ನಮ್ಮ ಮೆಟ್ರೋ ಮೊದಲನೇ ಹಂತ ಮಾರ್ಚ್ 2017ಕ್ಕೆ ಪೂರ್ಣ

Posted By:
Subscribe to Oneindia Kannada

ಬೆಂಗಳೂರು, ಸೆ. 14: ನಮ್ಮ ಮೆಟ್ರೋದ ಮೊದಲನೇ ಹಂತದ ಎಲ್ಲಾ ಕಾಮಗಾರಿಗಳು ಮುಂದಿನ ಮಾರ್ಚ್ ವೇಳೆಗೆ ಪೂರ್ಣಗೊಳ್ಳಲಿದ್ದು, ಏಪ್ರಿಲ್ ನಿಂದ ಈ ಮಾರ್ಗದಲ್ಲಿ ಸಂಪೂರ್ಣ ಸಂಚಾರ ಕಾರ್ಯಾರಂಭವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಕಟಿಸಿದರು.

ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ(ಬಿಎಂಆರ್ ಸಿಎಲ್) ದ ಕಾರ್ಯಚಟುವಟಿಕೆಗಳ ಪ್ರಗತಿ ಪರಿಶೀಲನೆಯ ನಂತರ ಅವರು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.[ಮೆಟ್ರೋದಲ್ಲಿ ಪ್ರತಿದಿನ 15 ಲಕ್ಷ ಪ್ರಯಾಣಿಕರ ಸಂಚಾರ ಸಾಧ್ಯ!]

ಮೊದಲನೇ ಹಂತದ 42 ಕಿ ಮೀ ಪೈಕಿ, 11 ಕಿ ಮೀ ಹೊರತುಪಡಿಸಿ 29 ಕಿ ಮೀ ಈಗಾಗಲೇ ಮೆಟ್ರೋ ಸಂಚಾರಕ್ಕೆ ಸಮರ್ಪಿತವಾಗಿದೆ. ಈ 11 ಕಿ ಮೀ ಮಾರ್ಗದಲ್ಲಿ ನಾಲ್ಕು ಕಿ ಮೀ ಸುರಂಗ ಮಾರ್ಗವಿದೆ.

CM Siddaramaiah BMRCL review Meeting Highlights

ಸುರಂಗ ಮಾರ್ಗದ ಕಾಮಗಾರಿಗಳಲ್ಲಿ ಕೇವಲ 15 ಮೀಟರ್ ಕಾಮಗಾರಿಗಳು ಮಾತ್ರ ಬಾಕಿ ಇದೆ. ಅಂತೆಯೇ, ಹಳಿ ಅಳವಡಿಕೆ, ವಿದ್ಯುತ್ ಸಂಪರ್ಕ, ಪ್ರಾಯೋಗಿಕ ಸಂಚಾರ ಎಲ್ಲವೂ ಮುಂದಿನ ಮಾರ್ಚ್ ವೇಳೆಗೆ ಪೂರ್ಣಗೊಳ್ಳುತ್ತವೆ. ಏಪ್ರಿಲ್ ನಲ್ಲಿ ಮೊದಲ ಹಂತದ 13,800 ಕೋಟಿ ರೂ ವೆಚ್ಚದ ಈ ಸಂಪೂರ್ಣ ಮಾರ್ಗವು ಕಾರ್ಯಾಚರಣೆಗೆ ಮುಕ್ತವಾಗಲಿದೆ ಎಂದರು.

ಪ್ರಸ್ತುತ ಮೆಟ್ರೋದಲ್ಲಿ ಪ್ರತಿದಿನ ಸರಾಸರಿ 1.8 ಲಕ್ಷ ಪ್ರಯಾಣಿಕರು ಸಂಚರಿಸುತ್ತಿದ್ದಾರೆ. ಮೊದಲ ಹಂತದ ಕಾರ್ಯಾಚರಣೆ ಪೂರ್ಣ ಪ್ರಮಾಣದಲ್ಲಿ ಪ್ರಾರಂಭವಾದಲ್ಲಿ, ಪ್ರತಿ ದಿನ ಐದು ಲಕ್ಷ ಪ್ರಯಾಣಿಕರು ಸಂಚರಿಸುವ ನಿರೀಕ್ಷೆ ಇದೆ.

ನಮ್ಮ ಮೆಟ್ರೋದ ಎರಡನೇ ಹಂತದ 72 ಕಿ ಮೀ ಕಾಮಗಾರಿಗಳೂ ಪ್ರಗತಿಯಲ್ಲಿವೆ. ಮೈಸೂರು ರಸ್ತೆಯಿಂದ ಕೆಂಗೇರಿಯವರೆಗೆ ಹಾಗೂ ಕನಕಪುರ ರಸ್ತೆಯಿಂದ ನೈಸ್ ರಸ್ತೆಯ ಕೂಡು ರಸ್ತೆಯವರೆಗೆ ಈಗಾಗಲೇ ಕಾಮಗಾರಿಗಳು ಪ್ರಾರಂಭವಾಗಿವೆ. ಎಲೆಕ್ಟ್ರಾನಿಕ್ಸ್ ಸಿಟಿಯಿಂದ ವೈಟ್‍ಫೀಲ್ಡ್ ವರೆಗಿನ 16 ಕಿ ಮೀ ಮಾರ್ಗಕ್ಕೆ ಮಾಸಾಂತ್ಯದೊಳಗೆ ಟೆಂಡರ್ ಪ್ರಕ್ರಿಯೆಗೆ ಚಾಲನೆ ದೊರೆಯಲಿದೆ ಎಂದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
CM Siddaramaiah BMRCL review Meeting Highlights : First phase of Namma metro will be completed in the month of March 2017. Rs 13,800 Cr project estimates 5 lakh commuters to travel daily once it becomes fully functional.
Please Wait while comments are loading...