ನಮ್ಮ ಮೆಟ್ರೋದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಯಾಣ

Posted By:
Subscribe to Oneindia Kannada

ಬೆಂಗಳೂರು, ಜೂನ್ 16: ನಾಳೆ (ಜೂನ್ 17) ಉದ್ಘಾಟನೆಗೊಳ್ಳಲಿರುವ ಬೆಂಗಳೂರು 'ನಮ್ಮ ಮೆಟ್ರೋ' ದಲ್ಲಿ ನಿನ್ನೆ (ಜೂನ್ 15) ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಯಾಣ ಮಾಡಿದರು. ಮೆಟ್ರೋ ಕಾರ್ಯಕ್ಷಮತೆಯನ್ನು ಕಂಡು ಮೆಚ್ಚುಗೆ ಸೂಚಿಸಿದರು. ಗ್ರೀನ್ ಲೈನ್ ನ ಕೆಂಪೇಗೌಡ (ಮೆಜೆಸ್ಟಿಕ್) ಇಂಟರ್ ಚೇಂಜ್ ನಿಂದ ಆರ್ ವಿ ರಸ್ತೆ ವರೆಗೆ ಸಚಿವ ಕೆ.ಜೆ.ಜಾರ್ಜ್, ಶಾಸಕ ಗುಂಡೂರಾವ್ ರೊಂದಿಗೆ ಪ್ರಯಾಣಿಸಿದ ಸಿದ್ದರಾಮಯ್ಯ ಉದ್ಘಾಟನೆಗೂ ಮುನ್ನ ಕಾಮಗಾರಿ ಸಂಪೂರ್ಣವಾಗಿದೆಯೇ ಎಂದು ಪರಿಶೀಲಿಸಿದರು.

ಮೆಟ್ರೋ ರೈಲಿನ ಎರಡು ಸುದ್ದಿ, ಒಂದು ಹಗುರ ಮತ್ತೊಂದು ಭಾರ

ಮೆಟ್ರೋ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಸಿಂಗ್ ಖರೋಲ ಮುಖ್ಯಮಂತ್ರಿಗಳ ಜೊತೆಗಿದ್ದು, ಉದ್ಘಾಟನೆಗೊಳ್ಳುತ್ತಿರುವ ಸಂಪಿಗೆ ರಸ್ತೆಯಿಂದ ಯಲಚೇನಹಳ್ಳಿವರೆಗಿನ ಗ್ರೀನ್ ಲೈನ್ ಮಾರ್ಗದ ಬಗ್ಗೆ ಮಾಹಿತಿ ನೀಡಿದರು. ಮೆಟ್ರೋ ಉದ್ಘಾಟನೆಗೆ ಒಂದೇ ದಿನ ಬಾಕಿ ಉಳಿದಿದ್ದೂ, ಈಗಲೂ ಕೆಲವು ಕಾರ್ಯಗಳು ಬಅಕಿ ಇರುವುದನ್ನು ಕಂಡು ಮುಖ್ಯಮಂತ್ರಿಗಳು ಆತಂಕ ವ್ಯಕ್ತಪಡಿಸಿಸದರಲ್ಲದೆ, ಆದಷ್ಟು ಬೇಗ ಬಾಕಿ ಉಳಿದ ಕೆಲಸಗಳನ್ನು ಮುಗಿಸುವಂತೆ ಅಧಿಕಾರಿಗಳಿಗೆ ಹೇಳಿದರು.

CM Siddaramaiah has travelled by Namma metro Bengaluru on June 15th

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka Chief Minister Siddaramaiah has travelled by Namma Metro Bengaluru on June 15th. He expressed his satisafaction towards Namma Metro's work style.
Please Wait while comments are loading...