ಡಾ. ಯತೀಂದ್ರ ರಾಜಕೀಯಕ್ಕೆ ಬಂದರೆ ನೋ ಪ್ರಾಬ್ಲಂ: ಸಿದ್ದರಾಮಯ್ಯ

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 30: ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಅವರ ಉತ್ತರಾಧಿಕಾರಿ ಎಂಬ ಪ್ರಶ್ನೆಗೆ ಕಾರ್ಯಕರ್ತರು ಉತ್ತರ ಕಂಡುಕೊಂಡಿದ್ದಾರೆ. ರಾಕೇಶ್ ಸಿದ್ದರಾಮಯ್ಯ ಅವರ ಅಕಾಲಿಕ ಮರಣದ ಆಘಾತದಿಂದ ಹೊರ ಬಂದು ಅವರ ಸೋದರ ಡಾ. ಯತೀಂದ್ರರನ್ನು ರಾಜಕೀಯ ರಂಗ ಸೇರಲು ಓಲೈಸಿದ್ದಾರೆ. ಈ ಬಗ್ಗೆ ಬಂದಿರುವ ಸುದ್ದಿಗಳಿಗೆ ಸಿದ್ದರಾಮಯ್ಯ ಅವರು ಕೂಡಾ ಪ್ರತಿಕ್ತಿಯಿಸಿದ್ದಾರೆ.

'ಯತೀಂದ್ರ ರಾಜಕೀಯಕ್ಕೆ ಬರಲು ಒತ್ತಾಯ ಮಾಡಿಲ್ಲ. ಬಂದರೆ ಅಭ್ಯಂತರವಿಲ್ಲ' ಎಂದು ಸಿದ್ದರಾಮಯ್ಯ ಅವರು ಸೋಮವಾರ ಸ್ಪಷ್ಟಪಡಿಸಿದರು. ಇದು ಕಾರ್ಯಕರ್ತರ ನಿರ್ಧಾರ, ನಾವು ಎಲ್ಲಿದ್ದರೂ ಜನರ ಸೇವೆಗೆ ಬದ್ಧರಾಗಿರಬೇಕು ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಈ ಮೂಲಕ ಕಿರಿಯ ಮಗನ ರಾಜಕೀಯ ಎಂಟ್ರಿಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. [ರಾಜಕೀಯ ಸೇರಲು ಒತ್ತಡ ಇರುವುದು ನಿಜ: ಯತೀಂದ್ರ ಸಿದ್ದರಾಮಯ್ಯ]

CM Siddaramaiah on Dr Yatindra's entry into active politics

ಅಪ್ಪನಿಗೆ ಸಹಾಯವಾಗಲೆಂದು ಕ್ಷೇತ್ರ ಪ್ರವಾಸ ಮಾಡುತ್ತಿದ್ದೇನೆ. ವಾರದಲ್ಲಿ 2-3 ದಿನಗಳು ಇಲ್ಲಿಗೆ ಬರುತ್ತಿದ್ದು, ಉಳಿದ ದಿನಗಳಲ್ಲಿ ವೈದ್ಯ ವೃತ್ತಿ ಮಾಡುತ್ತಿದ್ದೇನೆ. ಸದ್ಯಕ್ಕೆ ಚುನಾವಣೆಗೆ ಸ್ಪಧಿಸುವ ಉದ್ದೇಶವಿಲ್ಲ. ಆ ಸಮಯ ಬಂದಾಗ ನೋಡೋಣ ಎಂದು ಡಾ.ಯತೀಂದ್ರ ಪ್ರತಿಕ್ರಿಯಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಮೈಸೂರಿನ ಟಿ.ಕೆ.ಲೇಔಟ್ ನಲ್ಲಿರುವ ನಿವಾಸಕ್ಕೆ ಇತ್ತೀಚೆಗೆ ಬಂದಿದ್ದ ಡಾ.ಯತೀಂದ್ರ ಅವರನ್ನು ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಭೇಟಿ ಮಾಡಿ ಅಭಿನಂದಿಸಿದ್ದರು. ನೀವು ರಾಜಕೀಯ ಪ್ರವೇಶ ಮಾಡಬೇಕು, ನಿಮ್ಮ ಸೇವೆ ವರುಣಾ ಕ್ಷೇತ್ರಕ್ಕೆ ಹಾಗೂ ರಾಜ್ಯಕ್ಕೆ ಅತ್ಯವಶ್ಯ. ನೀವು ಜನಸೇವೆಗೆ ಮುಂದಾಗಬೇಕು ಎಂದು ಆಗ್ರಹಪೂರ್ವಕ ಮನವಿ ಮಾಡಿದ್ದರು.

ಕಾರ್ಯಕರ್ತರ ಮನವಿಗೆ ಸ್ಪಂದಿಸಿರುವ ಯತೀಂದ್ರ ಅವರು ರಾಜಕೀಯ ಪ್ರವೇಶಕ್ಕೆ ಮುನ್ನುಡಿ ಬರೆಯಲು ಸಿದ್ದರಾಗಿದ್ದು, ಇದಕ್ಕೆ ಸಿಎಂ ಸಿದ್ದರಾಮಯ್ಯ ಅವರ ಸಮ್ಮತಿ ಸಿಕ್ಕಿರುವುದು ಕಾರ್ಯಕರ್ತರ ಸಂತಸ ಇಮ್ಮಡಿಗೊಳಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
CM Siddaramaiah reacted posittively to news about his second son Dr Yatindra's entry into active politics. Siddaramaiah said no body is forcing him to join politics, if he is willing to join, i don't object to it.
Please Wait while comments are loading...