ಗ್ರೀನ್ ಪಾಥ್ ತೋಟಕ್ಕೆ ಸಿದ್ದರಾಮಯ್ಯ 'ಹಸಿರು' ನಿಶಾನೆ

Written By:
Subscribe to Oneindia Kannada

ಬೆಂಗಳೂರು, ಏಪ್ರಿಲ್, 20: ಪರಿಸರ ಮಾಲಿನ್ಯದ ಕಾಲದಲ್ಲಿ ಆರೋಗ್ಯ ಕೆಡಿಸಿಕೊಂಡಿರುವ ನಾವು ಹಸಿರು-ಉಸಿರಿನ ಬಗ್ಗೆ ಮಾತನಾಡುತ್ತಿದ್ದೇವೆ. ಇಂಥ ಒಂದು ಸುಂದರ ಪರಿಸರ ಪ್ರೇಮದ ಕಾಳಜಿ ಮೆರೆಯುತ್ತಿರುವ ಗ್ರೀನ್ ಪಾತ್ ಸಮೂಹ ಇದೀಗ ಒಂದು ಹೆಜ್ಜೆ ಮುಂದೆ ಹೋಗಿದೆ..

ವಕೀಲರೂ, ಸಾವಯವ ಕೃಷಿಕರೂ ಆಗಿರುವ ಎಚ್.ಆರ್. ಜಯರಾಮ್ ಅವರಿಂದ ಸ್ಥಾಪಿತವಾದ ದಿ ಗ್ರೀನ್ ಪಾತ್ ಸಮೂಹದ ಸಾವಯವ ತೋಟ, ಸಾವಯವ ಪದಾರ್ಥಗಳ ಮಳಿಗೆ ಮತ್ತು ಇಕೋ ಹೋಟೆಲ್ ಸಮೂಹಕ್ಕೆ ಇದೀಗ ಹಸಿರು ತೋಟ ಸೇರ್ಪಡೆಯಾಗಿದೆ.[ಹಳೆ ಸಿಎಫ್‌ಎಲ್ ಬಲ್ಬ್ ಹಿಂದಕ್ಕೆ ನೀಡಿ, 10 ರು. ಪಡ್ಕೊಳ್ಳಿ]

bengaluru

ಬೆಂಗಳೂರು ನಗರದ ಮಂತ್ರಿ ಮಾಲ್ ಸಮೀಪ, ಮಲ್ಲೇಶ್ವರಂ ಮೆಟ್ರೋ ಸ್ಟೇಷನ್ ಎದುರು ಸುಮಾರು ಇಪ್ಪತ್ತು ಸಾವಿರ ಚದರಡಿ ವಿಸ್ತೀರ್ಣದ ಕಟ್ಟಡದೊಳಗೆ, ಕಿಟಕಿ ಮತ್ತು ಕಿಂಡಿಗಳಿಂದ ಗಾಳಿ ಮತ್ತು ಬೆಳಕು ಕೊಯಿಲನ್ನು ಮಾಡಲಾಗಿದೆ ಮತ್ತು ಈ ಹಿಂದೆ ಈ ಕಟ್ಟಡ ಹವಾ ನಿಯಂತ್ರಣ ವ್ಯವಸ್ಥೆಗೆ ಒಳಪಟ್ಟಿದ್ದು ಅದರ ಬದಲು ನೀರಿನ ಮೂಲಕ ತಂಪು ನಿಯಂತ್ರಣ ವ್ಯವಸ್ಥೆಯನ್ನು ಮಾಡಲಾಗಿದ್ದು ತೋಟಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಏಪ್ರಿಲ್ 24 ರಂದು ಲೋಕಾರ್ಪಣೆ ಮಾಡಲಿದ್ದಾರೆ.

ಕಟ್ಟಡದ ಮೇಲ್ಛಾವಣಿಯಲ್ಲಿ ಸೌರ ವಿದ್ಯುತ್ ಉತ್ಪಾದನೆ ಮಾಡುತ್ತಿದ್ದು, ಒಂದು ಅಂತಸ್ತಿಗೆ ಅದನ್ನು ವಿನಿಯೋಗಿಸಲಾಗುತ್ತಿದೆ. ಇಲ್ಲಿನ ಎಲ್ಲಾ ಒಳಾಂಗಣ ವಿನ್ಯಾಸವನ್ನು ಹಳೆಯ ಮತ್ತು ಪ್ಯಾಕಿಂಗ್ ಮರಗಳ ಮರು ಉಪಯೋಗ ಮಾಡಿ ನಿರ್ಮಿಸಲಾಗಿದೆ. ಇಲ್ಲಿ ನಿರ್ಮಿಸಲಾದ ಒಳ ಭಾಗದ ಗೋಡೆಗಳನ್ನು ಇಲ್ಲೇ ಉತ್ಪಾದಿಸಲಾದ ಹಸಿ ಮಣ್ಣಿನ ಇಟ್ಟಿಗೆಗಳಿಂದ ಕಟ್ಟಲಾಗಿದೆ.[ಬೆಂಗಳೂರು ಕೆರೆ ತೊಳೆಯಲು ಕೇಂದ್ರದಿಂದ 800 ಕೋಟಿ]

ಪರಿಸರ ಪ್ರೇಮ ಸಾರುವ ಹೋಟೆಲ್
ಕೆಲವು ಗೋಡೆಗಳಿಗೆ ಮಣ್ಣನ್ನೇ ಬಳಸಿ ಬಣ್ಣ ಹಾಕಲಾಗಿದೆ. ಒಳಾಂಗಣದಲ್ಲಿ ಹೆಚ್ಚು ಆಮ್ಲಜನಕ ಹೊರ ಸೂಸುವ ಗಿಡಗಳನ್ನು ಹಾಕಲಾಗಿದ್ದು, ವಾತಾವರಣದಲ್ಲಿ ಆರೋಗ್ಯ ಮತ್ತು ಆಹ್ಲಾದಕರ ವಾತಾವರಣವನ್ನು ಉಂಟು ಮಾಡಲಾಗಿದೆ. ಈ ಗಿಡಗಳಿಗೆ ಕೆಲವು ಭಾಗದಲ್ಲಿ ನೇರವಾಗಿ ಸೂರ್ಯನ ಕಿರಣಗಳನ್ನು ಹಾಯಿಸಲು ಸೋಲಾರ್ ಟ್ಯೂಬ್‍ಗಳನ್ನು ಅಳವಡಿಸಲಾಗಿದೆ. ತ್ಯಾಜ್ಯವನ್ನು ಸಮರ್ಪಕವಾಗಿ ವಿಂಗಡಿಸಿ ಹಸಿ ತ್ಯಾಜ್ಯವನ್ನುಬಳಸಿ ಬಯೋಗ್ಯಾಸ್ ಉತ್ಪಾದಿಸಲಾಗಿದೆ.

ಇಡೀ ಕಟ್ಟಡದ ಸುತ್ತ ಮರಗಿಡಗಳನ್ನು ಬೆಳೆಸಿದ್ದು ಮತ್ತು ತಾರಸಿಯ ಮೇಲೆ ಸಾವಯವ ಕೈ ತೋಟವನ್ನು ನಿರ್ಮಿಸಿ ತರಕಾರಿ, ಹಣ್ಣು ಮತ್ತು ಗಿಡಮೂಲಿಕೆಗಳನ್ನು ಬೆಳೆದು ಬಳಸಲಾಗುತ್ತಿದೆ. ಒಟ್ಟಾರೆಯಾಗಿ ವಿದ್ಯುತ್-ಶಕ್ತಿ ಉತ್ಪಾದನೆ-ಬಳಕೆ, ಕಸ ನಿರ್ವಹಣೆ, ತಾರಸಿ ತೋಟಗಳೊಂದಿಗೆ ನಗರ ಸುಸ್ಥಿರತೆಯ ಮಾದರಿಗಳೂ ಇಲ್ಲಿವೆ.[ತಾರಸಿ ತೋಟ ನಿರ್ಮಿಸುವುದರ ಲಾಭಗಳು]

ಭೂದಿನದಂದು ಪ್ರಾರಂಭೋತ್ಸವ
ಏಪ್ರಿಲ್ 22 ರಂದು ನಡೆಯಲಿರುವ ಭೂಮಿ ಹಬ್ಬ ಕಾರ್ಮಕ್ರಮದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕøತರಾದ ಡಾ. ಚಂದ್ರಶೇಖರ್ ಕಂಬಾರ್ ಅವರು ತೋಟಕ್ಕೆ ಅಧಿಕೃತ ಚಾಲನೆ ನೀಡಲಿದ್ದಾರೆ. ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ದಿನೇಶ್ ಗುಂಡೂರಾವ್ ಭಾಗವಹಿಸಲಿದ್ದಾರೆ. ಹೆಚ್ಚಿನ ಮಾಹಿತಿಗೆ ಮೊ: 9538863537 ಸಂಪರ್ಕಿಸಬಹುದು.

-
-
-
-
-

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
A peaceful co-existence with our planet is the need of the hour, and the path to that are holistic green living with greening our agriculture, industry, commerce, business including our home. This is the Green Path we all have to walk on. And on this Green Path, our way of life has to change to empower our communities through organic farming, eco-conscious choices, and sustainable living habits.On April 24 th Chief Minister Siddaramaiah will Formally Inaugurate this Organic Hub.
Please Wait while comments are loading...