ಚಿತ್ರಗಳು : ಇನ್‌ವೆಸ್ಟ್‌ ಕರ್ನಾಟಕ–2016ರ ಸಿದ್ಧತೆ ಪರಿಶೀಲಿಸಿದ ಸಿಎಂ

Posted By:
Subscribe to Oneindia Kannada

ಬೆಂಗಳೂರು, ಜನವರಿ 28 : ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ, 'ಇನ್‌ವೆಸ್ಟ್‌ ಕರ್ನಾಟಕ-2016'ರ ಪೂರ್ವ ಸಿದ್ಧತೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಪರಿಶೀಲಿಸಿದರು. ಸಮಾವೇಶಕ್ಕಾಗಿ 3 ಕೋಟಿ ರೂ.ವೆಚ್ಚದಲ್ಲಿ ಬಿಬಿಎಂಪಿ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದೆ.

ಬುಧವಾರ ಸಂಜೆ ಅರಮನೆ ಮೈದಾನಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಬೃಹತ್‌ ಕೈಗಾರಿಕಾ ಸಚಿವ ಆರ್‌.ವಿ. ದೇಶಪಾಂಡೆ ಹಾಗೂ ಅಧಿಕಾರಿಗಳೊಂದಿಗೆ ಸಿದ್ಧತೆಗಳ ಪರಿಶೀಲನೆ ನಡೆಸಿದರು. ಸಭಾ ಕಾರ್ಯಕ್ರಮ ನಡೆಯುವ ಸ್ಥಳ, ಪ್ರದರ್ಶನದ ಮಳಿಗೆಗಳಿಗೆ ಮೀಸಲಿಟ್ಟಿರುವ ಜಾಗ ಮುಂತಾದವುಗಳನ್ನು ವೀಕ್ಷಿಸಿದರು. [ಹೂಡಿಕೆದಾರರ ಸಮಾವೇಶ : ಬಸ್ಸುಗಳು ನಗರಕ್ಕೆ ಬರುವಂತಿಲ್ಲ]

ಅರಮನೆ ಮೈದಾನದಲ್ಲಿ ಫೆಬ್ರವರಿ 3 ರಿಂದ 5ರವರೆಗೆ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಯಲಿದ್ದು, ಸಿದ್ಧತೆಗಳು ಭರದಿಂದ ಸಾಗಿವೆ. 'ಫೆಬ್ರವರಿ 1ರೊಳಗೆ ಎಲ್ಲಾ ಕಾರ್ಯಗಳು ಪೂರ್ಣಗೊಳ್ಳಲಿವೆ' ಎಂದು ಸಚಿವ ಆರ್.ವಿ.ದೇಶಪಾಂಡೆ ಅವರು ಹೇಳಿದ್ದಾರೆ. [ಜಿಮ್ ಗಾಗಿ ದೇಶಪಾಂಡೆ ಅವರ ಖಾತೆ ಬದಲಾವಣೆ]

'ಫೆಬ್ರವರಿಯಲ್ಲಿ ಉಪ ಚುನಾವಣೆ, ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆ, ಬಜೆಟ್‌ ಪೂರ್ವತಯಾರಿಗೆ ಗಮನ ಕೊಡಬೇಕು. ಆದ್ದರಿಂದ, ಮಾರ್ಚ್‌ನಲ್ಲಿ ಸಮಾವೇಶ ಆಯೋಜಿಸಿದ್ದರೆ ಚೆನ್ನಾಗಿರುತ್ತಿತ್ತು ಎಂದು ಸಿದ್ದರಾಮಯ್ಯ ಅವರು ಅಭಿಪ್ರಾಯಪಟ್ಟರು' ಎಂದು ತಿಳಿದುಬಂದಿದೆ. [ತಾಲೂಕು, ಜಿಲ್ಲಾ ಪಂಚಾಯಿತಿ ಚುನಾವಣೆ ವೇಳಾಪಟ್ಟಿ]

ಸಿದ್ಧತೆಗಳನ್ನು ಪರಿಶೀಲಿಸಿದ ಸಿದ್ದರಾಮಯ್ಯ

ಸಿದ್ಧತೆಗಳನ್ನು ಪರಿಶೀಲಿಸಿದ ಸಿದ್ದರಾಮಯ್ಯ

ಬುಧವಾರ ಅರಮನೆ ಮೈದಾನಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ, 'ಇನ್‌ವೆಸ್ಟ್‌ ಕರ್ನಾಟಕ-2016'ರ ಪೂರ್ವ ಸಿದ್ಧತೆಗಳನ್ನು ಪರಿಶೀಲಿಸಿದರು.

ಮೂರು ದಿನಗಳ ಸಮಾವೇಶ

ಮೂರು ದಿನಗಳ ಸಮಾವೇಶ

ಬೆಂಗಳೂರಿನ ಅರಮನೆ ಮೈದಾನದಲ್ಲಿ ಫೆಬ್ರವರಿ 3 ರಿಂದ 5ರವರೆಗೆ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಯಲಿದೆ. 'ಇನ್‌ವೆಸ್ಟ್‌ ಕರ್ನಾಟಕ-2016'ರ ಪೂರ್ವಸಿದ್ಧತೆಗಳು ಭರದಿಂದ ನಡೆಯುತ್ತಿವೆ.

ಸಿದ್ಧತೆಗಳನ್ನು ವಿವರಿಸಿದ ಎಂ.ಎ.ಸಲೀಂ

ಸಿದ್ಧತೆಗಳನ್ನು ವಿವರಿಸಿದ ಎಂ.ಎ.ಸಲೀಂ

ಮೂರು ದಿನಗಳ ಸಮಾವೇಶಕ್ಕ ಭದ್ರತೆ ಒದಗಿಸಲು ಕೈಗೊಂಡಿರುವ ಕ್ರಮ, ಅತಿಥಿಗಳಿಗೆ ಆಸನ ವ್ಯವಸ್ಥೆ ಮತ್ತು ಅರಮನೆ ಮೈದಾನದ ಸುತ್ತ ವಾಹನಗಳ ಸಂಚಾರ ನಿಯಂತ್ರಣಕ್ಕೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ನಗರ ಪೊಲೀಸ್‌ ಆಯುಕ್ತ ಎನ್‌.ಎಸ್‌. ಮೇಘರಿಕ್‌ ಮತ್ತು ಸಂಚಾರ ವಿಭಾಗದ ಹೆಚ್ಚುವರಿ ಆಯುಕ್ತ ಎಂ.ಎ ಸಲೀಂ ಮುಖ್ಯಮಂತ್ರಿಗೆ ವಿವರಣೆ ನೀಡಿದರು.

ಕೈಗಾರಿಕಾ ನೀತಿ ತಿಳಿಯಲಿದೆ

ಕೈಗಾರಿಕಾ ನೀತಿ ತಿಳಿಯಲಿದೆ

ಮಾಧ್ಯಮಗಳ ಜೊತೆ ಮಾತನಾಡಿದ ಬೃಹತ್ ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆ ಅವರು, 'ಹೂಡಿಕೆ ಒಂದು ನಿರಂತರ ಪ್ರಕ್ರಿಯೆ. ಈ ಸಮಾವೇಶದ ಮೂಲಕ ರಾಜ್ಯದ ಶಕ್ತಿ, ಕೈಗಾರಿಕಾ ನೀತಿ, ಅನುಕೂಲತೆಗಳು ಇತರರಿಗೂ ತಿಳಿಯಲಿದೆ' ಎಂದು ಹೇಳಿದರು.

ಬಿಬಿಎಂಪಿಯಿಂದ 3 ಕೋಟಿ ರೂ. ಕಾಮಗಾರಿ

ಬಿಬಿಎಂಪಿಯಿಂದ 3 ಕೋಟಿ ರೂ. ಕಾಮಗಾರಿ

'ಇನ್‌ವೆಸ್ಟ್‌ ಕರ್ನಾಟಕ-2016ರ ಸಿದ್ಧತೆಗಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) 3.47 ಕೋಟಿ ರೂ.ಗಳ ಕಾಮಗಾರಿಯನ್ನು ಕೈಗೊಂಡಿದೆ. ಅರಮನೆ ಮೈದಾನದ ಸುತ್ತಮುತ್ತಲಿನ ರಸ್ತೆ ದುರಸ್ತಿ ಮಾಡಲಾಗುತ್ತಿದೆ. ಫುಟ್‌ಪಾತ್‌ಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ರಸ್ತೆ ವಿಭಜಕಗಳಲ್ಲಿ ಹೂವಿನ ಗಿಡಗಳನ್ನು ಬೆಳೆಸಲಾಗುತ್ತಿದೆ' ಎಂದು ಮೇಯರ್ ಮಂಜುನಾಥ ರೆಡ್ಡಿ ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Karnataka Chief Minister Siddaramaiah and Industries Minister R.V.Desphande on Wednesday visited the Palace Grounds, the venue of the three-day Invest Karnataka 2016 meet to monitor the preparations. Meet to be held at the palace grounds from February 3 to 5, 2016.
Please Wait while comments are loading...