ಕೈಲಾಸನಾಥನಿಗೆ ನಮೋಃ ನಮೋಃ ಎಂದ ಸಿದ್ದರಾಮಯ್ಯ

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್ 08 : ಉದ್ಯಾನ ನಗರಿ ಬೆಂಗಳೂರಿನಲ್ಲಿ ಸೋಮವಾರ 'ಓಂ ನಮಃ ಶಿವಾಯ', 'ಹರಹರ ಮಹಾದೇವ', ಉದ್ಘೋಷಗಳು ಮೊಳಗಿದವು. ಭಕ್ತಿ ಭಾವದಿಂದ ಜನರು ಶಿವರಾತ್ರಿಯನ್ನು ಆಚರಣೆ ಮಾಡಿದರು.

ಮಲ್ಲೇಶ್ವರಂನಲ್ಲಿರುವ ನಂದೀಶ್ವರ ದೇವಾಲಯ, ಏರ್‌ಪೋರ್ಟ್‌ ರಸ್ತೆಯಲ್ಲಿನ ಶಿವೋಹಂನಲ್ಲಿ ದೇವಾಲಯ, ಗವಿ ಗಂಗಾಧರೇಶ್ವರ ದೇವಾಲಯ, ಜರಗನಹಳ್ಳಿಯ ಗಂಗಾಧರೇಶ್ವರ ದೇವಸ್ಥಾನ, ಚಾಮರಾಜಪೇಟೆಯ ರಾಮೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆಗಳು ನಡೆದವು, ಸಾವಿರಾರು ಜನರು ದೇವರ ದರ್ಶನ ಪಡೆದು ಪುನೀತರಾದರು. [ಹುಬ್ಬಳ್ಳಿ ಜನರ ಭಕ್ತಿಭಾವದ ಮಜ್ಜನದಲ್ಲಿ ಮಿಂದೆದ್ದ ಶಿವ]

ನಗರದ ಹಲವು ದೇವಾಲಯಗಳಲ್ಲಿ ಭಕ್ತಗೀತೆ, ಭಜನೆ ಕಾರ್ಯಕ್ರಮಗಳು ಅಹೋರಾತ್ರಿ ನಡೆದವು. ಜೆ.ಪಿ. ಪಾರ್ಕ್ ಆಟದ ಮೈದಾನದಲ್ಲಿ 18 ಅಡಿ ಶಿವಲಿಂಗ ಪ್ರತಿಷ್ಠಾಪನೆ ಮಾಡಿ ಶಿವರಾತ್ರಿ ಆಚರಣೆ ಮಾಡಲಾಯಿತು. ರಾತ್ರಿ 7 ಗಂಟೆಯಿಂದ ಬೆಳಗ್ಗೆ 6 ಗಂಟೆಯ ತನಕ ಹರಿಕಥೆ, ಹಾಸ್ಯ ಕಾರ್ಯಕ್ರಮಗಳು ನಡೆದವು. [ಮಹಾಶಿವರಾತ್ರಿ ಸಂಭ್ರಮ: ಉಪವಾಸ, ಜಾಗರಣೆ, ಅಭಿಷೇಕ, ಭಜನೆ]

ಶಿವರಾತ್ರಿ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಶ್ರೀ ಮಲೆ ಮಹದೇಶ್ವರ ಸ್ವಾಮಿಯ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. [ಚಿತ್ರಗಳಲ್ಲಿ: ಶಿವ ಶಿವ ಎಂದರೆ ಭಯವಿಲ್ಲವೆಂದ ಭಕ್ತ ಕೋಟಿ]

ದೇವಾಲಯಗಳಲ್ಲಿ ವಿಶೇಷ ಪೂಜೆ

ದೇವಾಲಯಗಳಲ್ಲಿ ವಿಶೇಷ ಪೂಜೆ

ಶಿವರಾತ್ರಿ ಅಂಗವಾಗಿ ಮಲ್ಲೇಶ್ವರಂನಲ್ಲಿರುವ ನಂದೀಶ್ವರ ದೇವಾಲಯ, ಏರ್‌ಪೋರ್ಟ್‌ ರಸ್ತೆಯಲ್ಲಿನ ಶಿವೋಹಂನಲ್ಲಿ ದೇವಾಲಯ, ಗವಿ ಗಂಗಾಧರೇಶ್ವರ ದೇವಾಲಯ ಸೇರಿದಂತೆ ಬೆಂಗಳೂರು ನಗರದ ವಿವಿಧ ದೇವಾಲಯಗಳಲ್ಲಿ ಸೋಮವಾರ ವಿಶೇಷ ಪೂಜೆ ನಡೆಯಿತು. ಸಾವಿರಾರು ಜನರು ದೇವರ ದರ್ಶನ ಪಡೆದು ಪುನೀತರಾದರು.

ಮಹದೇಶ್ವರ ದೇವಾಲಯಕ್ಕೆ ಭೇಟಿ

ಮಹದೇಶ್ವರ ದೇವಾಲಯಕ್ಕೆ ಭೇಟಿ

ಸೋಮವಾರ ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಮರಾಜಪೇಟೆಯಲ್ಲಿರುವ ಶ್ರೀ ಮಲೆ ಮಹದೇಶ್ವರ ಸ್ವಾಮಿಯ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

'ನಾನು ಕೂಡ ಆಸ್ತಿಕ'

'ನಾನು ಕೂಡ ಆಸ್ತಿಕ'

'ಅನೇಕರು ಸಿದ್ದರಾಮಯ್ಯ ನಾಸ್ತಿಕ ಎಂದು ಅಪಪ್ರಚಾರ ಮಾಡುತ್ತಾರೆ. ನಾನು ಕೂಡ ಆಸ್ತಿಕ. ನಾನು ನಂಬಿಕೆಯನ್ನು ನಂಬುತ್ತೇನೆ, ಒಳಿತಿನ ಹಿತದೃಷ್ಟಿಯಿಂದ ಇರುವ ನಂಬಿಕೆಗಳಿಗೆ ನಾನು ಬೆಲೆ ಕೊಡುತ್ತೇನೆ' ಎಂದು ಸಿದ್ದರಾಮಯ್ಯ ಅವರು ಕೆಲವು ದಿನಗಳ ಹಿಂದೆ ಹೇಳಿದ್ದರು.

ಜಮೀರ್ ಅಹಮದ್ ಖಾನ್ ಸಾಥ್

ಜಮೀರ್ ಅಹಮದ್ ಖಾನ್ ಸಾಥ್

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆಗೆ ಚಾಮರಾಜಪೇಟೆ ಕ್ಷೇತ್ರದ ಜೆಡಿಎಸ್ ಶಾಸಕ ಜಮೀರ್ ಅಹಮದ್ ಖಾನ್ ಮತ್ತು ಕಾಂಗ್ರೆಸ್ ಮುಖಂಡ ಜಿ.ಎ.ಭಾವ ಅವರು ದೇವಾಲಯಕ್ಕೆ ಭೇಟಿ ನೀಡಿದ್ದರು.

ಶಿವನಿಗೆ ವಂದಿಸಿದ ಇಂಧನ ಸಚಿವರು

ಶಿವನಿಗೆ ವಂದಿಸಿದ ಇಂಧನ ಸಚಿವರು

ಶಿವರಾತ್ರಿ ಹಿನ್ನೆಲೆಯಲ್ಲಿ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರು ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka Chief Minister Siddaramaiah on Monday, March 7th 2016 evening visited Malai Mahadeshwara temple Chamarajpet, Bengaluru on the occasion of Maha Shivaratri.
Please Wait while comments are loading...