ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊಡಗು ಸಹಜ ಸ್ಥಿತಿಗೆ ಬರುವವರೆಗೂ ಸನ್ಮಾನ ಸ್ವೀಕರಿಸಲ್ಲ: ಎಚ್ಡಿಕೆ

By Nayana
|
Google Oneindia Kannada News

Recommended Video

ಕೊಡಗು ಪ್ರವಾಹ: ಸನ್ಮಾನ ಸ್ವೀಕರಿಸದಿರಲು ಸಿಎಂ ಕುಮಾರಸ್ವಾಮಿ ನಿರ್ಧಾರ | Oneindia Kannada

ಬೆಂಗಳೂರು, ಆಗಸ್ಟ್ 24: ಹತ್ತಾರು ಹಳ್ಳಿಗಳು, ನೂರಾರು ತೋಟಗಳು, ಸಾವಿರಾರು ಜಾನುವಾರುಗಳು ಸೇರಿದಂತೆ ಹಲವಾರು ಜನರ ಸಾವಿಗೆ ಕಾರಣವಾಗಿರುವ ಕಡಗು ಜಿಲ್ಲೆಯ ಭೀಕರ ದುರಂತ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರ ಮೇಲೆ ಭಾರಿ ಪರಿಣಾಮ ಬೀರಿದೆ.

ಸಂಸದರ ನಿಧಿಯಿಂದ 1 ಕೋಟಿ ನೀಡಿದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಸಂಸದರ ನಿಧಿಯಿಂದ 1 ಕೋಟಿ ನೀಡಿದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್

ಈ ಹಿನ್ನೆಲೆಯಲ್ಲಿ ಪರಿಹಾರ ಕಾರ್ಯ ಮುಗಿಯುವ ತನಕ ಯಾವುದೇ ಸನ್ಮಾನಗಳನ್ನು ಸ್ವೀಕರಿಸದಿರಲು ನಿರ್ಧರಿಸಿದ್ದಾರೆ. ಕುಮಾರಸ್ವಾಮಿ ಭಾಗವಹಿಸುವ ಯಾವುದೇ ಸಭೆ, ಸಮಾರಂಭಗಳಲ್ಲಿ ಕಾರ್ಯಕರ್ತರು, ನಾಗರಿಕರು ಹಾಗೂ ಅಧಿಕಾರಿಗಳಿಂದ ಯಾವುದೇ ರೀತಿಯ ಹೂಗುಚ್ಛ, ಹೂಮಾಲೆ, ಶಾಲು ಹಣ್ಣು, ಹಂಪಲುಗಳನ್ನು ಸ್ವೀಕರಿಸದಿರಲು ನಿರ್ಧರಿಸಿದ್ದಾರೆ.

ಪ್ರವಾಹ ಪೀಡಿತ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುತ್ತಿದೆ ಖಾಸಗಿ ವಿದ್ಯಾ ಸಂಸ್ಥೆ ಪ್ರವಾಹ ಪೀಡಿತ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುತ್ತಿದೆ ಖಾಸಗಿ ವಿದ್ಯಾ ಸಂಸ್ಥೆ

ಸಾರ್ವಜನಿಕರು ಮುಖ್ಯಮಂತ್ರಿಗಳಿಗೆ ಸನ್ಮಾನ ಮಾಡುವ ಬಯಕೆಯಿದ್ದರೆ ಅದೇ ಹಣವನ್ನು ಕೊಡಗು ಜಿಲ್ಲೆಯ ಪ್ರವಾಹ ಸಂತ್ರಸ್ತರ ನೆರವಿಗೆ ನೀಡುವಂತೆ ಮನವಿ ಮಾಡಿದ್ದಾರೆ. ಅಲ್ಲದೆ ಪರಿಹಾರದ ನೆರವನ್ನು ಚೆಕ್‌ ಅಥವಾ ಡಿಡಿ ಮೂಲಕವೂ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

CM will not accept any felicitation till flood rehabilitation complete

ಕೊಡಗು ಮೊದಲಿನಂತಾಗುವವರೆಗೂ ಯಾವುದೇ ಸಭೆಯಲ್ಲಿ ಯಾವುದೇ ಸನ್ಮಾನವನ್ನು ಸ್ವೀಕರಿಸುವುದಿಲ್ಲ ಒತ್ತಾಯ ಪೂರ್ವಕವಾಗಿ ಯಾರೂ ಕೂಡ ಸನ್ಮಾನ ಮಾಡಬೇಡಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

English summary
Chief minister H.D.Kumaraswamy will not accept any felicitation from public till relief and rehabilitation work for Kodagu victims complete and also appeald the people to donate to CM fund through cheques or DD only.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X