ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯೋಗಿ ಆದಿತ್ಯನಾಥ್ ಮೇಲೆ ಸಿದ್ದರಾಮಯ್ಯ ಟ್ವೀಟ್ ಬಾಣ!

|
Google Oneindia Kannada News

Recommended Video

ಯೋಗಿ ಆದಿತ್ಯನಾಥ್ ರ ಗೋರಖಪುರದ ಸೋಲಿಗೆ ಸಿದ್ದರಾಮಯ್ಯನವರ ಟ್ವೀಟ್ ಬಾಣ | Oneindia Kannada

ಬೆಂಗಳೂರು, ಮಾರ್ಚ್ 15: "ಅಭಿವೃದ್ಧಿಯ ಬಗ್ಗೆ ಕರ್ನಾಟಕದಲ್ಲಿ ಉಪನ್ಯಾಸ ನೀಡುವುದನ್ನು ಯೋಗಿ ಆದಿತ್ಯನಾಥ್ ಇನ್ನು ಕಡಿಮೆ ಮಾಡಬೇಕು" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.

ನಿನ್ನೆ(ಮಾ.14) ಹೊರಬಿದ್ದ ಉತ್ತರ ಪ್ರದೇಶದ ಎರಡು ಲೋಕಸಭಾ ಕ್ಷೇತ್ರಗಳ ಉಪಚುನಾವಣೆ ಫಲಿತಾಂಶದಲ್ಲಿ ಬಿಜೆಪಿ ಎರಡೂ ಸ್ಥಾನಗಳಲ್ಲೂ ಸೋಲನುಭವಿಸಿತ್ತು. ಫಲಿತಾಂಶ ಹೊರಬೀಳುತ್ತಿದ್ದಂತೆಯೇ ಮಾಧ್ಯಮಗಳು ಬಿಜೆಪಿಯನ್ನು ಗೇಲಿ ಮಾಡುವುದಕ್ಕೆ ಆರಂಭಿಸಿದ್ದವು.

ಸೈಕಲ್ ಗೆ 'ಆನೆ' ಬಲ, ಉತ್ತರ ಪ್ರದೇಶದಲ್ಲಿ ಕಮಲ ಅಪ್ಪಚ್ಚಿಸೈಕಲ್ ಗೆ 'ಆನೆ' ಬಲ, ಉತ್ತರ ಪ್ರದೇಶದಲ್ಲಿ ಕಮಲ ಅಪ್ಪಚ್ಚಿ

"ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳು ಪ್ರತಿನಿಧಿಸುತ್ತಿದ್ದ ಕ್ಷೇತ್ರಗಳಲ್ಲಿ ಬಿಜೆಪಿ ಸೋಲುಂಡಿದ್ದು ಅದರ ಸೊಕ್ಕು ಮುರಿದಿದೆ. ಈ ಐತಿಹಾಸಿಕ ಗೆಲುವಿಗೆ ಎಸ್ಪಿ ಮತ್ತು ಬಿಎಸ್ಪಿಗೆ ಅಭಿನಂದನೆಗಳು. ಬಿಜೆಪಿಯೇತರ ಪಕ್ಷಗಳ ಒಗ್ಗಟ್ಟು ಈ ಗೆಲುವಿಗೆ ಪ್ರಮುಖ ಕಾರಣವಾಗಿದೆ" ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಹಾಗೇ ಮುಂದುವರಿದು, "ಇನ್ನುಮೇಲೆ ಯೋಗಿ ಆದಿತ್ಯನಾಥ್ ಅವರ ಕರ್ನಾಟಕದಲ್ಲಿ ಉಪನ್ಯಾಸ ನೀಡುವುದನ್ನು ಕೊಂಚ ಕಡಿಮೆ ಮಾಡುವುದು ಒಳಿತು" ಎಂದು ಸಹ ಗೇಲಿ ಮಾಡಿದ್ದಾರೆ.

ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಗೋರಖ್ ಪುರ್ ಕ್ಷೇತ್ರವನ್ನು ಹಾಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರತಿನಿಧಿಸುತ್ತಿದ್ದ ಕ್ಷೇತ್ರ ಗೋರಖ್ಪುರದಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿ ಪ್ರವೀಣ್ ಕುಮಾರ್ ನಿಶಾದ್ ಗೆಲುವು ಸಾಧಿಸಿದ್ದರೆ, ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಪ್ರತಿನಿಧಿಸುತ್ತಿದ್ದ ಫುಲ್ಪುರ್ ಕ್ಷೇತ್ರದಲ್ಲಿಯೂ ಎಸ್ಪಿ ಅಭ್ಯರ್ಥಿ ನಾಗೇಂದ್ರ ಪ್ರತಾಪ್ ಸಿಂಗ್ ಪಟೇಲ್ ಗೆಲುವು ಸಾಧಿಸಿದ್ದಾರೆ.

English summary
"Yogi Adityanath should spend less time lecturing Karnataka on development" Karnataka chief minister Siddaramaiah said on his twitter, after BJP failed to win 2 Loksabha constituencies in Uttar Pradesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X