ವಿಮಾನ ನಿಲ್ದಾಣಕ್ಕೆ 3 ಪರ್ಯಾಯ ಮಾರ್ಗಗಳು, 300 ಕೋಟಿ ರು ಅನುದಾನ

Posted By:
Subscribe to Oneindia Kannada

ಬೆಂಗಳೂರು, ಅಕ್ಟೋಬರ್ 17: ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪರ್ಯಾಯ ರಸ್ತೆ ಮಾರ್ಗಗಳ ಪರಿಶೀಲನಾ ಕಾರ್ಯಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ತಂಡವು ಸೋಮವಾರ ನೆರವೇರಿಸಿದೆ. ಒಟ್ಟು 3 ಪರ್ಯಾಮ ಮಾರ್ಗಗಳ ಅಭಿವೃದ್ಧಿಗೆ ಸರ್ಕಾರದಿಂದ 300 ಕೋಟಿ ರೂ ಬಿಡುಗಡೆ ಮಾಡಲಾಗಿದೆ.

ಸೋಮವಾರ ಬೆಳಗ್ಗೆ ಕೆ.ಎಸ್.ಆರ್.ಟಿ.ಸಿ ವೋಲ್ವೋ ಬಸ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವರು ಹಾಗೂ ಕೆಲವು ಶಾಸಕರೊಡಗೂಡಿ, ಈ ಮೂರೂ ಮಾರ್ಗಗಳ ಪರಿಶೀಲನೆ ನಡೆಸಿದರು. [ಏನಿದು ಉಕ್ಕಿನ ಮೇಲ್ಸೇತುವೆ ಯೋಜನೆ? ಏಕೆ ವಿರೋಧ?]

ಸಂಜೆ ಸುದ್ದಿಗೋಷ್ಠಿ ನಡೆಸಿ, ಉಕ್ಕಿನ ಸೇತುವೆ ಪಾರದರ್ಶಕತೆ, ಪರ್ಯಾಯ ರಸ್ತೆ ಮಾರ್ಗ ಹಾಗೂ ಮೆಟ್ರೋ ಕಾಮಗಾರಿ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ವಿವರಣೆ ನೀಡಿದರು.[ಉಕ್ಕಿನ ಮೇಲ್ಸೇತುವೆ ಪರ್ಯಾಯವಾಗಿ ಏನ್ಮಾಡ್ಬಹುದು?]

ಪರ್ಯಾಯ ಮಾರ್ಗಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರ 300 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ಈ ಮಾರ್ಗಗಳಲ್ಲಿ ಬರುವ ಸೇತುವೆಗಳು, ರಸ್ತೆ ಅಗಲೀಕರಣ, ಫ್ಲೈಓವರ್ಸ್, ಅಂಡರ್ ಪಾಸ್, ಈ ಎಲ್ಲವುಗಳ ಅಭಿವೃದ್ಧಿಗೆ ಈ ಹಣ ಬಿಡುಗಡೆ ಮಾಡಲಾಗಿದೆ. ಇನ್ನಷ್ಟು ಮಾಹಿತಿ ಹಾಗೂ ಚಿತ್ರಗಳನ್ನು ಮುಂದೆ ನೋಡಿ...[ಸಂಶಯ ಬಿಡಿ, ಉಕ್ಕು ಸೇತುವೆ ಯೋಜನೆ ಪಾರದರ್ಶಕ]

ಮೊದಲನೆಯದಾಗಿ ಹೆಣ್ಣೂರು ಮಾರ್ಗ

ಮೊದಲನೆಯದಾಗಿ ಹೆಣ್ಣೂರು ಮಾರ್ಗ

ಮೊದಲನೆಯದಾಗಿ ಹೆಣ್ಣೂರು ಮಾರ್ಗದ ರಸ್ತೆಯ ಪರಿಶೀಲನೆ ನಡೆಸಲಾಯ್ತು. ಬಾಗಲೂರು ಸರ್ಕಲ್, ಬಂಡಿ ಕೊಡಿಗೇಹಳ್ಳಿ ಮತ್ತು ಮೈಲನಹಳ್ಳಿಯ ಮಾರ್ಗದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಧಿಕಾರಿಗಳು ಮಾಹಿತಿ ನೀಡಿದರು. ಈ ಮಾರ್ಗದಲ್ಲಿ ಪರ್ಯಾಯ ರಸ್ತೆ ಅಭಿವೃದ್ಧಿಪಡಿಸಿದರೆ, ವಿಮಾನ ನಿಲ್ದಾಣಕ್ಕೆ 21.48 ಕಿಲೋ ಮೀಟರ್ ಅಂತರವಿರುತ್ತದೆ. ಈಗ ಹಾಲಿ ಇರುವ ಬಳ್ಳಾರಿ ರಸ್ತೆಯ ಮಾರ್ಗಕ್ಕಿಂತಲೂ ಇದು 9.64 ಕಿಲೋ ಮೀಟರ್ ಅಂತರ ಕಡಿಮೆ ಆಗಲಿದೆ.

15 ಎಕರೆ 32 ಗುಂಟೆ ಭೂಮಿಯನ್ನ ವಶಕ್ಕೆ

15 ಎಕರೆ 32 ಗುಂಟೆ ಭೂಮಿಯನ್ನ ವಶಕ್ಕೆ

ಹೆಣ್ಣೂರು ಮಾರ್ಗದಲ್ಲಿ ಬರುವ ಮೈಲನಹಳ್ಳಿ ಸುತ್ತ ಮುತ್ತ 15 ಎಕರೆ 32 ಗುಂಟೆ ಭೂಮಿಯನ್ನ ವಶಕ್ಕೆ ಪಡೆದುಕೊಳ್ಳಲು ಮುಖ್ಯಮಂತ್ರಿಗಳು ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಹೆಣ್ಣೂರು ಮಾರ್ಗದಲ್ಲಿ ಮೊದಲಿಗೆ ಪರ್ಯಾಯ ರಸ್ತೆ ಅಭಿವೃದ್ಧಿಗೆ ಒತ್ತು ನೀಡಲು ಸೂಚಿಸಲಾಯಿತು. ಈ ಕಾಮಗಾರಿ ಆರಂಭವಾದರೆ ಬಳ್ಳಾರಿ ರಸ್ತೆ ಮೂಲಕ ಸಂಚಾರ ದಟ್ಟಣೆ ತಗ್ಗಲಿದೆ.

ಎರಡನೇ ಪರ್ಯಾಯ ರಸ್ತೆಯಾಗಿ, ಥಣಿಸಂದ್ರ

ಎರಡನೇ ಪರ್ಯಾಯ ರಸ್ತೆಯಾಗಿ, ಥಣಿಸಂದ್ರ

ಎರಡನೇ ಪರ್ಯಾಯ ರಸ್ತೆಯಾಗಿ, ಥಣಿಸಂದ್ರ ಮಾರ್ಗ. ಥಣಿಸಂದ್ರ ಮಾರ್ಗವಾಗಿ ಬಾಗಲೂರು ರಸ್ತೆ, ಅಲ್ಲಿಂದ ಮೈಲನಹಳ್ಳಿ ರಸ್ತೆ. ಈ ಮಾರ್ಗದಲ್ಲಿ ಪರ್ಯಾಯ ರಸ್ತೆ ಅಭಿವೃದ್ಧಿಪಡಿಸಿದರೆ, ವಿಮಾನ ನಿಲ್ದಾಣಕ್ಕೆ 20.63 ಕಿಲೋ ಮೀಟರ್ ದೂರವಾಗುತ್ತದೆ. ಇದರಿಂದ 3.14 ಕಿಲೋ ಮೀಟರ್ ಅಂತರ ಕಡಿಮೆ ಆಗಲಿದೆ.

ಥಣಿಸಂದ್ರ ಮಾರ್ಗದ ರಸ್ತೆ ಅಭಿವೃದ್ಧಿಗೆ ಅನುದಾನ

ಥಣಿಸಂದ್ರ ಮಾರ್ಗದ ರಸ್ತೆ ಅಭಿವೃದ್ಧಿಗೆ ಅನುದಾನ

ಈ ಥಣಿಸಂದ್ರ ಮಾರ್ಗದ ರಸ್ತೆ ಅಭಿವೃದ್ಧಿಗೆ ರಾಜ್ಯ ಸರ್ಕಾರ ಈಗಾಗಲೇ, ನಗರೋತ್ಥಾನ ಯೋಜನೆಯಡಿ 17 ಕೋಟಿ ರೂಪಾಯಿಯನ್ನು ಬಿಡುಗಡೆ ಮಾಡಿದೆ ಹಾಗೂ ಥಣಿಸಂದ್ರದ ಬಳಿ ಗ್ರೇಡ್ ಸೆಪರೇಟರ್ ಕಾಮಗಾರಿಗೆ 31 ಕೋಟಿ ರೂಪಾಯಿಗಳನ್ನ ಬಿಡುಗಡೆ ಮಾಡಿದೆ. ಇದಲ್ಲದೆ ಈಗ ಹೊಸದಾಗಿ ನೀಡಿರುವ 300 ಕೋಟಿ ರು ನಲ್ಲೂ ಈ ಮಾರ್ಗದ ರಸ್ತೆ ಹಾಗೂ ಇನ್ನಿತರ ಮೂಲ ಸೌಕರ್ಯ ಅಭಿವೃದ್ಧಿಗೆ ಹಣ ದೊರೆಯಲಿದೆ.

ಮೂರನೇ ಪರ್ಯಾಯ ಮಾರ್ಗ ಮಾಗಡಿ ರಸ್ತೆ ಮಾರ್ಗ

ಮೂರನೇ ಪರ್ಯಾಯ ಮಾರ್ಗ ಮಾಗಡಿ ರಸ್ತೆ ಮಾರ್ಗ

ಮುಖ್ಯಮಂತ್ರಿಗಳು ಪರಿಶೀಲಿಸಿದ ಮೂರನೇ ಪರ್ಯಾಯ ಮಾರ್ಗ ಮಾಗಡಿ ರಸ್ತೆ ಮಾರ್ಗ. ಪೀಣ್ಯ ಮತ್ತು ಯಲಹಂಕದಿಂದ ಈ ಪರ್ಯಾಯ ರಸ್ತೆ ವಿಮಾನ ನಿಲ್ದಾಣ ತಲುಪುತ್ತದೆ.

ಈ ಮೂರೂ ಮಾರ್ಗಗಳ ಅಭಿವೃದ್ಧಿಗೆಂದೇ, ರಾಜ್ಯ ಸರ್ಕಾರ 300 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ಈ ಮಾರ್ಗಗಳಲ್ಲಿ ಬರುವ ಸೇತುವೆಗಳು, ರಸ್ತೆ ಅಗಲೀಕರಣ, ಫ್ಲೈಓವರ್ಸ್, ಅಂಡರ್ ಪಾಸ್, ಈ ಎಲ್ಲವುಗಳ ಅಭಿವೃದ್ಧಿಗೆ ಈ ಹಣ ಬಿಡುಗಡೆ ಮಾಡಲಾಗಿದೆ.

ಹಾಲಿ ಇರುವ ಏಕೈಕ ಸಂಪರ್ಕ ರಸ್ತೆ-ಬಳ್ಳಾರಿ ರಸ್ತೆ

ಹಾಲಿ ಇರುವ ಏಕೈಕ ಸಂಪರ್ಕ ರಸ್ತೆ-ಬಳ್ಳಾರಿ ರಸ್ತೆ

ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಹಾಲಿ ಇರುವ ಏಕೈಕ ಸಂಪರ್ಕ ರಸ್ತೆಯಾದ ಬಳ್ಳಾರಿ ರಸ್ತೆಯು ಸದಾ ವಾಹನ ದಟ್ಟಣೆಯಿಂದ ಕೂಡಿರುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು, ಈಗಾಗಲೇ ಹೆಬ್ಬಾಳ ಕೆಂಪಾಪುರದಿಂದ, ವಿಮಾನ ನಿಲ್ದಾಣದವರೆಗೆ ಒಂದು ಸಿಗ್ನಲ್ ರಹಿತ ರಸ್ತೆಯನ್ನು ನಿರ್ಮಿಸಿದ್ದರೂ, ಈ ರಸ್ತೆಯಿಂದ ಹೆಬ್ಬಾಳದ ಕಡೆಗೆ ಬರುವಾಗ ಮೇಲ್ಸೇತುವೆಯಲ್ಲಿ ಸಂಚಾರ ದಟ್ಟಣೆ ಇರುತ್ತದೆ ಎಂದು ಮುಖ್ಯಮಂತ್ರಿಗಳು ಹೇಳಿದರು.

ನಗರದ ವಿವಿಧೆಡೆಗಳಿಂದ ಪರ್ಯಾಯ ಮಾರ್ಗ

ನಗರದ ವಿವಿಧೆಡೆಗಳಿಂದ ಪರ್ಯಾಯ ಮಾರ್ಗ

ಬೆಂಗಳೂರು ಪೂರ್ವ, ಕೇಂದ್ರ ಮತ್ತು ಪಶ್ಚಿಮ ಭಾಗದಿಂದ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಪರ್ಯಾಯ ರಸ್ತೆಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಪರ್ಯಾಯ ರಸ್ತೆಗಳ ಅಭಿವೃದ್ಧಿಗೆ 300 ಕೋಟಿ ರೂ ಬಿಡುಗಡೆ ಮಾಡಲಾಗಿದೆ ಎಂದು ಅವರು ತಿಳಿಸಿದರು

ನಿಮ್ಮ ಸಲಹೆ ಕೇಳ್ತಿದೆ ನಮ್ಮ ಮೆಟ್ರೋ

ನಿಮ್ಮ ಸಲಹೆ ಕೇಳ್ತಿದೆ ನಮ್ಮ ಮೆಟ್ರೋ

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ನಮ್ಮ ಮೆಟ್ರೋ ರೈಲಿನ 9 ಸಾಧ್ಯತಾ ಮಾರ್ಗಗಳ ಪೈಕಿ ಯಾವುದು ಉತ್ತಮ ಎಂದು ನಿರ್ಧರಿಸುವ ಹೊಣೆಯನ್ನು ನಗರದ ನಗಾಗರಿಕರಿಗೆ ನಮ್ಮ ಮೆಟ್ರೋ ವಹಿಸಿಕೊಟ್ಟಿದೆ. 30 ಕಿ.ಮೀ ನಷ್ಟಿರುವ ಮಾರ್ಗದ ಈ ಯೋಜನೆಯ ಅಂದಾಜು ವೆಚ್ಚ 4,500 ಕೋಟಿ ರು ನಿಂದ 7 ಸಾವಿರ ಕೋಟಿ ರು ಆಗುವ ನಿರೀಕ್ಷೆಯಿದೆ. [ಸಂಪೂರ್ಣ ವಿವರ ಇಲ್ಲಿ ಓದಿ]

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Chief Minister Siddaramaiah along with his cabinet ministers inspected alternative road and Metro routes to Kempegowda International Airport (KIA) on Monday(Oct 17). Three alternative routes observed and government has sanctioned Rs 300 Cr for implementation of the project.
Please Wait while comments are loading...