ಡಿಕೆ ರವಿ ಆತ್ಮಹತ್ಯೆ:ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 26: ಡಿಕೆ ರವಿ ಆತ್ಮಹತ್ಯೆ ಎಂದು ಸಿಬಿಐ ವರದಿ ನೀಡಿರುವ ಹಿನ್ನೆಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಪ್ರತಿಕ್ರಿಯೆ ನೀಡಿದರು.

ಈ ಬಗ್ಗೆ ಮಾತನಾಡಿರುವ ಸಿಎಂ ಸಿದ್ದರಾಮಯ್ಯ ನಾವು ಈ ಪ್ರಕರಣದ ಬಗ್ಗೆ ಮೊದಲೇ ಆತ್ಮಹತ್ಯೆ ಎಂದು ಹೇಳಲಾಗಿತ್ತು. ಆದರೆ ವಿರೋಧ ಪಕ್ಷದವರು ಸಾವಿನ ಮನೆಯಲ್ಲಿ ರಾಜಕೀಯ ಮಾಡಿ ಸದನದ ಕಲಾಪಗಳನ್ನು ಹಾಳು ಮಾಡಿದರು ಎಂದರು.[ಡಿಕೆ ರವಿ ಆತ್ಮಹತ್ಯೆ: ಸಿಬಿಐ ನೀಡಿದ ಸ್ಫೋಟಕ ವರದಿಯಲ್ಲೇನಿದೆ?]

CM siddaramiah reaction in DK Ravi death

ವಿರೋಧ ಪಕ್ಷದವರಿಗೆ ಮೊದಲೇ ತಿಳಿಸಲಾಗಿತ್ತಾದರೂ ರಾಜಕೀಯವಾಗಿ ತೀವ್ರ ಒತ್ತಡವನ್ನು ಹೇರಿ ಸಿಬಿಐಗೆ ಒಪ್ಪಿಸಲಾಯಿತು. ಆದರೆ ಸಿಬಿಐ ವರದಿಯಿಂದಲೂ ಆತ್ಮಹತ್ಯೆ ಎಂಬ ವರದಿಯೇ ಬಂದಿದೆ. ನಾವು ಸಿಐಡಿಗೆ ಒಪ್ಪಿಸಿದ್ದಿದ್ದರೂ ಇದೇ ವರದಿಯೇ ಬರುತ್ತಿತ್ತು. ಆದರೆ ರಾಜ್ಯ ತನಿಖಾ ದಳವನ್ನು ವಿರೋಧ ಪಕ್ಷದವರು ಅನುಮಾನಿಸಿದರು ಎಂದರು.[ಡಿಕೆ ರವಿಯದ್ದು ಆತ್ಮಹತ್ಯೆ : ಒಪ್ಪಲು ತಯಾರಿಲ್ಲ ತಾಯಿ ಗೌರಮ್ಮ]

ಇನ್ನು ವರದಿಯಲ್ಲಿ ಏನೇನಿದೆ ಎಂಬ ಬಗ್ಗೆ ನನಗೆ ಪೂರ್ಣ ಮಾಹಿತಿ ತಿಳಿದಿಲ್ಲ ಪೂರ್ಣ ಮಾಹಿತಿ ತಿಳಿದ ಮೇಲೆ ಅದರ ಬಗ್ಗೆ ಪ್ರತಿಕ್ರಿಯಿಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
CM siddaramiah reaction in DK Ravi death. before i said that it is suicide. Opposition party bowther about that time. Popular IAS officer, who was DC of Kolar was found dead at his apartment in Bengaluru on 16th March, 2015. CBI has mentioned in the final report that his death was due to suicide.
Please Wait while comments are loading...