ಕಾಂಗ್ರೆಸ್ ಶಾಸಕ ಎಂಟಿಬಿ ನಾಗರಾಜ್ ಮೇಲೆ ಎಸಿಬಿಗೆ ದೂರು

Posted By:
Subscribe to Oneindia Kannada

ಹೊಸಕೋಟೆ, ಏಪ್ರಿಲ್ 07: ಹೊಸಕೋಟೆ ಕಾಂಗ್ರೆಸ್ ಶಾಸಕ, ಬಗರ್ ಹುಕುಂ ಸಾಗುವಳಿ ಸಕ್ರಮ ಸಮಿತಿಯ ಅಧ್ಯಕ್ಷರೂ ಆಗಿರುವ ಎಂಟಿಬಿ ನಾಗರಾಜ್ ಅವರ ಮೇಲೆ ಎಸಿಬಿಯಲ್ಲಿ ದೂರು ದಾಖಲಾಗಿದೆ.

ಚುನಾವಣೆ ನೀತಿ ಸಂಹಿತೆ ಅಂದರೇನು? ಏನು ಮಾಡಬಹುದು, ಏನು ಮಾಡಬಾರದು?

ಎಂಟಿಬಿ ನಾಗರಾಜು ಅವರು ಅಕ್ರಮ-ಸಕ್ರಮದಡಿ ತಮಗೆ ಬೇಕಾದವರಿಗೆ ಭೂಮಿ ಹಂಚಿದ್ದಾರೆಂದು ಆರೋಪಿಸಿ ಬಿಜೆಪಿ ವಕ್ತಾರ ಎನ್.ಆರ್‌. ರಮೇಶ್ ಅವರು ಎಸಿಬಿ ಹಾಗೂ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | 2018ರ ನಿಮ್ಮ ಕನಸಿನ ಸಂಪುಟವನ್ನು ಆಯ್ಕೆ ಮಾಡಿ

ಎಂಟಿಬಿ ನಾಗರಾಜ್ ಅವರ ಈ ನಡೆಯಿಂದಾಗಿ ಸರ್ಕಾರಕ್ಕೆ 280 ಕೋಟಿ ರೂಪಾಯಿ ನಷ್ಟವಾಗಿದ್ದು, ಕೋಟ್ಯಂತರ ಬೆಲೆ ಬಾಳುವ ಜಮೀನನ್ನು ಶಾಸಕರ ಸಂಬಂಧಿಕರಿಗೆ ಹಾಗೂ ಹಿಂಬಾಲಕರಿಗೆ ಬೇಕಾಬಿಟ್ಟಿ ಮಂಜೂರು ಮಾಡಲಾಗಿದೆ ಎಂದು ಅವರು ದೂರಿನಲ್ಲಿ ಆರೋಪಿಸಿದ್ದಾರೆ.

complaint lodge against congress MLA MTB Nagaraju in ACB

ಬೇರೆ ಪಕ್ಷದವರ ಮೇಲೆ ದೂರು ಕೇಳಿ ಬಂದ ತಕ್ಷಣ ಎಫ್‌ಐಆರ್ ಹಾಕುತ್ತಾರೆ ಆದರೆ ಸಿದ್ದರಾಮಯ್ಯ ಅವರ ಆಪ್ತ ಎಂಟಿಬಿ ನಾಗರಾಜ್ ಅವರ ಮೇಲೂ ಎಫ್‌ಐಆರ್ ಹಾಕಿ ಎಂದು ಆಗ್ರಹಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
a complaint lodge against Hoskote congress MLA NTB Nagaraj in ACB. a BJP spokesperson lodged complaint for issuing land without needful documents to MLA's relatives.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ