ಯಡಿಯೂರಪ್ಪ ಮನೆಗೆ ಬಂದವರು ಮಾತ್ರ ದಲಿತರಾ: ಸಿಎಂ ಪ್ರಶ್ನೆ

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 29: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಮನೆಗೆ ಬಂದು ಆತಿಥ್ಯ ಸ್ವೀಕರಿಸಿದವರು ಮಾತ್ರ ದಲಿತರಾ, ಉಳಿದವರು ದಲಿತರಲ್ಲವಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ದಲಿತ ಕುಟುಂಬಗಳಿಗೆ ಊಟ ಬಡಿಸಿ ಪ್ರತಿ- ಆತಿಥ್ಯ ನೀಡಿದ ಬಿಎಸ್ ವೈ

ಇತ್ತೀಚೆಗೆ, ಬಿಜೆಪಿ ಸಂಘಟನೆಗಾಗಿ ರಾಜ್ಯ ಪ್ರವಾಸ ಕೈಗೊಂಡಿದ್ದ ಯಡಿಯೂರಪ್ಪ ಅವರು, ವಿವಿಧ ಜಿಲ್ಲೆಗಳಲ್ಲಿ ದಲಿತರ ಮನೆಗೆ ಹೋಗಿ ಆತಿಥ್ಯ ಸ್ವೀಕರಿಸಿದ್ದರು.

CM Siddaramaiah slams Yeddyurappa for his 'Lunch with Dalit' Challenge

ಆ ಎಲ್ಲಾ ದಲಿತ ಕುಟುಂಬಗಳನ್ನು ಆಗಸ್ಟ್ 28ರಂದು ತಮ್ಮ ಮನೆಗೆ ಆಹ್ವಾನಿಸಿದ್ದ ಯಡಿಯೂರಪ್ಪ ಎಲ್ಲರಿಗೂ ಆತಿಥ್ಯ ನೀಡಿದ್ದರು. ತಾವೂ ಅವರ ಜತೆಯಲ್ಲೇ ಊಟ ಮಾಡಿದ್ದರು. ಆ ಮೂಲಕ, ಕಾಂಗ್ರೆಸ್ ನಾಯಕರಿಗೆ ಸವಾಲು ಎಸೆದಿದ್ದ ಬಿಎಸ್ ವೈ, ಕಾಂಗ್ರೆಸ್ ನಾಯಕರೂ ತಮ್ಮ ಮನೆಗೆ ಹೀಗೆ ದಲಿತರನ್ನು ಕರೆಸಿ ಊಟ ತಿಂಡಿ ಮಾಡಲಿ ಎಂದಿದ್ದರು.

ನಾಳೆ ಯಡಿಯೂರಪ್ಪ ರಾಜಕೀಯ ಭವಿಷ್ಯ ನಿರ್ಧಾರ?

ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ''ಯಡಿಯೂರಪ್ಪ ಅವರ ಮನೆಗೆ ಬಂದವರು ಮಾತ್ರ ದಲಿತರಾ ಎಂದು ಪ್ರಶ್ನಿಸಿದ್ದಲ್ಲದೆ, ನಾವು ನಿತ್ಯವೂ ದಲಿತರ ಮನೆಯಲ್ಲೇ ಊಟ ಮಾಡುತ್ತಲೇ ಇದ್ದೇವೆ. ಯಾವತ್ತೋ ಒಂದು ದಿನ ಊಟ ಮಾಡಿದ ಮಾತ್ರಕ್ಕೆ ಸವಾಲೆಸೆದಿದ್ದಾರೆ'' ಎಂದು ಹಾಸ್ಯ ಮಾಡಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Chief Minister of Karnataka Siddaramaiah hits back to the challenge thrown by the former Chief minister BS Yeddyuappa as Congress leader also should do lunch with Dalits, if they can, as he did on August 28th 2017 at his residence in Bengaluru.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ