ಸಿಎಂ ಸಿದ್ದರಾಮಯ್ಯರಿಗೆ ಗೌರವ ಡಾಕ್ಟರೇಟ್ ಆಸೆ!

By: ನ್ಯೂಸ್ ಡೆಸ್ಕ್
Subscribe to Oneindia Kannada

ಬೆಂಗಳೂರು, ಮಾರ್ಚ್ 27: ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೂ ಗೌರವ ಡಾಕ್ಟರೇಟ್ ಪದವಿ ಪಡೆಯುವ ಆಸೆ ಇದೆ ಎನ್ನುವುದು ಇದೀಗ ಬಹಿರಂಗಗೊಂಡಿದೆ. ಬೆಂಗಳೂರು ವಿವಿಯ ಗೌರವ ಡಾಕ್ಟರೇಟ್ ಪಡೆಯುವವರ ಪಟ್ಟಿಯಲ್ಲಿ ಸಿದ್ದರಾಮಯ್ಯ ಅವರ ಹೆಸರು ಇನ್ನೇನು ಸೇರುವ ಸಾಧ್ಯತೆ ಕಂಡು ಬಂದಿದೆ.

ಬೆಂಗಳೂರು ವಿವಿಯ ಗೌರವ ಡಾಕ್ಟರೇಟ್ ಪಡೆಯಲು ಪ್ರಭಾವಿಗಳ ಹೆಸರಿರುವ ಅರ್ಜಿಗಳ ಪಟ್ಟಿಯಲ್ಲಿದ್ದ ಸಿಎಂ ಹೆಸರಿನ ಅರ್ಜಿಯೇ ಇದಕ್ಕೆ ನಿದರ್ಶನ. ಆದರೆ, ಸಿಎಂಗೆ ಗೌರವ ಡಾಕ್ಟರೇಟ್ ಪದವಿ ನೀಡಬೇಕೆ ಬೇಡವೇ ಎನ್ನುವ ಗೊಂದಲಕ್ಕೆ ಸಿಲುಕಿರುವ ವಿವಿ ಈ ಬಾರಿ ಗೌರವ ಡಾಕ್ಟರೇಟ್ ಪದವಿಯನ್ನು ನೀಡುವುದೇ ಬೇಡ ಎನ್ನುವ ನಿರ್ಧಾರಕ್ಕೆ ಬಂದಿದೆ.

CM Siddaramaiah likely to BU honorary doctorate

ಈ ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿಯಾಗದ್ದ ವೇಳೆ ಅಮೆರಿಕಾದ ಮಿಚಿಗನ್ ನ ಸಗಿನಾವ್ ವ್ಯಾಲಿಸ್ಟೇಟ್ ಯೂನಿ ವರ್ಸಿಟಿ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿತ್ತು. ಇದೀಗ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯರಿಗೂ ಗೌರವ ಡಾಕ್ಟ ರೇಟ್ ಪಡೆಯಬೇಕು ಎನ್ನುವ ಬಯಕೆಯಾಗಿರುವಂತಿದೆ.

ಅದಕ್ಕೆ ಯಡಿಯೂರಪ್ಪನವರೇ ಸ್ಫೂರ್ತಿಯೋ ಏನೋ ಗೊತ್ತಿಲ್ಲ. ಆದರೆ ವಿವಿಗಳು ನೀಡುವ ಗೌರವ ಡಾಕ್ಟರೇಟ್ ಪದವಿಯ ನಿರೀಕ್ಷೆಯಲ್ಲಿದ್ದು, ಇನ್ಮುಂದೆ ಡಾಕ್ಟರ್ ಸಿದ್ದರಾಮಯ್ಯ ಆಗಬೇಕು ಎನ್ನುವ ಕನಸನ್ನಿಟ್ಟುಕೊಂಡಿದ್ದಾರೆ ಎನ್ನಲಾಗಿದೆ.

ಬೆಂಗಳೂರು ವಿವಿಯ 51ನೇ ಘಟಿಕೋತ್ಸವದಲ್ಲಿ ಈ ಬಾರಿ ನೀಡುವ ಗೌರವ ಡಾಕ್ಟರೇಟ್ ಪದವಿ ಪಡೆದುಕೊಳ್ಳಬೇಕು ಎಂದು ಸಿಎಂ ಚಿಂತನೆ ನಡೆಸಿದ್ದರೇ ಎನ್ನುವ ಅನುಮಾನಕ್ಕೆ ಇಂಬು ಕೊಡುವಂತೆ ಅವರ ಹೆಸರಿನ ಅರ್ಜಿ ಗೌರವ ಡಾಕ್ಟರೇಟ್ ಆಕಾಂಕ್ಷಿಗಳ ಅರ್ಜಿಯೊಂದಿಗೆ ಲಭ್ಯವಾಗಿದೆ.

ಒಟ್ಟು 30 ಪ್ರಭಾವಿಗಳ ಅರ್ಜಿಗಳಲ್ಲಿ ಸಿಎಂ ಸಿದ್ದರಾಮಯ್ಯನವರ ಹೆಸರಿನ ಅರ್ಜಿ ಇದ್ದು, ಯಾರು ಈ ಪ್ರಯತ್ನ ನಡೆಸಿದ್ದಾರೆ ಎನ್ನುವುದು ಬಹಿರಂಗಗೊಂಡಿಲ್ಲ. ಆದರೆ, ಬೆಂಗಳೂರು ವಿವಿ ಮಾತ್ರ ಸಿಎಂ ಹಾಗೂ ಪ್ರಭಾವಿಗಳ ಹೆಸರನ್ನು ನೋಡಿ
ಕಂಗಾಲಾಗಿದೆ. ಸಿಎಂಗೆ ಗೌರವ ಡಾಕ್ಟರೇಟ್ ಪದವಿ ನೀಡಬೇಕೆ, ಬೇಡವೇ ಎನ್ನುವ ಗೊಂದಲಕ್ಕೆ ಸಿಲುಕಿದೆ.

ಪ್ರಭಾವಿಗಳನ್ನು ಕಡೆಗಣಿಸಿ ವಿರೋಧ ಕಟ್ಟಿಕೊಳ್ಳಲು ಸಾಧ್ಯವಿಲ್ಲ. ಸಿಎಂಗೆ ನೀಡಿ ಉಳಿದವರನ್ನು ಬಿಡುವಂತೆಯೂ ಇಲ್ಲ. ಈ ಗೊಂದಲಕ್ಕೆ ಸಿಲುಕಿರುವ ವಿವಿ ಈ ವಿಷಯದ ಕುರಿತು ಸಿಂಡಿಕೇಟ್ ಸಭೆ ನಡೆಸಿ ಚರ್ಚೆ ನಡೆಸಿದೆ. ಪ್ರಭಾವಿಗಳ ವಿರೋಧ ಕಟ್ಟಿಕೊಳ್ಳುವ ಉಸಾಬರಿಯೇ ಬೇಡ. ಒತ್ತಡಕ್ಕೆ ಮಣಿದು ವಿವಿಯನ್ನು ಒತ್ತೆ ಇಡುವುದೂ ಬೇಡ. ಈ ಬಾರಿ ಯಾರಿಗೂ
ಗೌರವ ಡಾಕ್ಟರೇಟ್ ನೀಡುವುದೇ ಬೇಡ ಎನ್ನುವ ನಿರ್ಧಾರಕ್ಕೆ ಬಂದಿದೆ.

ಮುಂದಿನ ವರ್ಷದಿಂದ ವಿವಿ ಗೌರವ ಡಾಕ್ಟರೇಟ್ ಪದವಿಗೆ ರಾಜ್ಯಪಾಲರು ವ್ಯಕ್ತಿಗಳನ್ನು ಆಯ್ಕೆ ಮಾಡುತ್ತಾರೆ. ಈ ಬಾರಿ ನಾವು ಸುಮ್ಮನಿದ್ದರೆ ಎಲ್ಲವೂ ಸರಿಹೋಗುತ್ತದೆ ಎನ್ನುವ ನಿರ್ಧಾರ ಕೈಗೊಂಡಿದ್ದಾರೆ. ಇದರಿಂದಾಗಿ ಈ ಬಾರಿ ಗೌರವ
ಡಾಕ್ಟರೇಟ್ ಪದವಿ ಪಡೆದುಕೊಳ್ಳಬೇಕು ಎನ್ನುವ ಪ್ರಯತ್ನವನ್ನು ಪರೋಕ್ಷವಾಗಿ ನಡೆಸಿದ್ದ ಸಿಎಂ ಸಿದ್ದರಾಮಯ್ಯ ಅವರಿಗೆ ಹಿನ್ನಡೆಯಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bangalore Varsity syndicate is in a dilemma whether to award award an honorary doctorate to Chief Minister Siddaramaiah or not.
Please Wait while comments are loading...