ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಗಸ್ಟ್ 18ಕ್ಕೆ ಬೆಂಗಳೂರಲ್ಲಿ ಕಾಳಿಂಗ ಸರ್ಪದ ಬಗ್ಗೆ ಚಿತ್ರ ಪ್ರದರ್ಶನ

|
Google Oneindia Kannada News

ಬೆಂಗಳೂರು, ಆಗಸ್ಟ್ 17: ಇದೊಂದು ವಿಶೇಷ ಸಂದರ್ಭ. ಕಾಳಿಂಗ ಸರ್ಪದ ಬಗ್ಗೆ ತಿಳಿದುಕೊಳ್ಳುವುದಕ್ಕೆ ಒಂದೊಳ್ಳೆ ಅವಕಾಶ ಸಿಕ್ಕಿದೆ. ಇದೇ ಆಗಸ್ಟ್ 18ರ ಶುಕ್ರವಾರ ಸಂಜೆ 5.30ರಿಂದ 7ರವರೆಗೆ ಬೆಂಗಳೂರಿನ ಲಾಂಗ್ ಫೋರ್ಡ್ ರಸ್ತೆಯಲ್ಲಿರುವ ಸೇಂಟ್ ಜೋಸೆಫ್ ಕಾಲೇಜಿ (ಅಟಾನಮಸ್)ನಲ್ಲಿ ಕಾಳಿಂಗ ಸರ್ಪದ ಬಗ್ಗೆ ಮಾಡಿರುವ ಇತ್ತೀಚಿನ ವನ್ಯಜೀವಿ ಡಾಕ್ಯುಮೆಂಟರಿ ಪ್ರದರ್ಶನವಿದೆ.

ಕಾಳಿಂಗ ಸರ್ಪಗಳ ನೆಲೆವೀಡಾದ ಆಗುಂಬೆ, ಅರಣ್ಯ ಪ್ರವೇಶಕ್ಕೆ ನಿಷೇಧಕಾಳಿಂಗ ಸರ್ಪಗಳ ನೆಲೆವೀಡಾದ ಆಗುಂಬೆ, ಅರಣ್ಯ ಪ್ರವೇಶಕ್ಕೆ ನಿಷೇಧ

ಕಾಳಿಂಗ ಸೆಂಟರ್ ಫಾರ್ ರೈನ್ ಫಾರೆಸ್ಟ್ ಇಕಾಲಜಿ (ಕೆಸಿಆರ್ ಇ) ಮತ್ತು ಕಾಳಿಂಗ ಫೌಂಡೇಷನ್ ನ ಐದನೇ ವಾರ್ಷಿಕೋತ್ಸವದ ಅಂಗವಾಗಿ ಈ ಪ್ರದರ್ಶನ ಆಯೋಜಿಸಲಾಗಿದೆ. ಈ ಡಾಕ್ಯುಮೆಂಟರಿಯನ್ನು ಸಂಪೂರ್ಣವಾಗಿ ಕರ್ನಾಟಕದ ಆಗುಂಬೆಯಲ್ಲಿ ನ್ಯಾಟ್ ಜಿಯೋ ಮತ್ತು ಸಿಮ್ತ್ ಸೋನಿಯನ್ ಚಾನಲ್ ಗಾಗಿ ಚಿತ್ರೀಕರಿಸಲಾಗಿದೆ.

Cobra King documentary screening on August 18th In Bengaluru

ಸಂಜೆ 5.30 ಹೈ ಟೀ, ಸಂಜೆ 6 ಅವರ್ ಜರ್ನಿ- ಎ ಶಾರ್ಟ್ ವಿಡಿಯೋ, ಸಂಜೆ 6.10 ಕೋಬ್ರಾ ಕಿಂಗ್ ಚಿತ್ರ ಪ್ರದರ್ಶನ, ರಾತ್ರಿ 7 ಸಂವಾದ. ಈ ಚಿತ್ರ ಪ್ರದರ್ಶನಕ್ಕೆ ಪ್ರವೇಶ ಉಚಿತವಾಗಿದೆ.

Cobra King documentary screening on August 18th In Bengaluru

ಕಾಳಿಂಗ ಸರ್ಪವು ಜಗತ್ತಿನಲ್ಲೇ ಅತ್ಯಂತ ಉದ್ದದ ಹಾಗೂ ವಿಷಯುಕ್ತ ಹಾವು (ಭಾರತದಲ್ಲಿ ಹದಿನೈದು ಅಡಿ, ಥಾಯ್ಲೆಂಡ್ ನಲ್ಲಿ ಹದಿನೆಂಟು ಅಡಿ), ಜಗತ್ತಿನಲ್ಲೇ ಗೂಡು ಕಟ್ಟುವ ಹಾವು ಅಂತಿದ್ದರೆ ಅದು ಕಾಳಿಂಗ ಸರ್ಪ. ಫೆಬ್ರವರಿಯಿಂದ ಮೇ ಮಧ್ಯೆ ಅದರ ಸಂತಾನೋತ್ಪತ್ತಿ ಸಮಯ.

English summary
5th year anniversary celebration of Kalinga Centre for Rainforest Ecology (KCRE) and Kalinga Foundation by screening the latest wildlife documentary on the ecology of king cobras, 'COBRA KING'. The event is scheduled for the 18th of August 2017, 5:30-7:00pm, at Xavier's Hall, St.Joseph's College(Autonomous), Langford Road, Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X