ಚಿತ್ರಗಳು : ಜಯನಗರದ ಪಟಾಲಮ್ಮ ಮಹೋತ್ಸವದ ಸಂಭ್ರಮ

Posted By:
Subscribe to Oneindia Kannada

ಬೆಂಗಳೂರು, ಜೂನ್ 08 : ಕನಕನ ಪಾಳ್ಯ, ಸಿದ್ದಾಪುರ, ಯಡಿಯೂರು, ಭೈರಸಂದ್ರ ಹಾಗೂ ನಾಗಸಂದ್ರ ಗ್ರಾಮಗಳ ಅಧಿದೇವತೆ ಶ್ರೀ ಪಟಾಲಮ್ಮ ಮಹೋತ್ಸವಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಿದರು. ಮೂರು ವರ್ಷಗಳಿಗೊಮ್ಮೆ ಪಟಾಲಮ್ಮ ಉತ್ಸವ ನಡೆಯುತ್ತದೆ.

ಬುಧವಾರ ಬೆಳಗ್ಗೆ ಬೆಂಗಳೂರಿನ ಜಯನಗರದ ಸಮೀಪದ ಕನಕನಪಾಳ್ಯದಲ್ಲಿ ಸಿದ್ದರಾಮಯ್ಯ ಅವರು ಮೂರು ದಿನಗಳ ಪಟಾಲಮ್ಮ ಉತ್ಸವ ಉದ್ಘಾಟಿಸಿದರು. ನಂತರ ಜನಪದ ಕಲಾತಂಡಗಳ ಮೆರವಣಿಗೆಯೊಂದಿಗೆ ಪಟಾಲಮ್ಮ ದೇವಿಯ ಉತ್ಸವ ಹೊತ್ತ ರಥ ಆನೆ ಬಂಡೆ ರಸ್ತೆಯಲ್ಲಿರುವ ಪಟಾಲಮ್ಮ ದೇವಾಲಯಕ್ಕೆ ಆಗಮಿಸಿತು. [ಮದ್ದೂರಮ್ಮನ ಜಾತ್ರೆಗೆ ಸಾಕ್ಷಿಯಾದ ಭಕ್ತರು]

siddaramaiah

ಸಿದ್ದಾಪುರ, ಭೈರಸಂದ್ರ, ಯಡಿಯೂರು ಮತ್ತು ನಾಗಸಂದ್ರ ಗ್ರಾಮಗಳಿಂದ ಬಂದ ಆರತಿಗಳು ದೇವಾಲಯ ಪ್ರವೇಶಿಸುತ್ತಿದ್ದಂತೆ ಮಹಾಮಂಗಳಾರತಿ ನಡೆಯಿತು. ನಂತರ ಅಗ್ನಿಕೊಂಡ ಹಾಯುವ ಕಾರ್ಯಕ್ರಮ ನಡೆಯಿತು. [ಬೆಂಗಳೂರು ಕರಗದ ಸಂಭ್ರಮ, ಸಡಗರ ನೋಡಿ]

ಪಟಾಲಮ್ಮ ಉತ್ಸವದ ಚಿತ್ರಗಳು

-
-
-
-

ಮೂರು ವರ್ಷಗಳಿಗೊಮ್ಮೆ ನಡೆಯುವ ಪಟಾಲಮ್ಮ ಉತ್ಸವದಲ್ಲಿ ನೂರಾರು ಭಕ್ತರು ಪಾಲ್ಗೊಂಡಿದ್ದರು. ಮಲ್ಲಿಗೆ ಹೂವಿನಿಂದ ಅಲಂಕೃತವಾದ ಚಿಕ್ಕ ರಥಗಳನ್ನು ದೇವಿಗೆ ಸಲ್ಲಿಸಿ ಭಕ್ತರು ಹರಕೆ ತೀರಿಸಿದರು. ವಿಧವಿಧವಾದ ಹೂವುಗಳಿಂದ ಅಲಂಕೃತವಾದ ದೇವಿಯ ದರ್ಶನ ಪಡೆದು ಪುನೀತರಾದರು. [ಚಿತ್ರಗಳಲ್ಲಿ ನೋಡಿ ಪಟಾಲಮ್ಮ ಮಹೋತ್ಸವ]

temple

ಜಾನಪದ ತಂಡಗಳ ಮೆರವಣಿಗೆ : ಪಟಾಲಮ್ಮ ಉತ್ಸವ ಉದ್ಘಾಟನೆಗೂ ಮೊದಲು ಸಿದ್ದಾಪುರ, ಭೈರಸಂದ್ರ, ಯಡಿಯೂರು ಮತ್ತು ನಾಗಸಂದ್ರ ಗ್ರಾಮಗಳಿಂದ ಆರತಿಗಳು ಕಲಾ ತಂಡಗಳ ಮೆರವಣಿಗೆ ಜೊತೆ ಬಂದವು. ಬಸವನಗುಡಿ ಕೋ-ಆಪರೇಟಿವ್ ಸೊಸೈಟಿ ಬಳಿ ಎಲ್ಲಾ ಆರತಿಗಳು ಒಂದಾದವು. ಅಲ್ಲಿಂದ ಕನಕನಪಾಳ್ಯಕ್ಕೆ ಮೆರವಣಿಗೆ ಮೂಲಕ ತೆರಳಲಾಯಿತು.

-
-
-
-

ಮೂರು ದಿನಗಳ ಉತ್ಸವದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇದಕ್ಕಾಗಿ ದೇವಾಲಯದ ಆವರಣದಲ್ಲಿ ಬೃಹತ್ ವೇದಿಕೆ ಸಿದ್ಧಪಡಿಸಲಾಗಿದೆ. ಉತ್ಸವಕ್ಕೆ ಬರುವ ಭಕ್ತಾದಿಗಳಿಗೆ ಊಟ, ಉಪಹಾರದ ವ್ಯವಸ್ಥೆ ಮಾಡಲಾಗಿದೆ. ವಿವಿಧ ಸಂಘಟನೆಗಳು ಭಕ್ತರಿಗೆ ಮಜ್ಜಿಗೆಯನ್ನು ವಿತರಿಸುತ್ತಿವೆ.

-
-
-
-
-

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka Chief Minister Siddaramaiah inaugurated the Patalamma Utsav at Jayanagar, Bengaluru on Wednesday, June 8, 2016. Patalamma Utsav a three day event held in every 3 years.
Please Wait while comments are loading...