• search

ಗೃಹ ಮಂಡಳಿ ಇಲಾಖೆಯಿಂದ ಒಂದು ಲಕ್ಷ ಮನೆ, ಆನ್‌ಲೈನ್ ಅರ್ಜಿ ಆಹ್ವಾನ

By Manjunatha
Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ಬೆಂಗಳೂರು, ಡಿಸೆಂಬರ್ 05 : ನಗರದಲ್ಲಿ ಗೃಹ ಮಂಡಳಿ ವತಿಯಿಂದ ಒಂದು ಲಕ್ಷ ಮನೆ ನಿರ್ಮಾಣದ ಯೋಜನೆ ಮಾಡಲಾಗಿದ್ದು, ಫಲಾನುಭವಿಗಳಿಂದ ಆನ್ ಲೈನ್ ಅರ್ಜಿ ಸ್ವೀಕಾರಕ್ಕೆ ಚಾಲನೆ ನೀಡಲಾಗಿದೆ.

  ದಿಡ್ಡಳ್ಳಿಯ ನಿರಾಶ್ರಿತರಿಗೆ ನಿವೇಶನ ವಿತರಣೆಗೆ ಚಾಲನೆ

  ಆಸಕ್ತರು ಕರ್ನಾಟಕ ಗೃಹಮಂಡಳಿ ಇಲಾಖೆ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ ಹೆಸರು ನೊಂದಾಯಿಸಿಕೊಳ್ಳಬಹುದು.

  ಸರ್ಕಾರದಿಂದ ಬೆಂಗಳೂರಿನಲ್ಲಿ 1 ಲಕ್ಷ ಮನೆ ನಿರ್ಮಾಣ, ಏನು? ಎತ್ತ?

  CM Siddaramaiah inaugurates online application portal of Karnataka Housing Board

  ವಸತಿ ಸಚಿವ ಕೃಷ್ಣಪ್ಪ, ಬೆಂಗಳೂರು ಅಭಿವೃದ್ದಿ ಸಚಿವ ಕೆ.ಜೆ.ಜಾರ್ಜ್, ಸರ್ಕಾರದ ಮುಖ್ಯ ಕಾರ್ಯದರ್ಶಿ ರತ್ನಪ್ರಭ, ಸೇರಿ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಸತಿ ಯೋಜನೆಗೆ ಆನ್ ಲೈನ್ ಅರ್ಜಿ ವೆಬ್ ಸೈಟ್ ಚಾಲನೆ ನೀಡಿದರು.

  ಚಾಮರಾಜನಗರ: ಬೀದಿಗೆ ಬಿದ್ದ ಕುಟುಂಬದ ಅಳಲು ಕೇಳೋರಿಲ್ಲ!

  ಲಾಟರಿ ಮೂಲಕ 75 ಸಾವಿರ ಫಲಾನುಭವಿಗಳ ಆಯ್ಕೆ, 25 ಸಾವಿರ ಬಿಟ್ಟು ಹೋದ ಅರ್ಹ ಫಲಾನುಭವಿಗಳಿಗೆ ನೀಡುತ್ತೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  CM Siddaramaiah inaugurates online application portal of Karnataka Housing Board

  ಅರ್ಜಿ ಸಲ್ಲಿಸಲು ನಿಗದಿತ ನಿಯಮಗಳನ್ನು ಗೃಹ ಮಂಡಳಿ ವಿಧಿಸಿದ್ದು, ನಿಯಮಗಳು ಇಂತಿವೆ.

  1) ಅರ್ಜಿದಾರರು ಭಾರತೀಯರಾಗಿದ್ದು, ಅರ್ಜಿ ಸಲ್ಲಿಸುವ ದಿನಾಂಕಕ್ಕೆ ವಯಸ್ಸು 18 ವರ್ಷ ಮೇಲ್ಪಟ್ಟಿರಬೇಕು. ಅರ್ಜಿದಾರರ ಹಾಗೂ ಅವರ ಕುಟುಂಬದ ಸದಸ್ಯರ ಹೆಸರಿನಲ್ಲಿ ನಗರ/ಪಟ್ಟಣ ವ್ಯಾಪ್ತಿಯಲ್ಲಿ ಮನೆ/ ನಿವೇಶನ ಹೊಂದಿರಬಾರದು.

  2) ಆಸಕ್ತರು ಅರ್ಜಿಗಾಗಿ ಅರ್ಜಿ ಶುಲ್ಕ/ ಪರಿಷ್ಕರಣಾ ಶುಲ್ಕ/ ಆಸಕ್ತ ಮುಂಗಡ ಠೇವಣಿ / ಆರಂಭಿಕ ಠೇವಣಿಯನ್ನು ಡಿಮ್ಯಾಂಡ್ ಡ್ರಾಫ್ಟ್/ ಪೇ ಆರ್ಡ್ ರ್/ಚಲನ್ ಮೂಲಕ "Housing Commissioner, KHB Bangalore " ರವರ ಹೆಸರಿನಲ್ಲಿ ಪಡೆದು ಸಲ್ಲಿಸತಕ್ಕದ್ದು. ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ನೋಂದಣಿ ಶುಲ್ಕ ಹಾಗೂ ಆರಂಭಿಕ ಠೇವಣಿ ಹೊರುತು ಪಡಿಸಿ ಯಾವುದೇ ಶುಲ್ಕವಿರುವುದಿಲ್ಲ.

  3) ಎಲ್ಲಾ ಅಂಕಣಗಳನ್ನು ಭರ್ತಿ ಮಾಡಿ ಸಂಬಂಧಪಟ್ಟ ಜಿಲ್ಲಾ ಯೋಜನಾ ಕಛೇರಿಯಲ್ಲಿ ಸಲ್ಲಿಸತಕ್ಕದ್ದು. ಅಪೂರ್ಣವಾಗಿ ಭರ್ತಿ ಮಾಡಿದ ಅರ್ಜಿಯನ್ನು ತಿರಸ್ಕರಿಸಲಾಗುತ್ತದೆ.

  4) ಡಿ.ಡಿ / ಚಲನ್ ಮೊತ್ತ ಮಂಡಳಿ ಖಾತೆಗೆ ಸಂದಾಯವಾದರೆ ಮಾತ್ರ ಅರ್ಜಿಯನ್ನು ಅಂಗಿಕರಿಸಲಾಗುವುದು.

  5) ಅರ್ಜಿ ನಮೂನೆ, ಪರಿಷ್ಕರಣಾ ಶುಲ್ಕ, ಆಸಕ್ತ ಮುಂಗಡ ಠೇವಣಿ ಮತ್ತು ಆರಂಭಿಕ ಠೇವಣಿಯನ್ನು ಅಂಗೀಕರಿಸಿದ ಮಾತ್ರಕ್ಕೆ, ಅರ್ಜಿದಾರನಿಗೆ ಮನೆ/ ನಿವೇಶನೆ/ಫ್ಲಾಟ್ ಹಂಚಿಕೆಯ ಹಕ್ಕು ಅಥವಾ ಖಾತ್ರಿ ಎಂದು ಭಾವಿಸತಕ್ಕದ್ದಲ್ಲ.

  6) ಮನೆ / ನಿವೇಶನ / ಫ್ಲಾಟ್ ಗಳಲ್ಲಿ ಶೇ.90 ರಷ್ಟು ಸ್ವತ್ತುಗಳನ್ನು ಲಾಟರಿ ಮುಖಾಂತರ ಮತ್ತು ಶೇ.10 ರಷ್ಟು ಸ್ವತ್ತುಗಳನ್ನು ವಿವೇಚನಾ ಕೋಟಾ ಅಡಿಯಲ್ಲಿ ಷರತ್ತಿಗೊಳಪಟ್ಟು ಮಂಡಳಿಯ ಹಂಚಿಕೆ ನಿಯಮಾವಳಿಗಳು ಮತ್ತು ಠರಾವಿನಂತೆ ಹಂಚಿಕೆ ಮಾಡಲಾಗುವುದು. ಲಾಟರಿ ಮುಖಾಂತರ ಹಂಚಿಕೆಗಾಗಿ ದಿನಾಂಕವನ್ನು ಪತ್ರಿಕೆಗಳಲ್ಲಿ ಪ್ರಕಟಿಸಲಾಗುವುದು. ಮಂಡಳಿಯು ನಿಗದಿಪಡಿಸಿದ ಸಮಯದಲ್ಲಿ ಹಂಚಿಕೆಯಾದ ಸ್ವತ್ತಿಗೆ ಹಣ ಪಾವತಿ ಮಾಡಬೇಕಾಗಿರುವುದು.

  7) ಮಂಡಳಿಯೊಡನೆ ಪತ್ರ ವ್ಯವಹಾರ ಮಾಡುವಾಗ ಅಧಿಸೂಚನೆ, ಜಿಲ್ಲಾಕೋಡ್ ಸಂಖ್ಯೆ, ಯೋಜನೆಯ ಹೆಸರು ಮತ್ತು ಅರ್ಜಿ ಸಂಖ್ಯೆಯನ್ನು ತಪ್ಪದೇ ನಮೂದಿಸಬೇಕು.(ಜಿಲ್ಲಾಕೋಡ್ ಸಂಖ್ಯೆಯ ವಿವರ ಲಗತ್ತಿಸಿದೆ).

  8) ವಿಳಾಸವು ಬದಲಾವಣೆಯಾದಲ್ಲಿ ಮಂಡಳಿಗೆ ಮಾಹಿತಿ ನೀಡತಕ್ಕದ್ದು.ಅರ್ಜಿದಾರನ ಸ್ವಂತ ಹಿತದೃಷ್ಟಿಯಿಂದ ಮುನ್ನೆಚ್ಚರಿಗೆ ಕ್ರಮವಾಗಿ ಭರ್ತಿ ಮಾಡಿದ ಅರ್ಜಿ, ಡಿ.ಡಿ/ಚಲನ್ ಇವುಗಳ ಫೋಟೋ ಪ್ರತಿಯನ್ನು ಇಟ್ಟುಕೊಳ್ಳತಕ್ಕದ್ದು.

  9) ಕರ್ನಾಟಕ ಗೃಹ ಮಂಡಳಿಯ ಹಂಚಿಕೆ ನಿಯಮವಾಳಿ 1983 (ತಿದ್ದುಪಡಿಗಳನ್ನು ಒಳಗೊಂಡಂತೆ) ಮತ್ತು ಕಾಲಕಾಲಕ್ಕೆ ತೆಗೆದುಕೊಳ್ಳಲಾಗುವ ಮಂಡಳಿಯ ನಿರ್ಣಯಗಳ ಪ್ರಕಾರ ಹಂಚಿಕೆ ಮಾಡಲಾಗುವುದು.ಕರ್ನಾಟಕ ಗೃಹ ಮಂಡಳಿಯ ತೀರ್ಮಾನವೇ ಅಂತಿಮವಾಗಿರುತ್ತದೆ.

  10) ಪರಿಷ್ಕರಣಾ ಶುಲ್ಕವನ್ನು ಯಾವುದೇ ಸಂದರ್ಭದಲ್ಲಿ ಮರುಪಾವತಿ ಮಾಡುವುದಿಲ್ಲ, ಹಂಚಿಕೆಯಾಗದ ಅರ್ಜಿದಾರರಿಗೆ ಮಂಡಳಿಯ ನಿಯಮ/ನಿಯಮಾವಳಿ/ಠರಾವಿನಂತೆ ಆರಂಭಿಕ ಠೇವಣಿ ಹಣವನ್ನು ಬಡ್ಡಿ ರಹಿತ ಮರುಪಾವತಿ ಮಾಡಲಾಗುವುದು. ಅರ್ಜಿದಾರರಿಗೆ ಮನೆ/ನಿವೇಶನ/ಫ್ಲಾಟ್ ಹಂಚಿಕೆ ಮಾಡಿದ ನಂತರ, ಅರ್ಜಿದಾರರು ಹಂಚಿಕೆಯನ್ನು ತಿರಸ್ಕರಿಸಿದರೆ ಅಥವಾ ಹಂಚಿಕೆದಾರರು ಮಂಡಳಿಗೆ ಪಾವತಿಸಬೇಕಾದ ಮೊತ್ತವನ್ನು ಪಾವತಿಸದಿದ್ದಲ್ಲಿ/ ಮಂಡಳಿಯು ಹಂಚಿಕೆಯನ್ನು ರದ್ದುಪಡಿಸಿದ್ದಲ್ಲಿ ಮಂಡಳಿಗೆ ಪಾವತಿಸಿದ ಆಸಕ್ತ ಮುಂಗಡ ಠೇವಣಿ / ಆರಂಭಿಕ ಠೇವಣಿಯನ್ನು ಮಂಡಳಿ ನಿಬಂಧನೆಯಂತೆ ಮತ್ತು ಮಂಡಳಿ ಸಭೆಯ ಠರಾವಿನಂತೆ ಮರುಪಾವತಿ ಮಾಡಲಾಗುವುದು.

  11) ಕೇಂದ್ರ/ರಾಜ್ಯ/ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ನೌಕರರಾದಲ್ಲಿ ಸಂಬಂಧಪಟ್ಟ ಮೇಲಾಧಿಕಾರಿಗಳಿಂದ ದೃಡೀಕರಣ ಪತ್ರವನ್ನು ಒದಗಿಸುವುದು.

  12) ಪರಿಷ್ಕರಣಾ ಶುಲ್ಕ, ಆಸಕ್ತ ಮುಂಗಡ ಠೇವಣಿ ಮತ್ತು ಆರಂಭಿಕ ಠೇವಣಿ ಹಣವನ್ನು ಒಂದೇ ಡಿ.ಡಿ/ಚಲನ್ ಮುಖಾಂತರ ಒಟ್ಟಿಗೆ ಪಾವತಿ ಮಾಡಬಹುದು.

  13) ಅಂಚೆ ಮುಖಾಂತರ ಅರ್ಜಿಯನ್ನು ಸಲ್ಲಿಸಿದಲ್ಲಿ, ಅಂಚೆ ಮುಉಖಾಂತರವೇ ಸ್ವೀಕೃತಿಯನ್ನು ಕಳುಹಿಸುವುದು.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  CM Siddaramaiah inaugurates online application portal of Karnataka Housing Board. KHB building 1 lakh house and people can apply from online to get low cost home. Beneficiary will be selected by lottery method.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more