ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜಾತಿ ನೋಡಿ ಆಡಳಿತ ಮಾಡಬೇಡಿ; ಅಧಿಕಾರಿಗಳಿಗೆ ಎಚ್ಡಿಕೆ ಖಡಕ್ ಸೂಚನೆ

By Nayana
|
Google Oneindia Kannada News

Recommended Video

ಜಾತಿ ನೋಡಿ ಆಡಳಿತ ಮಾಡಬಾರದು ಎಂದು ಅಧಿಕಾರಿಗಳಿಗೆ ಎಚ್ ಡಿ ಕೆ ಖಡಕ್ ಸೂಚನೆ | Oneindia Kannada

ಬೆಂಗಳೂರು, ಮೇ 31: ಸರ್ಕಾರದ ಕೆಲಸ ಮಾಡುವಾಗ ಅಧಿಕಾರಿಗಳು ಜಾತಿ ಹಾಗೂ ಗುಂಪುಗಳನ್ನು ನೋಡಿ ಕೆಲಸ ಮಾಡಬಾರದು. ಎಲ್ಲ ಜಾತಿ, ಜನಾಂಗ, ವರ್ಗಗಳಿಗೆ ಸಮನಾದ ರೀತಿಯಲ್ಲಿ ಆಡಳಿತ ನೀಡಬೇಕು ಎಂದು ಸರ್ಕಾರದ ಉನ್ನತ ಅಧಿಕಾರಿಗಳಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಖಡಕ್ ಎಚ್ಚರಿಕೆ ನೀಡಿದ್ದಾರೆ.

ವಿಧಾನ ಸೌಧದ ಸಮಿತಿಯ ಕೊಠಡಿಯಲ್ಲಿ ಗುರುವಾರ ಗೃಹ, ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ, ಉನ್ನತ ಶಿಕ್ಷಣ, ಆರೋಗ್ಯ ಮತ್ತಿತರ ಇಲಾಖೆಗಳ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ ನಂತರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.

ಸಂಪುಟ ವಿಸ್ತರಣೆ, ಸಮನ್ವಯ ಸಮಿತಿ ಬಗ್ಗೆ ಶುಕ್ರವಾರ ತೀರ್ಮಾನ: ಸಿಎಂ ಸಂಪುಟ ವಿಸ್ತರಣೆ, ಸಮನ್ವಯ ಸಮಿತಿ ಬಗ್ಗೆ ಶುಕ್ರವಾರ ತೀರ್ಮಾನ: ಸಿಎಂ

ಪ್ರಾಮಾಣಿಕ ಅಧಿಕಾರಿಗಳಿಗೆ ಸರ್ಕಾರ ರಕ್ಷಣೆ ನೀಡಲಿದೆ ಎಂದು ತಿಳಿಸಿದ ಸಿಎಂ ಕುಮಾರಸ್ವಾಮಿ, ಗೃಹ ಇಲಾಖೆಯಲ್ಲಿ ಉತ್ತಮ ಅಧಿಕಾರಿಗಳಿದ್ದಾರೆ. ಅವರೂ ಸಹ ಉತ್ತಮವಾಗಿ ಕಾರ್ಯನಿರ್ವನಿರ್ವಹಿಸುತ್ತಾರೆ ಎಂದು ತಿಳಿಸಿದರು.

CM warns officials no casteism in governance

ಜನರಲ್ಲಿ ನಂಬಿಕೆ ಹಾಗೂ ನಾಡಿನ ಜನತೆಯ ವಿಶ್ವಾಸ ಮೂಡಿಸುವಂತೆ ಕೆಲಸ ಮಾಡಬೇಕು. ಸರ್ಕಾರ ಅಭಿವೃದ್ಧಿ ಕೆಲಸಗಳ ಬಗ್ಗೆ ತುರ್ತು ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಿದ್ದು, ಚುರುಕಾಗಿ ಕೆಲಸ ಮಾಡಬೇಕಾಗಿದೆ. ಆ ನಿಟ್ಟಿನಲ್ಲಿ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದೇನೆ ಎಂದರು.

English summary
Chief minister H.D.Kumarswamy has warned senior officials in the government that no casteism and discrimination in governance.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X