ಉಪ ಸಮರ ಗೆದ್ದ ಕಾಂಗ್ರೆಸ್ ವೀರ ಸಿದ್ದು, ಪರಂಗೆ ಹೈಕಮಾಂಡ್ ಬುಲಾವ್!

Posted By:
Subscribe to Oneindia Kannada

ಬೆಂಗಳೂರು, ಏಪ್ರಿಲ್ 13:ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ ಅವರು ಏಪ್ರಿಲ್ 14ರ ಸಂಜೆ ವೇಳೆಗೆ ವಿಮಾನ ಹತ್ತಿ ದೆಹಲಿಗೆ ತೆರಳಲಿದ್ದಾರೆ. ಉಪ ಚುನಾವಣೆ ಫಲಿತಾಂಶ ಕಂಡು ಸಕತ್ ಖುಷಿಯಾಗಿರುವ ಹೈಕಮಾಂಡ್ ನಾಯಕರು, ಕರ್ನಾಟಕದ ಈ ನಾಯಕರಿಗೆ ಏನು ಇನಾಮು ನೀಡುತ್ತಾರೋ ಗೊತ್ತಿಲ್ಲ.

ಫಲಿತಾಂಶ ಏನೇ ಬಂದರೂ 2018ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿಯಾಗುತ್ತಿತ್ತು. ಈಗ ಎರಡು ಕಡೆ ಕೈ ಪಡೆ ವಿಜಯೋತ್ಸವ ನಡೆಯುತ್ತಿದೆ. ಈಗ ಈ ಫಲಿತಾಂಶದಆಧಾರದ ಮೇಲೆ ಹಳೆ ಮೈಸೂರು ಹಾಗೂ ಕರ್ನಾಟಕ ಕೆಲ ಕ್ಷೇತ್ರಗಳ ಬಗ್ಗೆ ರಣತಂತ್ರವನ್ನು ಪುನರ್ ರೂಪಿಸಬೇಕಾಗುತ್ತದೆ.

CM Siddaramaiah, Parameshwar to Meet High Command after By poll victory

ಈ ಗೆಲುವಿನಿಂದಸಿಎಂ ಸಿದ್ದರಾಮಯ್ಯ ಅವರಿಗೆ ಆನೆಬಲ ಬಂದಂತೆ ಆಗಿದೆ. ಪಕ್ಷದಲ್ಲೂ ಅವರ ಮಾತಿಗೆ ಇನ್ನಷ್ಟು ಬೆಲೆ ಸಿಗುತ್ತದೆ. ಉಳಿದ ಒಂದೂವರೆ ವರ್ಷದಲ್ಲಿ ಸಂಪುಟ ವಿಸ್ತರಣೆ, ಕೆಪಿಸಿಸಿ ಅಧ್ಯಕ್ಷರ ನೇಮಕ, ಕೊನೆಗೆ ಟಿಕೆಟ್ ಹಂಚಿಕೆಯಲ್ಲೂ ಅವರ ಮಾತಿಗೆ ಹೈಕಮಾಂಡ್ ತಲೆದೂಗಲಿದೆ. ಈ ಬಗ್ಗೆ ದೆಹಲಿಯಲ್ಲಿ ಚರ್ಚೆ ನಡೆಯಲಿದೆ.

ಸರ್ಕಾರದ ಯೋಜನೆಗಳ ಬಗ್ಗೆ ಜನರಲ್ಲಿ ಒಲವಿದೆ, ಆಡಳಿತ ವಿರೋಧಿ ಅಲೆ ಇಲ್ಲ ಎಂಬ ಸಂದೇಶ ಮುಂದಿನ ವಿಧಾನಸಭೆ ಚುನಾವಣೆ ಮೇಲೆ ಪರಿಣಾಮ ಬೀರಲಿದೆ. ಅಹಿಂದ, ದಲಿತ, ಮುಸ್ಲಿಂ ಮತಗಳು ಈಗಲೂ ಕಾಂಗ್ರೆಸ್ ಪರ ಇರುವ ಮುನ್ಸೂಚನೆ ಸಿಕ್ಕಿರುವುದರಿಂದ
ಮುಂದಿನ ಚುನಾವಣೆಯ ಜಾತಿ ಲೆಕ್ಕಾಚಾರ, ರಣತಂತ್ರಕ್ಕೆ ಅನುಕೂಲಕರ ವೇದಿಕೆಯನ್ನು ಈ ಚುನಾವಣೆ ನಿರ್ಮಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Chief Minister Siddaramaiah and KPCC President G Parameshwara will be in Delhi on Friday(April 14) to consult the party high command to finalise next course of action to be taken in Karnataka.
Please Wait while comments are loading...