'ಮಾನ್ಯ ಮುಖ್ಯಮಂತ್ರಿಗಳೇ, ಜನಸಮಾನ್ಯರಿಗೆ ಮುಷ್ಕರ ಭಾಗ್ಯ ಬೇಡ!'

Posted By:
Subscribe to Oneindia Kannada

ಬೆಂಗಳೂರು, ಜುಲೈ 24: ರಾಜ್ಯದಲ್ಲಿ ಸಿದ್ದರಾಮಯ್ಯನವರ ನೇತೃತ್ವದ ರಾಜ್ಯ ಸರ್ಕಾರ ಆಡಳಿತಕ್ಕೆ ಬಂದಾಗಿನಿಂದಲೂ ಜನಸಾಮಾನ್ಯರಿಗೆ ಒಂದಿಲ್ಲೊಂದು ರೀತಿ ತಲೆನೋವಾಗಿ ಪರಿಣಮಿಸುತ್ತಿದೆ.

ಜನಸಾಮಾನ್ಯರಿಗಾಗಿ ಕೆಲಸ ಮಾಡಬೇಕಿರುವ ಸರ್ಕಾರಿ ನೌಕರರ ಮುಷ್ಕರಕ್ಕೆ ಅನುವು ಮಾಡಿಕೊಡುತ್ತಾ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡುತ್ತಿದೆ ಎಂದು ಆಮ್ ಆದ್ಮಿ ಪಕ್ಷದ ಕರ್ನಾಟಕದ ಘಟಕ ಆರೋಪಿಸಿದೆ.[ರಾಜ್ಯಾದ್ಯಂತ 2 ದಿನ ಶಾಲೆ ಕಾಲೇಜುಗಳಿಗೆ ರಜೆ: ಸಿಎಂ]

ಶಿಕ್ಷಕರ ಮುಷ್ಕರ, ಪೊಲೀಸರ ಮುಷ್ಕರ, ಲಾರಿ ಮುಷ್ಕರ, ಸಾರಿಗೆ ಸಂಸ್ಥೆಗಳ ನೌಕರರ ಮುಷ್ಕರಗಳು ಪ್ರತಿದಿನದ ಸುದ್ದಿಯಾಗುತ್ತಿವೆ. ಇದಕ್ಕೆ ನೇರ ಕಾರಣ ರಾಜ್ಯ ಸರ್ಕಾರದ ಬೇಜವಾಬ್ದಾರಿತನ ಹಾಗೂ ಮಂತ್ರಿ ಮಂಡಲದ ನಿಷ್ಕ್ರಿಯತೆ ಎಂಬುದು ಲೋಕಕ್ಕೇ ತಿಳಿದ ಸತ್ಯವಾಗಿದೆ.

ಮುಷ್ಕರ ಭಾಗ್ಯ ಬೇಡ: ಕಳೆದ ವರ್ಷ ನವೆಂಬರ್ ತಿಂಗಳಲ್ಲಿಯೇ ಸಾರಿಗೆ ಸಂಸ್ಥೆಯ ನೌಕರರು ತಮ್ಮ ವೇತನವನ್ನು ಶೇ.35% ಹೆಚ್ಚಿಸುವಂತೆ ಹಾಗೂ ಇನ್ನಿತರ 42 ನ್ಯಾಯಯುತ ಬೇಡಿಕೆಗಳನ್ನು ಸರ್ಕಾರದ ಮುಂದೆ ತಂದಿದ್ದರೂ, ಸಾರಿಗೆ ಸಂಸ್ಥೆಯ ನೌಕರರೊಂದಿಗೆ ಕಳೆದ ಎಂಟು ತಿಂಗಳಿಂದ ಯಾವುದೇ ಮಾತುಕತೆ ನಡೆಸದೆ ಬೇಜವಾಬ್ದಾರಿತನವನ್ನು ಪ್ರರ್ದಶಿಸಿದ್ದರಿಂದ ಇಂದು ಸಾರ್ವಜನಿಕರು ತೊಂದರೆಗೆ ಒಳಗಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. [ಪರ್ಯಾಯ ವ್ಯವಸ್ಥೆ ಟುಸ್, ಬಿಎಂಟಿಸಿ ಬಸ್ ಸಂಚಾರ ವಿರಳ]

ಮುಷ್ಕರವನ್ನು ಸಂಧಾನದಿಂದ ತಡೆಯಲು ವಿಫಲರಾಗಿರುವುದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿಯವರ ನಿಷ್ಕ್ರಿಯತೆಯನ್ನೂ ಸಾದರಪಡಿಸುತ್ತದೆ. ಒಂದೆಡೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ದಿನಬಳಕೆ ವಸ್ತುಗಳ ಏರುತ್ತಿರುವ ದರಗಳನ್ನು ತಗ್ಗಿಸಲು ವಿಫಲವಾಗುತ್ತಿದ್ದರೆ, ಇತ್ತ ಕಾಂಗ್ರೆಸ್ ಸರ್ಕಾರ ಮುಷ್ಕರ ಭಾಗ್ಯ ಒದಗಿಸುವ ಮೂಲಕ ಜನಸಾಮಾನ್ಯರ ನಿದ್ದೆಗೆಡಿಸುತ್ತಿದೆ.

ಮಾತುಕತೆಯ ಮೂಲಕ ಪರಿಹಾರವಾಗಬೇಕಿದ್ದ ವಿಷಯ

ಮಾತುಕತೆಯ ಮೂಲಕ ಪರಿಹಾರವಾಗಬೇಕಿದ್ದ ವಿಷಯ

ಮಾತುಕತೆಯ ಮೂಲಕ ಪರಿಹಾರವಾಗಬೇಕಿದ್ದ ವಿಷಯವನ್ನು ಜನರಿಗೆ ತೊಂದರೆ ಉಂಟುಮಾಡುವ ವಿಷಯವಾಗಿಸಿದಕ್ಕೆ ನೇರ ಕಾರಣರಾಗಿರುವ ಮಾನ್ಯ ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿಯವರು, ಒಂದೆಡೆ ಆರ್.ಟಿ.ಒಗಳಲ್ಲಿ ಭ್ರಷ್ಟಾಚಾರ ನಿಲ್ಲಿಸುವಲ್ಲಿ ವಿಫಲರಾಗಿದ್ದರೆ, ಇನ್ನೊಂದೆಡೆ ಸಾರಿಗೆ ಇಲಾಖೆಗಳನ್ನು ಭ್ರಷ್ಟಚಾರದ ಕೂಪವಾಗಿಸಿದ್ದಾರೆ. ಇಡೀ ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಶುಲ್ಕ ರಾಜ್ಯದ ಸಾರಿಗೆ ಸಂಸ್ಥೆಗಳದ್ದಾಗಿದೆ, ಆದರೂ ಸಾರಿಗೆ ಸಂಸ್ಥೆಗಳು ನಷ್ಟದ ಹಾದಿ ಹಿಡಿದಿವೆ.

ಹಣ ಎಲ್ಲಿ ಖರ್ಚಾಗುತ್ತಿದೆ ಎನ್ನುವ ಸರಿಯಾದ ಲೆಕ್ಕ

ಹಣ ಎಲ್ಲಿ ಖರ್ಚಾಗುತ್ತಿದೆ ಎನ್ನುವ ಸರಿಯಾದ ಲೆಕ್ಕ

ಜನರಿಂದ ಸಂಗ್ರಹವಾಗುವ ಹಣ ಎಲ್ಲಿ ಖರ್ಚಾಗುತ್ತಿದೆ ಎನ್ನುವ ಸರಿಯಾದ ಲೆಕ್ಕ ರಾಜ್ಯದ ಯಾವುದೇ ಸಾರಿಗೆ ಸಂಸ್ಥೆಗಳಲ್ಲಿ ಲಭ್ಯವಿಲ್ಲ. ಸಾರಿಗೆ ಇಲಾಖೆಯಲ್ಲಿ ಭ್ರಷ್ಟಾಚಾರವನ್ನು ತಗ್ಗಿಸಿದ್ದೇ ಆದಲ್ಲಿ ನೌಕರರ ಬೇಡಿಕೆಗಳನ್ನೂ ಪೂರೈಸಬಹುದು, ಜನಸಾಮಾನ್ಯರ ಮೇಲೆ ಟಿಕೆಟ್ ಹೊರೆಯನ್ನು ಕಡಿಮೆ ಮಾಡಬಹುದೆಂದು ಆಮ್ ಆದ್ಮಿ ಪಾರ್ಟಿ-ಕರ್ನಾಟಕ ನಂಬುತ್ತದೆ.

 ಸಾರಿಗೆ ಸಂಸ್ಥೆಗಳನ್ನು ನಷ್ಟವಾದರೆ ಸಚಿವರು ಸಿಎಂ ಕಾರಣ

ಸಾರಿಗೆ ಸಂಸ್ಥೆಗಳನ್ನು ನಷ್ಟವಾದರೆ ಸಚಿವರು ಸಿಎಂ ಕಾರಣ

ಜನಪರ ಕ್ರಮಗಳನ್ನು ಜರುಗಿಸುವಲ್ಲಿ ವಿಫಲರಾದ, ಮುಷ್ಕರಗಳಿಗೆ ಕಾರಣರಾಗುವ ಮೂಲಕ, ಸಾರಿಗೆ ಸಂಸ್ಥೆಗಳನ್ನು ನಷ್ಟದ ಹಾದಿ ಹಿಡಿಸಿದ ಶ್ರೇಯ ಹೊಂದಿರುವ ಸಾರಿಗೆ ಸಚಿವರು ಈ ಕೂಡಲೇ ರಾಜೀನಾಮೆ ನೀಡಬೇಕೆಂದು ಆಮ್ ಆದ್ಮಿ ಪಾರ್ಟಿ-ಕರ್ನಾಟಕ ಆಗ್ರಹಿಸುತ್ತದೆ.ಸಾರಿಗೆ ಸಂಸ್ಥೆಗಳನ್ನು ನಷ್ಟವಾದರೆ ಸಚಿವರು ಹಾಗೂ ಸಿಎಂ ಸಿದ್ದರಾಮಯ್ಯ ಹೊಣೆಗಾರರಾಗುತ್ತಾರೆ.

ಪರ್ಯಾಯ ವ್ಯವಸ್ಥೆ ಮಾಡುತ್ತೇವೆ ಎಂಬ ದುರಹಂಕಾರ

ಪರ್ಯಾಯ ವ್ಯವಸ್ಥೆ ಮಾಡುತ್ತೇವೆ ಎಂಬ ದುರಹಂಕಾರ

ಮಾನ್ಯ ಮುಖ್ಯಮಂತ್ರಿಗಳು ತತಕ್ಷಣವಾಗಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಆಮ್ ಆದ್ಮಿ ಪಾರ್ಟಿ-ಕರ್ನಾಟಕ ಆಗ್ರಹಿಸುತ್ತದೆ. 1 ಕೋಟಿ ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ ಮಾಡುತ್ತೇವೆ ಎಂಬ ದುರಹಂಕಾರ ಹಾಗೂ ಅಸಾಧ್ಯ ಹೇಳಿಕೆಗಳ ಮೂಲಕ ಸಾರ್ವಜನಿಕರನ್ನು ದಿಕ್ಕು ತಪ್ಪಿಸುವುದನ್ನು ಬಿಟ್ಟು, ಜನಪರ ಕ್ರಮ ಜರುಗಿಸುವಂತೆ ಆಮ್ ಆದ್ಮಿ ಪಾರ್ಟಿ-ಕರ್ನಾಟಕ ರಾಜ್ಯ ಸರ್ಕಾರಕ್ಕೆ ಆಗ್ರಹಿಸುತ್ತದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
AAP demands that the Government of Karnataka immediately start the dialogue process, negotiate &fulfill the demands of Transport Corporation Workers to end the strike. By allowing the Government workers to go on strike, the life of common man is being inconvenienced daily. Strikes by Teachers, Police, Lorry Owners, Transport workers are daily headlines.
Please Wait while comments are loading...