ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊಡಗು ಪುನರ್‌ ನಿರ್ಮಾಣ: ಎಚ್ಡಿಕೆ ಎರಡು ದಿನ ಅಲ್ಲೇ ವಾಸ್ತವ್ಯ

By Nayana
|
Google Oneindia Kannada News

ಬೆಂಗಳೂರು, ಆಗಸ್ಟ್ 20: ಪ್ರವಾಹ ಪೀಡಿತ ಕೊಡಗು ಜಿಲ್ಲೆಯ ಪುನರ್‌ ನಿರ್ಮಾಣಕ್ಕೆ ತ್ವರಿತ ಚಾಲನೆ ನೀಡುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಕೊಡಗು ಜಿಲ್ಲೆಯಲ್ಲೇ ವಾಸ್ತವ್ಯ ಮಾಡಲು ಚಿಂತನೆ ನಡೆಸಿದ್ದಾರೆ.

ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ನೆರವಾಗುವುದು ಹೇಗೆ?ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ನೆರವಾಗುವುದು ಹೇಗೆ?

ಸೋಮವಾರ ರಾಜ್ಯದ ಹಿರಿಯ ಅಧಿಕಾರಿಗಳ ಜತೆ ಸಭೆ ನಡೆಸಿರುವ ಅವರು ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉಂಟಾಗಿರುವ ಹಾನಿ ಆಸ್ತಿ ಪಾಸ್ತಿ ನಷ್ಟ ಸರ್ಕಾರಿ ರಸ್ತೆಗಳು ಹಾಗೂ ಕಟ್ಟಡಗಳಿಗೆ ಧಕ್ಕೆ ಮತ್ತಿತರೆ ವಿಯಗಳು ಕುರಿತಂತೆ ಮಾಹಿತಿ ಪಡೆದಿದ್ದು ಸಂತ್ರಸ್ತ ಜನರಿಗೆ ಸೂಕ್ತ ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ ಸಭೆ ನಡೆಸಿದ್ದಾರೆ.

ಕೊಡಗಿನ ಜನರ ಜೊತೆ ಸರ್ಕಾರವಿದೆ : ಕುಮಾರಸ್ವಾಮಿ ಕೊಡಗಿನ ಜನರ ಜೊತೆ ಸರ್ಕಾರವಿದೆ : ಕುಮಾರಸ್ವಾಮಿ

ಇದೇ ವೇಳೆ ಪ್ರವಾಹ ಪೀಡಿತ ಕೊಡಗು ಜಿಲ್ಲೆಗೆ ಮಂಗಳವಾರ ಅಥವಾ ಬುಧವಾರ ತೆರಳಿ ಅಲ್ಲಿಯೇ ವಾಸ್ತವ್ಯ ಮಾಡಲು ಚಿಂತನೆ ನಡೆಸಿದ್ದಾರೆ. ಕೊಡಗಿನಲ್ಲಿ ಆಗಿರುವ ಹಾನಿ ಬಗ್ಗೆ ಅಧಿಕಾರಿಗಳಿಂದ ವರದಿ ಸಂಗ್ರಹ ಮಾಡಿದ್ದಾರೆ.

CM will stay in Kodagu for couple of days

ಕೊಡಗು ಪುನರ್ ನಿರ್ಮಾಣಕ್ಕೆ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ, ಎಷ್ಟು ಮನೆಗಳು ನೆಲಸಮ, ಯಾರೆಲ್ಲ ಮನೆ ಕಳೆದುಕೊಂಡಿದ್ದಾರೆ. ಮನೆ ಕಟ್ಟಿ ಕೊಡುವ ಬಗ್ಗೆ , ಮನರ್ವಸತಿ ಕಲ್ಪಿಸುವ ಬಗ್ಗೆ ತಿಳಿಯಲು ಕೊಡಗಿನಲ್ಲಿ ವಾಸ್ತವ್ಯ ಹೂಡಲಿದ್ದಾರೆ.

ಪ್ರವಾಹಕ್ಕೆ ನಲುಗಿದ ತಾಯ್ನಾಡಿಗೆ ಮಿಡಿದ ಬೆಂಗಳೂರು ಕೊಡವ ಸಮಾಜ!ಪ್ರವಾಹಕ್ಕೆ ನಲುಗಿದ ತಾಯ್ನಾಡಿಗೆ ಮಿಡಿದ ಬೆಂಗಳೂರು ಕೊಡವ ಸಮಾಜ!

ದಾನಿಗಳು ಸಹಾಯ ಮಾಡಿ ಎಂದು ಮನವಿ ಮಾಡಲಿರುವ ಸಿಎಂ. ಕಳೆದು 2 ಎರಡು ದಿನಗಳ ಕಾಲ ಓಡಾಡಿ ಸುಸ್ತಾಗಿರುವ ಹಿನ್ನೆಲೆ. ಸೋಮವಾರ ಮನೆಯಲ್ಲಿ ವಿಶ್ರಾಂತಿ ಪಡೆಯಲಿರುವ ಸಿಎಂ ಕುಮಾರಸ್ವಾಮಿ. ಎರಡು ಬಾರಿ ಹೃದಯ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿರುವ ಸಿಎಂ ಹೆಚ್ ಡಿಕೆ. ಹೀಗಾಗಿ ಹೆಚ್ಚಿನ ಆಯಾಸ, ಹಿನ್ನೆಲೆ ವೈದ್ಯರಿಂದ ವಿಶ್ರಾಂತಿ ಸೂಚನೆ ದೊರೆತ ಹಿನ್ನೆಲೆಯಲ್ಲಿ ಒಂದು ದಿನ ವಿಶ್ರಾಂತಿ ಪಡೆಯಲಿದ್ದಾರೆ.

English summary
Chief minister H.D.Kumaraswamy will stay in flood affected Kodagu district for couple of days to monitor the rehabilitation and rescue operations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X