ನನ್ನ ಮಗನ ಈ ಸ್ಥಿತಿಗೆ ಕಾಂಗ್ರೆಸ್ ನಾಯಕರೇ ಕಾರಣ: ಡಿಕೆಶಿ ತಾಯಿ ಆರೋಪ

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 3: ನನ್ನ ಮಗನ ವಿರುದ್ಧ ಐಟಿ ರೈಡ್ ಆಗಿರುವುದರ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನ ಹಿರಿಯ ನಾಯಕರ ಕೈವಾಡವಿದೆ ಎಂದು ಡಿಕೆ ಶಿವಕುಮಾರ್ ತಾಯಿ ಗೌರಮ್ಮ ಆರೋಪಿಸಿದ್ದಾರೆ.

ಡಿಕೆಶಿ ವಿರುದ್ಧ ಜಾರಿ ನಿರ್ದೇಶನಾಲಯದಲ್ಲಿ ದಾಖಲಾಯ್ತು ಹೊಸ ಕೇಸ್

ಡಿಕೆಶಿ ವಿರುದ್ಧ ಆದಾಯ ತೆರಿಗೆ ಇಲಾಖೆಯ ರೈಡ್ ಆಗಿರುವ ಹಿನ್ನೆಲೆಯಲ್ಲಿ ತಮ್ಮನ್ನು ಸಂಪರ್ಕಿಸಿದ ಖಾಸಗಿ ಸುದ್ದಿ ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿರುವ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಸಹಚರರು ತಮ್ಮ ಮಕ್ಕಳನ್ನು (ಡಿಕೆ ಶಿವಕುಮಾರ್ ಹಾಗೂ ಡಿಕೆ ಸುರೇಶ್) ರಾಜಕೀಯವಾಗಿ ಮುಗಿಸಲು ಷಡ್ಯಂತ್ರ ರೂಪಿಸಿದ್ದಾರೆ.

CM Siddaramaiah behind IT raids: DK Shivakumar's mother Gowramma

ಸಿದ್ದರಾಮಯ್ಯ ಅವರು ಶಿವಕುಮಾರ್ ವಿರುದ್ಧ ಕತ್ತಿ ಮಸೆಯುತ್ತಿದ್ದಾರೆ. ಅಲ್ಲದೆ, ಶಿವಕುಮಾರ್ ಅವರನ್ನು ಬೆಳೆಯಲು ಬಿಟ್ಟರೆ ಮುಂದೆ ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ಕುತ್ತು ಬರುತ್ತದೆ ಎಂದು ಎಣಿಸಿ, ಈ ರೀತಿಯ ದಾಳಿಗಳಿಗೆ ಪರೋಕ್ಷವಾಗಿ ಪ್ರೋತ್ಸಾಹಿಸುತ್ತಿದ್ದಾರೆ ಎಂದು ಅವರು ಅಳಲು ತೋಡಿಕೊಂಡಿದ್ದಾರೆ.

ಡಿಕೆ ಶಿವಕುಮಾರ್ ಮೇಲೆ ಐಟಿ ದಾಳಿ : ಗುರುವಾರದ 7 ಬೆಳವಣಿಗೆ

ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಶಿವಕುಮಾರ್ ಮನೆಗಳ ಮೇಲೆ ರೈಡ್ ಮಾಡುವ ವಿಚಾರ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರಿಗೆ ಮೊದಲೇ ಗೊತ್ತಿರುತ್ತದೆ. ಹಾಗೆ ಗೊತ್ತಿದ್ದೂ ಅವರಿಗೆ ಸುಮ್ಮನಿದ್ದರೇಕೆ, ರೈಡ್ ನಡೆದ ನಂತರ ಆಘಾತಕ್ಕೊಳಗಾದವರಂತೆ ನಟಿಸುತ್ತಿರುವುದು ನಮಗೆ ಗೊತ್ತಾಗುತ್ತಿದೆ ಎಂದು ಗೌರಮ್ಮ ಅವರು ತಮ್ಮದೇ ರೀತಿಯಲ್ಲಿ ಪರಿಸ್ಥಿತಿಯನ್ನು ವಿಶ್ಲೇಷಣೆ ಮಾಡಿಕೊಂಡರು.

ಕರ್ನಾಟಕದ 'ಪವರ್' ಫುಲ್ ಸಚಿವ ಡಿಕೆ ಶಿವಕುಮಾರ್ ಪರಿಚಯ

ಒಟ್ಟಾರೆಯಾಗಿ, ಅವರ ಮಾತುಗಳು ನೊಂದ ತಾಯಿಯೊಬ್ಬಳ ಆಕ್ರಂದನವಾಗಿ ತೋರುತ್ತಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka's Power minister DK Shivakumar's mothe Gowramma lashed against Chief Minister Siddaramaiah and other Congress leaders. She alleged Siddaramaiah and other senior Congress leaders were known about the IT raids on DK Shivakumar's home recently. She also alleged that, all leaders were remained mum and never tried to stop IT raids.
Please Wait while comments are loading...