ನೋಟು ನಿಷೇದ ಕೇಂದ್ರಕ್ಕೆ ಸಿಎಂ ಮತ್ತೊಂದು ಪತ್ರ

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 22: ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲಾ ಸಹಕಾರ ಕೇಂದ್ರಗಳಲ್ಲಿ ಹಳೇ ನೋಟು ಚಲಾವಣೆಗೆ ಅವಕಾಶ ನೀಡಬೇಕೆಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರಿಗೆ ಸೋಮವಾರ ಪತ್ರ ಬರೆದಿದ್ದಾರೆ.

ಈ ಹಿಂದೆಯೇ ಎರಡು ಬಾರಿ ನ.14 ಮತ್ತು ನ.17 ರಂದು ರೈತರಿಗೆ ಅನುಕೂಲವಾಗುವಂತೆ ಹಳೇ ನೋಟುಗಳ ಸಡಿಲಿಕೆಗೆ ಅವಕಾಶ ಕೋರಿ ಪತ್ರ ಬರೆದಿದ್ದರು.[ನೋಟು ನಿಷೇಧ: ಕೇಂದ್ರಕ್ಕೆ ಪತ್ರ ಬರೆದ ಸಿದ್ದು]

cm siddaramaiah again write a letter to finance minister

ಪ್ರಸ್ತುತ ಪತ್ರದಲ್ಲಿ ರೈತರ ಅನುಕೂಲಕ್ಕಾಗಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಗಳಲ್ಲಿ ಹಳೆಯ ನೋಟುಗಳ ಚಲಾವಣೆಗೆ ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿದ್ದಾರೆ.

ರಾಜ್ಯದಲ್ಲಿ ರೈತರ ಈಗಿನ ಪರಿಸ್ಥಿತಿ ಮತ್ತು ಹಣ ಬದಲಾವಣೆ ನಂತರ ಅವರ ಸ್ಥಿತಿಯ ಬಗ್ಗೆ ಅವರು ವಿವರಿಸಿದ್ದಾರೆ.

cm siddaramaiah again write a letter to finance minister

ಜಿಲ್ಲಾ ಸಹಕಾರ ಬ್ಯಾಂಕ್, ಇತರ ಸಹಕಾರ ಬ್ಯಾಂಕ್ ಗಳಲ್ಲಿ ಹಳೇ ನೊಟುಗಳ ಬಳಕೆಯಾಗುವಂತೆ ಆರ್ ಬಿಐನಿಂದ ಸೂಚನೆ ನೀಡಬೇಕೆಂದು ಕೇಳಿಕೊಂಡಿದ್ದಾರೆ. ಅಲ್ಲದೆ ಡಿಸಿಸಿ ಬ್ಯಾಂಕ್ ಗಳಲ್ಲಿ ರೈತರ ತಮ್ಮ ಹಣವನ್ನು ಪಡೆಯಲು ಅವಕಾಶ ಕಲ್ಪಿಸಿಕೊಡಬೇಕೆಂದು ತಿಳಿಸಿದ್ದಾರೆ.

ನಾನು ಈ ಹಿಂದೆ ಎರಡು ಪತ್ರಗಳನ್ನು ಇದೇ ಕಾರಣದಿಂದ ಬರೆದಿದ್ದೆ ಆ ಎರಡು ಪತ್ರಗಳಿಗೆ ಶೀಘ್ರ ಪ್ರತಿಕ್ರಿಯೆ ಇಲ್ಲದ ಕಾರಣ, ಪರಿಸ್ಥತಿಯನ್ನು ನಿಭಾಯಿಸಲು ಕೇಂದ್ರವು ಕ್ರಮ ವಹಿಸಬೇಕೆಂದು ಈ ಪ್ರತ್ರವನ್ನು ಬರೆದಿದ್ದೇನೆ. ಆದಷ್ಟು ಬೇಗ ಸಲಹೆ, ಸೂಚನೆಯನ್ನು ನೀಡುತ್ತೀರೆಂದು ನಾನು ನಂಬಿದ್ದೇನೆ ಎಂದು ತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka state Chief Minister Siddaramaiah ones again write's letter over demonetisation to Central finance minister Arun Jaitley and RBI chief on monday.
Please Wait while comments are loading...