ಸೇತುವೆ ಪರಿಕಲ್ಪನೆ ಬಿಜೆಪಿಯದ್ದು, ಅನುಷ್ಠಾನ ಕಾಂಗ್ರೆಸಿನದ್ದು :ಸಿಎಂ

Posted By:
Subscribe to Oneindia Kannada

ಬೆಂಗಳೂರು, ಅಕ್ಟೋಬರ್ 14: ನಗರದ ಚಾಲುಕ್ಯ ವೃತ್ತದಿಂದ ಹೆಬ್ಬಾಳದವರೆಗೂ ನಿರ್ಮಿಸಲು ಯೋಜಿಸಿರುವ ಉಕ್ಕಿನ ಸೇತುವೆಯ ವೆಚ್ಚದಲ್ಲಿ ತೀವ್ರ ಏರಿಕೆ ಕಂಡು ಬರುತ್ತಿದೆ ಎಂಬ ಆಕ್ಷೇಪ ಸಾರ್ವಜನಿಕ ವಲಯದಲ್ಲಿ ಆಕ್ಷೇಪಣೆ ಕೇಳಿ ಬರುತ್ತಿದೆ. ಯೋಜನೆ ಬೇಡ ಎಂದು ಪ್ರತಿಭಟನೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಸಿಎಂ ಸಿದ್ದರಾಮಯ್ಯ,ಕ್ಕಿನ ಸೇತುವೆ ಬೆಂಗಳೂರಿಗೆ ಅಗತ್ಯವಿದೆ ಎಂದಿದ್ದಾರೆ.

ಗೃಹ ಕಚೇರಿ ಕೃಷ್ಣಾದಲ್ಲಿ ಗುರುವಾರ ಸಂಜೆ ಸುದ್ದಿಗೋಷ್ಠಿ ನಡೆಸಿದ ಸಿದ್ದರಾಮಯ್ಯ ಅವರು, ನಗರದ ಹೃದಯಭಾಗದ ಹೈಗ್ರೌಂಡ್ಸ್ ನಿಂದ ಹೆಬ್ಬಾಳದವರೆಗೆ ಉಕ್ಕಿನ ಸೇತುವೆ ನಿರ್ಮಾಣ ಮಾಡುವ ಪ್ರಸ್ತಾಪವನ್ನು ಎಲ್ಲರ ಅಭಿಪ್ರಾಯಗಳನ್ನು ಗಣನೆಗೆ ತೆಗೆದುಕೊಂಡ ನಂತರವೇ, ಈ ಸೇತುವೆಯ ನಿರ್ಮಾಣ ಪ್ರಕ್ರಿಯೆಯತ್ತ ಸರ್ಕಾರ ತನ್ನ ಹೆಜ್ಜೆಯನ್ನಿರಿಸಿದೆ. ಈ ಯೋಜೆಯ ಪರಿಕಲ್ಪನೆ 2010 ನೇ ಇಸವಿಯಲ್ಲಿ ಹಿಂದಿನ ಸರ್ಕಾರದ ಅವಧಿಯಲ್ಲೇ ಸಿದ್ದವಾಗಿತ್ತು ಎಂದರು.[ಸ್ಟೀಲ್ ಬ್ರಿಡ್ಜ್ ಟೆಂಡರ್ ಗೊಂದಲಕ್ಕೆ ಜಾರ್ಜ್ ಕೊಟ್ಟ ಉತ್ತರವೇನು?]

CM Siddaramaiah and KJ George defend multi-crore steel flyover project

ಇದೇ ಸಂದರ್ಭದಲ್ಲಿ ಬೆಂಗಳೂರು ಅಭಿವೃದ್ಧಿ ಹಾಗೂ ನಗರ ಯೋಜನಾ ಸಚಿವ ಕೆ. ಜೆ. ಜಾರ್ಜ್ ಅವರು ಮಾತನಾಡಿ, ಅಲ್ಲದೆ, ಮುಖ್ಯಮಂತ್ರಿಯವರು 2014-15 ನೇ ಸಾಲಿನ ತಮ್ಮ ಆಯವ್ಯಯ ಭಾಷಣದಲ್ಲಿ ಯೋಜನೆಯ ಅನುಷ್ಠಾನ ಕುರಿತಂತೆ ಘೋಷಿಸಿದ್ದರು. ಅಲ್ಲದೆ, ಜನರ ಹಿತವನ್ನು ದೃಷ್ಟಿಯಲ್ಲಿರಿಸಿಕೊಂಡು ಬೆಂಗಳೂರು ದಾರ್ಶನಿಕ ಗುಂಪಿನ (Bengaluru Vision Group) 120 ಕಿ. ಮೀ ಎಲಿವೇಟೆಡ್ ಕಾರಿಡಾರ್ ನ ಒಂದು ಭಾಗವಾಗಿ ಈ ಉಕ್ಕಿನ ಸೇತುವೆ ಯೋಜನೆಯನ್ನು ಅನುಷ್ಠಾನಗೊಳಿಸಲು ಸರ್ಕಾರ ಮುಂದಾಗಿದೆ.[ಸ್ಟೀಲ್ ಫ್ಲೈ ಓವರ್ ನಿಂದ ತೆರಿಗೆ ಹಣ ಲೂಟಿ : ಎಎಪಿ]

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಂತರ್ಜಾಲ ತಾಣವನ್ನು ಸಂದರ್ಶಿಸಿ ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಬಹುದು ಎಂದು ಸಚಿವರು ಸ್ಪಷ್ಟಪಡಿಸಿದರು.

ಸುಮಾರು 1,791 ಕೋಟಿ ರು ವೆಚ್ಚದ ಈ ಯೋಜನೆ ಬಗ್ಗೆ ಅಪಸ್ವರಗಳು ಕೇಳಿ ಬಂದ ಹಿನ್ನಲೆಯಲ್ಲಿ ಗುರುವಾರದಂದು ಕೆಜೆ ಜಾರ್ಜ್ ಅವರು ಬಿಡಿಎ FAQs ಇರುವ ಫೈಲ್ ಹಂಚಿಕೊಂಡು ಟ್ವೀಟ್ ಮಾಡಿದ್ದರು. ಈ ಯೋಜನೆಯಿಂದ ಟ್ರಾಫಿಕ್ ಸಮಸ್ಯೆ ದೂರಾಗಲಿದೆ ಎಂದು ಸಮರ್ಥಿಸಿಕೊಂಡಿದ್ದರು. (ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Amidst rising public outrage over the Steel flyover project, the state government, on Thursday, defended it and claimed the entire project is ‘transparent’ and it is necessary for Bengaluru.
Please Wait while comments are loading...