ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಹಿ ಹಾಕುವುದನ್ನೆ ಮರೆತರು ರಾಮಲಿಂಗಾ ರೆಡ್ಡಿ, ರದ್ದಾಗುತ್ತಾ ನಾಮಪತ್ರ?

|
Google Oneindia Kannada News

ಬೆಂಗಳೂರು, ಏಪ್ರಿಲ್ 28: ಬಿಟಿಎಂ ಲೇಔಟ್ ಮತಕ್ಷೇತ್ರದಿಂದ ವಿಧಾನಸಭೆ ಚುನಾವಣೆಗೆ ನಿಂತಿರುವ ಗೃಹಸಚಿವ ರಾಮಲಿಂಗಾರೆಡ್ಡಿ ಅವರ ನಾಮಪತ್ರವನ್ನು ರದ್ದು ಮಾಡಬೇಕು ಎಂದು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಗಿದೆ.

ಚಾಮುಂಡೇಶ್ವರಿಯಲ್ಲಿ ಸಿದ್ದು ಸೋಲಿಗೆ ಕೈಜೋಡಿಸಿವೆಯಾ ಬಿಜೆಪಿ-ಜೆಡಿಎಸ್?!ಚಾಮುಂಡೇಶ್ವರಿಯಲ್ಲಿ ಸಿದ್ದು ಸೋಲಿಗೆ ಕೈಜೋಡಿಸಿವೆಯಾ ಬಿಜೆಪಿ-ಜೆಡಿಎಸ್?!

ರಾಮಲಿಂಗಾ ರೆಡ್ಡಿ ಅವರು ತಮ್ಮ ನಾಮಪತ್ರವನ್ನು ನಿಯಮಬದ್ಧವಾಗಿ ಸಲ್ಲಿಸಿಲ್ಲ ಅವರು ನಾಮಪತ್ರದಲ್ಲಿ ಸಹಿ ಮಾಡಿಲ್ಲ ಆದರೂ ಅವರ ನಾಮಪತ್ರವನ್ನು ಚುನಾವಣಾ ಅಧಿಕಾರಿಗಳು ಸ್ವೀಕರಿಸಿದ್ದಾರೆ ಮತ್ತು ಊರ್ಜಿತಗೊಳಿಸಿದ್ದಾರೆ. ಕೂಡಲೇ ಅವರ ನಾಮಪತ್ರವನ್ನು ರದ್ದು ಮಾಡಬೇಕು ಎಂದು ಕನ್ನಡ ಹೋರಾಟಗಾರ ಸಂಘದ ನಾಗೇಶ್ ಎಂಬುವರು ದೂರು ನೀಡಿದ್ದಾರೆ.

complaint to election commission to cancel Ramalinga Reddys nomination

ಬಿಟಿಎಂ ಬಡಾವಣೆಯಿಂದ ಚುನಾವಣೆಗೆ ಸ್ಪರ್ಧಿಸಿರುವ ರಾಮಲಿಂಗಾರೆಡ್ಡಿ ಅವರು 25 ಪುಟಗಳ ಅಫಿಡೆವಿಟ್‌, ನಾಮಪತ್ರವನ್ನು ಸಲ್ಲಿಸಿದ್ದಾರೆ. ಅದರಲ್ಲಿ ಎಲ್ಲಾ ಕಡೆ ಸಹಿಯನ್ನೂ ಮಾಡಿದ್ದಾರೆ ಆದರೆ ಒಂದು ಕಡೆ ಮಾತ್ರ ಸಹಿ ಮಾಡುವುದನ್ನು ಮರೆತಿದ್ದಾರೆ. ಈಗ ಇದನ್ನೇ ಮುಖ್ಯವಾಗಿಟ್ಟುಕೊಂಡು ಅವರ ನಾಮಪತ್ರ ತಿರಸ್ಕರಿಸಲು ದೂರು ಸಲ್ಲಿಸಲಾಗಿದೆ.

ಚಾಮುಂಡೇಶ್ವರಿಯಿಂದ ಪಲಾಯನ ಮಾಡಿದವರು ಕರ್ನಾಟಕ ಗೆಲ್ತಾರಾ: ಅಮಿತ್ ಶಾಚಾಮುಂಡೇಶ್ವರಿಯಿಂದ ಪಲಾಯನ ಮಾಡಿದವರು ಕರ್ನಾಟಕ ಗೆಲ್ತಾರಾ: ಅಮಿತ್ ಶಾ

ರಾಮಲಿಂಗಾ ರೆಡ್ಡಿ ಅವರ ನಾಮಪತ್ರದ 13ನೇ ಪುಟದಲ್ಲಿ ಅವರ ಮೇಲಿರುವ ಪ್ರಕರಣಗಳ ಮಾಹಿತಿ ನೀಡುವ ಕಡೆ ರಾಮಲಿಂಗಾರೆಡ್ಡಿ ಅವರು ಸಹಿ ಹಾಕುವುದು ಮರೆತಿದ್ದಾರೆ. ಉಳಿದಂತೆ ಇನ್ನೆಲ್ಲಾ ಕಡೆ ಸಹಿ ಹಾಕಿದ್ದಾರೆ.

ಕಾಂಗ್ರೆಸ್ಸಿನದೇನಿದ್ದರೂ ಹಣ ಹೊಡೆಯುವ ಭಾಗ್ಯ: ಎಚ್ ಡಿಕೆ ವ್ಯಂಗ್ಯಕಾಂಗ್ರೆಸ್ಸಿನದೇನಿದ್ದರೂ ಹಣ ಹೊಡೆಯುವ ಭಾಗ್ಯ: ಎಚ್ ಡಿಕೆ ವ್ಯಂಗ್ಯ

English summary
Ramalinga Reddy forget to sign in his Nomination so a activist called Nagesh complaint to election commission and demand to cancel the nomination of Ramalinga Reddy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X