'ಐರಾವತ ಡೈಮಂಡ್ ಕ್ಲಾಸ್ ಬಸ್' ಗಳಿಗೆ ಸಿದ್ದರಾಮಯ್ಯ ಗ್ರೀನ್ ಸಿಗ್ನಲ್

Posted By:
Subscribe to Oneindia Kannada
   Siddaramaiah inaugurates new 'KSRTC Airavat Diamond Class' buses on September 13th

   ಬೆಂಗಳೂರು, ಸೆಪ್ಟೆಂಬರ್ 13 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು (13) ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೂತನ ಐರಾವತ ಡೈಮಂಡ್ ಕ್ಲಾಸ್ ಬಸ್ ಗಳನ್ನು ಪ್ರಯಾಣಿಕರ ಸೇವೆಗೆ ಲೋಕಾರ್ಪಣೆ ಮಾಡಿದರು.

   ಐರಾವತ ಡೈಮಂಡ್‌ ಕ್ಲಾಸ್‌ ಬಸ್ ವಿಶೇಷತೆಗಳು

   ವಿಧಾನಸೌಧದ ಮುಂಭಾಗದಲ್ಲಿ ಇಂದು ಸಿದ್ದರಾಮಯ್ಯ ಅವರು ಡೈಮಂಡ್ ಕ್ಲಾಸ್ ಬಸ್ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಸಾರಿಗೆ ಇಲಾಖೆಯ ಕಾರ್ಯಸಾಧನೆ ಕುರಿತಾದ ಕೈಪಿಡಿ ಬಿಡುಗಡೆ ಮಾಡಿದರು‌. ಈ ವೇಳೆ ಸಾರಿಗೆ ಸಚಿವ ಹೆಚ್ ಎಂ ರೇವಣ್ಣ ಹಾಗೂ ಮಾಜಿ ಸಾರಿಗೆ ಸಚಿವ ಹಾಲಿ ಗೃಹ ಸಚಿವ ರಾಮಲಿಂಗಾ ರೆಡ್ಡಿ ಹಾಜರಿದ್ದರು.

   CM Siddaramaiah inaugurates KSRTC Airavat Diamond Class buses In Bengaluru

   ಪ್ರಯಾಣಿಕರ ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡುವ, ವಿಮಾನದಂತೆ ಬ್ಲಾಕ್ ಬಾಕ್ಸ್ ಹೊಂದಿರುವ ಐರಾವತ ಡೈಮಂಡ್‌ ಕ್ಲಾಸ್‌ ಬಸ್ ಸೇವೆಗೆ ಕೆಎಸ್ಆರ್ ಟಿಸಿ ಚಾಲನೆ ನೀಡಿದೆ. ದೇಶದ ಸಾರಿಗೆ ಸಂಸ್ಥೆಗಳಲ್ಲಿ ಮೊದಲ ಬಾರಿಗೆ ಈ ರೀತಿಯ ಬಸ್‌ ಸೇವೆ ಆರಂಭಿಸಿರುವ ಕೀರ್ತಿಗೆ ಕೆಎಸ್ಆರ್ ಟಿಸಿ ಪಾತ್ರವಾಗಿದೆ.

   CM Siddaramaiah inaugurates KSRTC Airavat Diamond Class buses In Bengaluru

   ವಿಮಾನದಲ್ಲಿರುವಂತೆ ಪ್ರಯಾಣಿಕರು ತುರ್ತು ಸಂದರ್ಭದಲ್ಲಿ ಏನು ಮಾಡಬೇಕು ಎಂಬ 'ಸುರಕ್ಷತಾ ವೀಡಿಯೋ ಮಾಹಿತಿ ಯೋಜನೆ', ಅಪಘಾತಗಳಿಗೆ ಕಾರಣಗಳನ್ನು ತಿಳಿಯಬಹುದಾದ ಬ್ಲಾಕ್‌ ಬಾಕ್ಸ್‌ಗಳನ್ನು ಈ ಬಸ್ ಗಳು ಒಳಗೊಂಡಿವೆ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   Karnataka CM Siddaramaiah inaugurates new 'KSRTC Airavat Diamond Class' buses at Vidhan SoudhaIn, Bengaluru on September 13.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ