ಪೊಲೀಸರಿಗೆ ಇನ್ನು ಮುಂದೆ ವಾರದ ರಜೆ ಕಡ್ಡಾಯ: ಸಿದ್ದರಾಮಯ್ಯ

Posted By:
Subscribe to Oneindia Kannada

ಬೆಂಗಳೂರು, ನವೆಂಬರ್, 18: ಡಿಸೆಂಬರ್ 1 ರಿಂದ ಜಾರಿಗೆ ಬರುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪೊಲೀಸ್ ಸಿಬ್ಬಂದಿಗೆ ಶೇ.90 ರಷ್ಟು ವಿಶೇಷ ಸೌಲಭ್ಯಗಳನ್ನು ಘೋಷಿಸಿದ್ದಾರೆ. ಇನ್ನು ಮುಂದೆ ಪೊಲೀಸರಿಗೆ ಕಡ್ಡಾಯವಾಗಿ ವಾರದ ರಜೆ ನೀಡಲು ಕ್ರಮಕೈಗೊಳ್ಳುವುದಾಗಿ ಸಿಎಂ ತಿಳಿಸಿದರು.

ಗೃಹಕಚೇರಿ ಕೃಷ್ಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ, ದೇಶದ ಇತರೆ ರಾಜ್ಯಗಳಲ್ಲಿ ನೀಡದ ಸೌಲಭ್ಯಗಳನ್ನು ಪೊಲೀಸ್ ಸಿಬ್ಬಂದಿಗೆ ರಾಜ್ಯ ಸರ್ಕಾರ ಕಲ್ಪಿಸುತ್ತಿದೆ ಎಂದು ಹೇಳಿದರು.

CM Siddaramaiah announced various Facilities to Police department

ಸುದ್ದಿಗೋಷ್ಠಿಯಲ್ಲಿ ತಿಳಿಸಿದ ಪ್ರಮುಖ ವಿಷಯಗಳು

* ಆಡರ್ಲಿ ಪದ್ದತಿ ರದ್ದು ಮಾಡಲು ನಿರ್ಧಾರ

* ಪೊಲೀಸ್ ಪೇದೆಗಳಿಗೆ 10 ವರ್ಷಕೊಮ್ಮೆ ಬಡ್ಡಿ

* ವರ್ಷಕ್ಕೆ 1 ತಿಂಗಳ ಹೆಚ್ಚುವರಿ ಸಂಬಳ ಸೇರಿ ಒಟ್ಟು 13 ತಿಂಗಳ ಸಂಬಳ

* 711 ಪಿಸ್ಐ ನೇಮಕಾತಿಗೆ ಸೂಚೆನ

* ಪ್ರತಿವರ್ಷ 7815 ಸಿಬ್ಬಂದಿ ನೇಮಕಾತಿಗೆ ಸಮ್ಮತಿ

* ಸಮವಸ್ತ್ರ ಭತ್ಯೆ 500ಕ್ಕೆ ಹೆಚ್ಚಳ, ಶ್ರಮ ಭತ್ಯೆ 1 ಸಾವಿರ

* ಈ ಸೌಲಭ್ಯಗಳ ಅನುಷ್ಠಾನದಿಂದ ಸರ್ಕಾರಕ್ಕೆ 200ಕೋಟಿ ಹೆಚ್ಚುವರಿ ಹೊರೆ

* ಪ್ರತಿ ತಿಂಗಳು 2 ಸಾವಿರ ಹೆಚ್ಚುವರಿ ಸಂಬಳ

ಸುದ್ದಿಗೋಷ್ಠಿಯಲ್ಲಿ ಗೃಹ ಸಚಿವ ಪರಮೇಶ್ವರ್ ಉಪಸ್ಥತಿರರಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
CM Siddaramaiah announced various Facilities to state Police department, in CM Home office Krishna on Friday. with effect from December first.
Please Wait while comments are loading...