಂದ ಲಂಚ ಪಡೆದಿದ್ದಾರೆ ಎಂದ ಅವರು ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಬಿಡುಗಡೆ ಮಾಡಿದರು.

ಭ್ರಷ್ಟಾಚಾರದ ಸ್ಪರ್ಧೆ ನಡೆದರೆ ಯಡಿಯೂರಪ್ಪ ನಂ. 1: ಅಮಿತ್ ಶಾ!ಭ್ರಷ್ಟಾಚಾರದ ಸ್ಪರ್ಧೆ ನಡೆದರೆ ಯಡಿಯೂರಪ್ಪ ನಂ. 1: ಅಮಿತ್ ಶಾ!

2008ರಲ್ಲಿ ಭದ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿ ಗುತ್ತಿಗೆಗೆ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, 1030 ಕೋಟಿ ರೂಪಾಯಿಯ ಗುತ್ತಿಗೆಯು ಆರ್‌ಎಂಐಸಿಯ ಸೋದರ ಸಂಸ್ಥೆ ಮುರಡೇಶ್ವರ ಪವರ್ ಕಾರ್ಪೊರೇಶನ್ ಲಿಮಿಟೆಡ್ ಸಂಸ್ಥೆಯ ಪಾಲಾಯಿತು. ಆದರೆ ಆರ್‌ಎಂಐಸಿಯ ಫಲಾನುಭವಿಗಳ ಪಟ್ಟಿಯಲ್ಲಿ ಗುತ್ತಿಗೆ ನೀಡಲು ಸೂಚಿಸಿದ ಯಡಿಯೂರಪ್ಪ ಅವರ ಹೆಸರೂ ಇದೆ ಎಂದು ಅವರು ಹೇಳಿದರು.

ಮೂರು ವರ್ಷದಲ್ಲಿ 4.11 ಕೋಟಿ ರೂ. ಲಂಚ

ಮೂರು ವರ್ಷದಲ್ಲಿ 4.11 ಕೋಟಿ ರೂ. ಲಂಚ

ಆದಾಯ ತೆರಿಗೆ ಇಲಾಖೆಯು ಮುರುಡೇಶ್ವರ ಪವರ್ ಕಾರ್ಪೊರೇಶನ್ ಲಿಮಿಟೆಡ್ ಸಂಸ್ಥೆಯ ಮೇಲೆ ನಡೆಸಿದ ದಾಳಿಯ ಬಗ್ಗೆ ಆದಾಯ ತೆರಿಗೆ ಇಲಾಖೆಯು ನೀಡಿರುವ ವರದಿಯಲ್ಲಿ ಯಡಿಯೂರಪ್ಪ ಅವರಿಗೆ ಮೂರು ವರ್ಷದಲ್ಲಿ 4.11 ಕೋಟಿ ರೂ. ಹಣವನ್ನು ನಿಗದಿತವಾಗಿ ನೀಡಲಾಗಿದೆ ಎಂದು ಸಂಸ್ಥೆಯ ಕಾರ್ಯ ನಿರ್ವಾಹಕ ಸುನಿಲ್ ಸಹಸ್ರಬುದ್ದಿ ಅವರೇ ಹೇಳಿಕೆ ನಿಡಿರುವ ಬಗ್ಗೆಯೂ ವರದಿಯಲ್ಲಿ ಉಲ್ಲೇಖ ಇದೆ ಎಂದು ಆದಾಯ ತೆರಿಗೆ ಇಲಾಖೆಯ ದಾಖಲೆಗಳನ್ನು ತೋರಿಸಿದರು.

ಸಚಿವ ಎಂ.ಬಿ.ಪಾಟೀಲ್ ನೇತೃತ್ವದಲ್ಲಿ ರೂ.150 ಕೋಟಿ ಹಗರಣ: ಯಡಿಯೂರಪ್ಪಸಚಿವ ಎಂ.ಬಿ.ಪಾಟೀಲ್ ನೇತೃತ್ವದಲ್ಲಿ ರೂ.150 ಕೋಟಿ ಹಗರಣ: ಯಡಿಯೂರಪ್ಪ

2009 ರಿಂದ 2012ರ ವರೆಗಿನ ಆದಾಯತೆರಿಗೆ ಮಾಹಿತಿ

2009 ರಿಂದ 2012ರ ವರೆಗಿನ ಆದಾಯತೆರಿಗೆ ಮಾಹಿತಿ

ಈ ವಿಷಯ ಆದರಿಸಿ ಯಡಿಯೂರಪ್ಪ ಅವರಿಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಂಡ ವಿಧಿಸಿದ ದಾಖಲೆಗಳನ್ನೂ ಅವರು ಬಿಡುಗಡೆ ಮಾಡಿದರು. ಜೊತೆಗೆ 2009 ರಿಂದ 2012ರ ವರೆಗೆ ಯಡಿಯೂರಪ್ಪ ಅವರು ಸಲ್ಲಿಸಿರುವ ಆದಾಯ ತೆರಿಗೆ ಮಾಹಿತಿಯನ್ನೂ ನೀಡಿದರು.

25 ಕೋಟಿ ಕಮಿಷನ್; ಎಂ.ಬಿ.ಪಾಟೀಲರನ್ನು ಮತ್ತೆ ತಡವಿಕೊಂಡ ಯಡಿಯೂರಪ್ಪ25 ಕೋಟಿ ಕಮಿಷನ್; ಎಂ.ಬಿ.ಪಾಟೀಲರನ್ನು ಮತ್ತೆ ತಡವಿಕೊಂಡ ಯಡಿಯೂರಪ್ಪ

ಎಸಿಬಿಗೆ ದೂರು ನೀಡಲಿರುವ ಕಾಂಗ್ರೆಸ್

ಎಸಿಬಿಗೆ ದೂರು ನೀಡಲಿರುವ ಕಾಂಗ್ರೆಸ್

ಆದಾಯ ತೆರಿಗೆ ಇಲಾಖೆ ನೀಡಿರುವ ಆದೇಶ ಮತ್ತು ವರದಿಗಳನ್ನು ಗಮನಿಸಿದರೆ ಯಡಿಯೂರಪ್ಪ ಅವರು 4.11 ಕೋಟಿ ರೂಪಾಯಿ ಹಣ ಲಂಚ ಪಡೆದಿರುವುದು ಸ್ಪಷ್ಟವಾಗುತ್ತದೆ ಎಂದ ವಿ.ಎಸ್.ಉಗ್ರಪ್ಪ ಅವರು ಈ ಕುರಿತು ಕಾಂಗ್ರೆಸ್ ಪಕ್ಷವು ಎಸಿಬಿ ಮೇಲೆ ದೂರು ದಾಖಲಿಸಲಿದೆ ಎಂದರು.

ಮೋದಿ, ಅಮಿತ್‌ ಶಾ ಗೆ ಪ್ರಶ್ನೆ

ಮೋದಿ, ಅಮಿತ್‌ ಶಾ ಗೆ ಪ್ರಶ್ನೆ

ಹಗರಣ ಕುರಿತು ಮಾತನಾಡಿದ ಅವರು ಮೋದಿ ಹಾಗೂ ಅಮಿತ್ ಶಾ ಅವರು ಕರ್ನಾಟಕದ ಕಾಂಗ್ರೆಸ್ ಸರ್ಕಾರವನ್ನು 10% ಕಮಿಶನ್ ಸರ್ಕಾರ ಎನ್ನುತ್ತಾರೆ. ಹಾಗಾದರೆ ಈಗ ಯಡಿಯೂರಪ್ಪ ಅವರು ಎಷ್ಟು ಪರ್ಸೆಂಟ್ ಲಂಚ ಪಡೆದಿದ್ದಾರೆಂದು ಅವರೇ ಹೇಳಬೇಕು ಎಂದರು.

English summary
congress leader VS Ugrappa accused that Yeddyurappa taken bribe of 4.11 crore from a construction company in 2008. He released some documents regarding that in KPCC office today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X