ಅಪಾರ್ಟ್ ಮೆಂಟ್ ನಿಂದ ಬಿದ್ದು ತಾಯಿ ಮಗ ಸಾವು: ಚಂದ್ರಪ್ಪ ಬಂಧನ

Posted By: Nayana
Subscribe to Oneindia Kannada

ಬೆಂಗಳೂರು, ಮಾರ್ಚ್ 07: ಕಾಡುಗೋಡಿ ಬಳಿ ತಾಯಿ ಮತ್ತು ಮಗ ಅಪಾರ್ಟ್ ಮೆಂಟ್ ಮೇಲಿಂದ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ಸ್ ಪೆಕ್ಟರ್ ಚಂದ್ರಪ್ಪನನ್ನು ಬಂಧಿಸಲಾಗಿದೆ.

ಕಾಡುಗೋಡಿ ಬಳಿ ತಾಯಿ ಮತ್ತು ಮಗ ಅಪಾರ್ಟ್ ಮೆಂಟ್ ಮೇಲಿಂದ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಮಂಗಳವಾರ ನಡೆದಿತ್ತು, ಯಾದಗಿರಿ ಮೂಲದ ತಾಯಿ ಸುಂದರಮ್ಮ(55) ಹಾಗೂ ಮಗ ಮೌನೇಶ್(36) ಮೃತ ಪಟ್ಟಿದ್ದರು.

ಅಪಾರ್ಟ್ ಮೆಂಟ್‌ನಿಂದ ಬಿದ್ದು ತಾಯಿ-ಮಗ ಅನುಮಾನಾಸ್ಪದ ಸಾವು

ಮೌನೇಶ್ ಕೆಎಸ್ ಆರ್ ಟಿಸಿ ಬಸ್ ಚಾಲಕರಾಗಿದ್ದು, 4 ದಿನದ ಹಿಂದಷ್ಟೇ ಯಾದಗಿರಿಯಿಂದ ಬೆಂಗಳೂರಿಗೆ ಬಂದಿದ್ದರು. ಕಾಡುಗೋಡಿ ಠಾಣೆಯಲ್ಲಿ ಇನ್ಸ್ ಪೆಕ್ಟರ್ ಆಗಿದ್ದ ಚಂದ್ರಪ್ಪ ಎಂಬವರು ವಾಸವಿದ್ದ ಅಪಾರ್ಟ್ ಮೆಂಟ್ ಫ್ಲಾಟ್ ಮೇಲಿಂದ ಬಿದ್ದು ಇಂದು ತಾಯಿ-ಮಗ ಸಾವನ್ನಪ್ಪಿದ್ದಾರೆ. ಚಂದ್ರಪ್ಪ ಈಗ ಕೋಲಾರದಲ್ಲಿ ಇನ್‌ಸ್ಪೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ.

Conductor and mother suicide:Inspector Chandrappa arrested

ಇನ್ಸ್ಪೆಕ್ಟರ್ ಚಂದ್ರಪ್ಪ ಅವರ ತಂಗಿ ಹಾಗೂ ಮೃತ ಮೌನೇಶ್ ಗೆ ಪ್ರೇಮಾಂಕುರವಾಗಿತ್ತು. ಎರಡು-ಮೂರು ಬಾರಿ ಚಂದ್ರಪ್ಪ ಸಹೋದರಿ ಮೌನೇಶ್ ಜೊತೆ ಮನೆ ಬಿಟ್ಟು ಹೋಗಿದ್ದಳು. ಇದರಿಂದ ಕೋಪಗೊಂಡಿದ್ದ ಚಂದ್ರಪ್ಪ, ಮೌನೇಶ್ ಹಾಗೂ ಅವರ ತಾಯಿಯನ್ನು ತಂದು ಕೂಡಿಹಾಕಿದ್ದರು ಹಾಗಾಗಿ ಸುಂದರಮ್ಮ ಮತ್ತು ಮೌನೇಶ್ ಅಪಾರ್ಟ್ ಮೆಂಟ್‌ ನಿಂದ ಹಾರಿ ಮೃತಪಟ್ಟಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Recently transferred Inspector from Kadugodi police station,Chandrappa has been arrested in conductor Mounesh and his mother Sundaramma suicide case on Wednesday.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ