ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

100 ಗಸ್ತುಕಾರುಗಳ ಲೋಕಾರ್ಪಣೆಗೊಳಿಸಿದ ಸಿದ್ದರಾಮಯ್ಯ

By Ananthanag
|
Google Oneindia Kannada News

ಬೆಂಗಳೂರು, ಜನವರಿ, 16: ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿ ಸುರಕ್ಷತೆ ಮತ್ತು ಕಷ್ಟದಲ್ಲಿರುವವರ ನೆರವಿಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ 100 ಗಸ್ತು (ಕಾರು) ವಾಹನಗಳನ್ನು ಸೋಮವಾರ ಲೋಕಾರ್ಪಣೆಗೊಳಿಸಿದರು.

ವಿಧಾನಸೌಧದ ಮುಂದೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್, ರಾಜ್ಯ ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್, ನಗರ ಪೊಲೀಸ್ ಆಯುಕ್ತ ಪ್ರವೀಣ್ ಸೂದ್ ಹೆದ್ದಾರಿ ವಾಹನಗಳಿಗೆ ಚಾಲನೆ ನೀಡಿದರು.[ಮಂಗಳೂರಿಗೆ ಬಂದ 25 ಪೊಲೀಸ್ ಗಸ್ತು ವಾಹನಗಳ ವಿಶೇಷತೆಗಳೇನು?]

CM Siddaramaiah inaugurate the 100 High-Tech Highway Patrol Vehicles

ಬಜೆಟಿನಲ್ಲಿ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿ ಸುರಕ್ಷತೆ ಮತ್ತು ಕಷ್ಟದಲ್ಲಿರುವವರ ನೆರವಿಗಾಗಿ 300 ವಾಹನಗಳನ್ನು ನೀಡುವುದಾಗಿ ಘೋಷಿಸಲಾಗಿತ್ತು ಅಂದೆಯೆ ಮೊದಲ ಹಂತದಲ್ಲಿ 100 ವಾಹನಗಳನ್ನು ಲೋಕಾರ್ಪಣೆಗೊಳಿಸಲಾಗಿದೆ ಎಂದು ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್ ತಿಳಿಸಿದರು.

ಪ್ರತಿಯೊಂದು ಕಾರಿಗೂ 10.45 ಲಕ್ಷ ರೂ. ವೆಚ್ಚವಾಗಿದೆ. ಪ್ರತಿ ವಾಹದಲ್ಲಿ ಕ್ಯಾಮೆರಾ, ಲೈಟ್, ಜಿಪಿಆರ್ಎಸ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ತರಬೇತಿ ಪಡೆದ ಎಎಸ್ ಐ,ಹೆಡ್ ಕಾನ್ಸ್ ಟೆಬಲ್, ಕಾನ್ಸ್ ಟೆಬಲ್ ಹಾಗೂ ಇಬ್ಬರು ಡೈವರ್ ಈ ವಾಹನದಲ್ಲಿರುತ್ತಾರೆ. ಜಿಲ್ಲಾ ಪೊಲೀಸ್ ವರಿಷ್ಠಾದಿಕಾರಿಗಳ ಅಧೀನದಲ್ಲಿ ವಾಹಗಗಳು ಕಾರ್ಯನಿರ್ವಹಿಸಲಿದ್ದು, 40 ಕಿಮೀಗೆ ವ್ಯಾಪ್ತಿಗೆ ಒಂದು ಗಸ್ತುವಾಹವನ್ನು ನಿಯೋಜಿಸಿದ್ದು, ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸಲಿವೆ ಎಂದರು.

ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ನಡೆಯುವ ದುರಂತಗಳನ್ನು ಕಡಿಮೆ ಮಾಡುವುದು, ಜನರಿಗೆ ನೆರವು ಕಲ್ಪಿಸುವುದು, ಜಾಗೃತಿ ಮೂಡಿಸುವುದು, ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದು ಇದರ ಉದ್ದೇಶವಾಗಿದೆ ಎಂದು ತಿಳಿಸಿದರು.

English summary
The CM Siddaramaiah inaugurate the 100 High-Tech Highway Patrol Vehicles near Vidhana Sowdha in Bengaluru. Monday Jan 16.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X