ಬೆಳ್ಳಂದೂರು ಕೆರೆ ಶುದ್ಧೀಕರಣ ಸಮಿತಿಯಲ್ಲಿ ಯಾರ್ಯಾರಿದ್ದಾರೆ?

Written By:
Subscribe to Oneindia Kannada

ಬೆಂಗಳೂರು, ಮೇ 11: ರಾಸಾಯನಿಕ ತುಂಬಿರುವ ಬೆಳ್ಳಂದೂರು ಕೆರೆ ಪುನಶ್ಚೇತನ ಹಾಗೂ ಅಭಿವೃದ್ಧಿಗೆ ಸಂಬಂಧಿಸಿ ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ 18 ಸದಸ್ಯರ ತಜ್ಞರ ಸಮಿತಿ ರಚನೆ ಮಾಡಲಾಗಿದೆ. ಸಮಿತಿ ರಚನೆ ಬಗ್ಗೆ ಮಂಗಳವಾರ ಕರ್ನಾಟಕ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.

ಮಾಲಿನ್ಯದ ಆಗರದಂತಾಗಿರುವ ಬೆಂಗಳೂರು ಕೆರೆಗಳ ಶುದ್ಧೀಕರಣ ಮತ್ತು ಸ್ವಚ್ಛತೆಗೆ ರಾಜ್ಯ ಸರ್ಕಾರ ಆಸಕ್ತಿ ವಹಿಸಿತ್ತು. ರಾಸಾಯನಿಕ ನೊರೆ ತುಂಬಿರುವ ಬೆಳ್ಳಂದೂರು ಕೆರೆ ಶುದ್ಧೀಕರಣಕ್ಕೆ ಸಂಬಂಧಿಸಿ ಬೆಂಗಳೂರು ಅಭಿವೃದ್ಧಿ ಸಚಿವ ಕೆ ಜೆ ಜಾರ್ಜ್ ಇತ್ತೀಚೆಗೆ ಅಧಿಕಾರಿಗಳು, ಸಂಘ ಸಂಸ್ಥೆಗಳ, ವಿದೇಶಿ ಕಂಪನಿಗಳ ಸಭೆ ನಡೆಸಿ ವರದಿ ಕಲೆಹಾಕಿದ್ದರು.[ಬೆಳ್ಳಂದೂರು ಕೆರೆ ಶುದ್ಧಿಗೆ ನಮ್ಮ 'ಬೆಂಗಳೂರು ಫೌಂಡೇಷನ್ ' ಸೂತ್ರ]

lake

ಈ ಕೆರೆಯನ್ನು ಯಾವ ಆಧಾರದಲ್ಲಿ ಶುದ್ಧ ಮಾಡಬಹುದು? ಪರ್ಯಾಯ ಪರಿಹಾರ ಕ್ರಮಗಳು ಏನು? ಎಂಬುದನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಿ ಆರು ವಾರಗಳಲ್ಲಿ ವರದಿ ಸಲ್ಲಿಸಲು ಸಮಿತಿಗೆ ಸೂಚನೆ ನೀಡಲಾಗಿದೆ.[ಒಡಲಲಿ ವಿಷ ತುಂಬಿಕೊಂಡ ಬೆಳ್ಳಂದೂರು ಕೆರೆಯ ಕಥೆ ವ್ಯಥೆ]

ಸಮಿತಿಯಲ್ಲಿ ಯಾರ್ಯಾರಿದ್ದಾರೆ?
ಬಿಡಿಎ ಆಯುಕ್ತ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಕಾರ್ಯದರ್ಶಿ, ಬೆಂಗಳೂರು ಜಲಮಂಡಳಿ ಅಧ್ಯಕ್ಷ, ಕರ್ನಾಟಕ ಸರೋವರ ಸಂರಕ್ಷಣೆ ಮತ್ತು ಅಭಿವೃದ್ದಿ ಪ್ರಾಧಿಕಾರದ ಸಿಇಒ, ಸಣ್ಣ ನೀರಾವರಿ ಇಲಾಖೆ ಕಾರ್ಯದರ್ಶಿ, ಬಿಬಿಎಂಪಿ ಆಯುಕ್ತ, ನಗರ ಜಿಲ್ಲಾಧಿಕಾರಿ, ಜಲಮಂಡಳಿ ಮುಖ್ಯ ಇಂಜಿನಿಯರ್ ಸಮಿತಿ ಸದಸ್ಯರಾಗಿದ್ದಾರೆ.[ರಾಸಾಯನಿಕ ನೊರೆತಯ ಭಯಾನಕತೆ ತೋರಿಸುವ ವಿಡಿಯೋ]

ಭಾರತೀಯ ವಿಜ್ಞಾನ ಸಂಸ್ಥೆಯ ಪ್ರೊ. ರಾಮಚಂದ್ರ, ಪ್ರೊ. ರಾಮಪ್ರಸಾದ್, ನಿವೃತ್ತ ಅಧಿಕಾರಿ ಡಾ. ಯಲ್ಲಪ್ಪರೆಡ್ಡಿ, ಡಾ. ಶರತ್ಚಂದ್ರ, ನಮ್ಮ ಬೆಂಗಳೂರು ಫೌಂಡೇಷನ್ ಸಿಇಒ, ಬೆಳ್ಳಂದೂರು ನಿವಾಸಿಗಳ ಸಂಘದ ಅಧ್ಯಕ್ಷ, ಬಿಬಿಎಂಪಿ ಮಾಜಿ ಆಯುಕ್ತ ಸಿದ್ದಯ್ಯ, ಬೆಳ್ಳಂದೂರು ಸಾರ್ವಜನಿಕ ಹಿತಾಸಕ್ತಿ ಅರ್ಜಿದಾರ ರಾಮಮೂರ್ತಿ ಅವರನ್ನು ಸಮಿತಿ ಒಳಗೊಂಡಿದೆ.

ಇನ್ನು ಮುಂದಾದರೂ ಕೆರೆ ಶುದ್ಧೀಕರಣ ಕೆಲಸ ವೈಜ್ಞಾನಿಕ ನೆಲೆಗಟ್ಟಿನಲ್ಲಿ ಶೀಘ್ರವಾಗಿ ಆರಂಭವಾಗುತ್ತದೆಯೋ ಎಂಬುದನ್ನು ಕಾದು ನೋಡಬೇಕು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Karnataka State government has formed a committee for Bellandur lake rejuvenation. The formation of the 18-member committee is a follow-up on the recent one-day workshop organised by Namma Bengaluru Foundation (NBF) and Bangalore Development Authority (BDA).The committee now formed is chaired by the additional chief secretary, Urban Development Department. It has domain experts and local residents.
Please Wait while comments are loading...