ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಹಿಳಾ ಆಯೋಗ ಪುರುಷರ ಕುರಿತೂ ಚಿಂತಿಸಲಿ

By Kiran B Hegde
|
Google Oneindia Kannada News

ಬೆಂಗಳೂರು, ನ. 19: ಮಹಿಳಾ ಆಯೋಗವು ಪುರುಷರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಕುರಿತೂ ಯೋಚಿಸಬೇಕು ಎಂದು ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯಕ್ ಸಲಹೆ ನೀಡಿದ್ದಾರೆ.

ನಗರದ ಗಾಂಧಿ ಭವನದಲ್ಲಿ 'ರಾಜ್ಯ ಪುರುಷರ ರಕ್ಷಣಾ ಸಮಿತಿ' ಆಯೋಜಿಸಿದ್ದ 'ರಾಷ್ಟ್ರೀಯ ಪುರುಷರ ದಿನಾಚರಣೆ' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪುರುಷರಿಂದ ಮಹಿಳೆಯರ ಮೇಲೆ ಆಗುವ ದೌರ್ಜನ್ಯ ಹಾಗೂ ಪುರುಷರ ಮೇಲೆ ಮಹಿಳೆಯರು ನಡೆಸುವ ದೌರ್ಜನ್ಯ ಎರಡರ ಕುರಿತೂ ಮಹಿಳಾ ಆಯೋಗಗಳು ಚಿಂತಿಸಬೇಕು. ದೌರ್ಜನ್ಯಕ್ಕೆ ಮೂಲ ಕಾರಣ ಹುಡುಕಿ ಕಾರಣ ಕಂಡುಕೊಳ್ಳಬೇಕು. ಎಲ್ಲರಲ್ಲಿಯೂ ಆತ್ಮಸಾಕ್ಷಿ ಜಾಗೃತವಾಗಿದ್ದರೆ ದೌರ್ಜನ್ಯ ನಡೆಯುವುದಿಲ್ಲ ಎಂದು ಲಲಿತಾ ನಾಯಕ್ ಅಭಿಪ್ರಾಯಪಟ್ಟರು. [ಶೋಷಿತ ಗಂಡಂದಿರ ಕೇಳೋರು ಯಾರು]

kannada

ಕುಮಾರ್ ವಿ. ಜಹಗೀರದಾರ್ ಮಾತನಾಡಿ, ಮಹಿಳಾ ಆಯೋಗ ಮಕ್ಕಳ ಬಗ್ಗೆಯೂ ಹೆಚ್ಚು ಗಮನ ನೀಡಬೇಕು. ವಿಚ್ಛೇದಿತ ದಂಪತಿಗೆ ಮಕ್ಕಳ ಮೇಲೆ ಸಮಾನ ಹಕ್ಕು ನೀಡಬೇಕು ಎಂದು ಅಭಿಪ್ರಾಯಪಟ್ಟರು.

ಮುಂತಾದವರು ಮಹಿಳೆಯರಿಂದ ಪುರುಷರು ಅನುಭವಿಸುತ್ತಿರುವ ತೊಂದರೆಗಳ ಕುರಿತು ವಿವರಿಸಿದರು.

ರಾಜ್ಯ ಪುರುಷರ ರಕ್ಷಣಾ ಸಮಿತಿ ಅಧ್ಯಕ್ಷ ಬಿ.ಎಸ್. ಗೌಡ, ಪ್ರಧಾನ ಕಾರ್ಯದರ್ಶಿ ಎನ್. ನಾಗೇಶ, ಸಾಹಿತಿ ಯೋಗೇಶ ಮಾಸ್ಟರ್ ಮತ್ತಿತರರು ಪಾಲ್ಗೊಂಡಿದ್ದರು.

English summary
Farmer Minister B T Lalitha Nayak told commission for woman should think about men who harassed by women. She expressed her view regarding harassment in the national men day function.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X