ಮಾಜಿ ಲೋಕಾಯುಕ್ತ ಭಾಸ್ಕರರಾವ್ ಗೆ ಷರತ್ತುಬದ್ಧ ಜಾಮೀನು

Posted By:
Subscribe to Oneindia Kannada

ಬೆಂಗಳೂರು, ಜನವರಿ 28: ಲೋಕಾಯುಕ್ತ ಭ್ರಷ್ಟಾಚಾರ ಪ್ರಕರಣ ಕುರಿತು ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ .ವೈ ಭಾಸ್ಕರರಾವ್ ಅವರಿಗೆ ಲೋಕಾಯುಕ್ತ ವಿಶೇಷ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿದೆ.

ಎಲ್ಲರ ಭ್ರಷ್ಟಾಚಾರ ಹಗರಣಗಳನ್ನು ಬಯಲಿಗೆಳೆಯುವ ಮಾಡುವ ಲೋಕಾಯುಕ್ತ ಸಂಸ್ಥೆಯಲ್ಲಿಯೇ ನಡೆದ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧ ಲೋಕಾಯುಕ್ತ ಹುದ್ದೆಗೆ ರಾಜೀನಾಮೆ ನೀಡಿದ್ದ ನ್ಯಾ. ಭಾಸ್ಕರರಾವ್ ಅವರಿಗೆ ಇಂದು(ಜ.28) ಷರತ್ತುಬದ್ಧ ಜಾಮೀನು ಸಿಕ್ಕಿದೆ. ಅವರು ಹಲವು ದಿನಗಳಿಂದ ಪ್ರಕರಣದ ವಿಚಾರಣೆಯನ್ನು ಎದುರಿಸುತ್ತಿದ್ದರು. ಅಲ್ಲದೆ ಅನಾರೋಗ್ಯದ ಕಾರಣದಿಂದ ಇತ್ತೀಚಿನ ವಿಚಾರಣೆಯಲ್ಲಿ ನ್ಯಾಯಾಲಯಕ್ಕೂ ಹಾಜರಾಗಿರಲಿಲ್ಲ.[ಲೋಕಾಯುಕ್ತದಲ್ಲಿ ಭ್ರಷ್ಟಾಚಾರ: ನ್ಯಾ. ಭಾಸ್ಕರ್ ರಾವ್ ಗೆ ಜಾಮೀನು]

Conditional bail to former Karnataka Lokayukta has Y Bhaskararao

ಇನ್ನು ನ್ಯಾಯಮೂರ್ತಿಗಳಿಗೆರಗಿರುವ ಆರೋಪ ಸಂಬಂಧ ನ್ಯಾಯಾಲಯಲ್ಲಿ ವಾದ ವಿವಾದಗಳು ಜರುಗಿದ್ದು ಕೆಲವು ಷರತ್ತುಗಳನ್ನು ವಿ‍ಧಿಸಿ ಜಾಮೀನು ಮಂಜೂರು ಮಾಡಿದೆ. ಷರತ್ತಿನಲ್ಲಿ ಯಾವುದೇ ಪ್ರವಾಸ ಕೈಗೊಳ್ಳುವಂತಿಲ್ಲ. ಸಾಕ್ಷ್ಯಗಳ ಮೇಲೆ ಪ್ರಭಾವ ಬೀರುವಂತಿಲ್ಲ. ಸಾಕ್ಷ್ಯಗಲ ನಾಶಕ್ಕೆ ಯತ್ನಿಸುವಂತಿಲ್ಲ, ಯಾವುದೇ ಸಮಯದಲ್ಲಿ ವಿಚಾರಣೆಗೆ ಸ್ಪಂದಿಸಬೇಕೆಂದು ತಿಳಿಸಿದ್ದಾರೆ.

ಲೋಕಾಯುಕ್ತದಲ್ಲಿ ನಡೆದ ಭ್ರಷ್ಟಾಚಾರ ಪ್ರಕರಣ ಕುರಿತು ವಿಶೇಷ ತನಿಖಾ ತಂಡ(ಎಸ್ಐಟಿ) ಲೋಕಾಯುಕ್ತ ನ್ಯಾಯಾಲಯದಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು. ಅಲ್ಲದೆ ಭಾಸ್ಕರ ರಾವ್ ಪುತ್ತ ಅಶ್ವಿನ್ ರಾವ್ ಅವರನ್ನು ಬಂಧಿಸಲಾಗಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Conditional bail to former Karnataka Lokayukta has Y Bhaskararao in bengaluru. Lokayukta about the corruption case at the Special Investigation Team (SIT) of the Lokayukta court against Bhaskararao and his son ashwin rao.
Please Wait while comments are loading...