ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡಿಕೆಶಿಯನ್ನು ಕುಮಾರಸ್ವಾಮಿ ಶಾಸಕರೊಂದಿಗೆ ಹಠಾತ್ ಭೇಟಿ ಮಾಡಿದ್ದೇಕೆ?

|
Google Oneindia Kannada News

Recommended Video

ಡಿ ಕೆ ಶಿವಕುಮಾರ್ ಆರೋಗ್ಯ ವಿಚಾರಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ | Oneindia Kannada

ಬೆಂಗಳೂರು, ಸೆಪ್ಟೆಂಬರ್ 20: ಜಾರಿ ನಿರ್ದೇಶನಾಲಯದಿಂದ ಬಂಧನ ಭೀತಿ ಎದುರಿಸುತ್ತಿರುವ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಗುರುವಾರ ಬೆಳಗ್ಗೆ ಹಠಾತ್ ಭೇಟಿ ಮಾಡಿದ್ದಾರೆ.

ಕಾಂಗ್ರೆಸ್ ನ ಕೆಲ ಶಾಸಕರು ಒಂದೆರೆಡು ದಿನಗಳಲ್ಲಿ ಅಜ್ಞಾತ ಸ್ಥಳಕ್ಕೆ ತೆರಳಲಿದ್ದಾರೆ ಎಂಬ ವದಂತಿಯ ಬೆನ್ನಲ್ಲೇ ಸಿಎಂ ಕುಮಾರಸ್ವಾಮಿ ಸಾಗರ್ ಅಪೊಲೊ ಆಸ್ಪತ್ರೆಗೆ ಭೇಟಿ ನೀಡಿ ಡಿಕೆ ಶಿವಕುಮಾರ್ ಆರೋಗ್ಯ ವಿಚಾರಿಸುವ ನೆಪದಲ್ಲಿ ಚರ್ಚೆ ನಡೆಸಿದ್ದಾರೆ.

ನಾನು ತಪ್ಪು ಮಾಡಿಲ್ಲ, ಹೆದರಲ್ಲ, ಹೇಡಿಯಲ್ಲ: ಡಿ.ಕೆ.ಶಿವಕುಮಾರ್‌ನಾನು ತಪ್ಪು ಮಾಡಿಲ್ಲ, ಹೆದರಲ್ಲ, ಹೇಡಿಯಲ್ಲ: ಡಿ.ಕೆ.ಶಿವಕುಮಾರ್‌

ಸಿಎಂ ಕುಮಾರಸ್ವಾಮಿ ಜತೆ ಸಚಿವ ಬಂಡೆಪ್ಪ ಕಾಶೆಂಪೂರ್ ಕೂಡ ಈ ವೇಳೆ ಹಾಜರಿದ್ದರು, ಮೂರು ದಿನಗಳ ಹಿಂದಷ್ಟೇ ವಾಂತಿ ಹಾಗೂ ಉದರ ಬೇನೆಯಿಂದ ಬಳಲುತ್ತಿರುವ ಸಚಿವ ಶಿವಕುಮಾರ್ ಮಂಗಳವಾರ ಆಸ್ಪತ್ರೆಗೆ ದಾಖಲಾಗಿದ್ದರು.

ಅಕ್ರಮ ಹಣ ಸಂಗ್ರಹ ಹಾಗೂ ಹವಾಲಾ ಆರೋಪ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ ಎಫ್‌ಐ ಆರ್ ದಾಖಲಿಸಿದ ಬೆನ್ನಲ್ಲೇ ಶಿವಕುಮಾರ್ ಅನಾರೋಗ್ಯಕ್ಕೆ ತುತ್ತಾಗಿದ್ದರು. ಈ ಎಲ್ಲಾ ಬೆಳವಣಿಗೆಗಳ ನಡುವೆ ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರಾ ಬುಧವಾರ ಮಧ್ಯಾಹ್ನ ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಸಚಿವ ಡಿಕೆ ಶಿವಕುಮಾರ್ ಹಾಗೂ ಕಾಂಗ್ರೆಸ್ ನಾಯಕರ ಅಕ್ರಮ ಸಂಪಾದನೆ ವಿರುದ್ಧ ದಾಖಲೆ ಬಿಡುಗಡೆ ಮಾಡಿದ್ದರು.

ಬೆಂಗಳೂರಿನಲ್ಲಿ ಸೈಟ್ ಕೊಡುವುದಾಗಿ ಭರವಸೆ ನೀಡಿದ್ದ ಡಿಕೆಶಿ ಬೆಂಗಳೂರಿನಲ್ಲಿ ಸೈಟ್ ಕೊಡುವುದಾಗಿ ಭರವಸೆ ನೀಡಿದ್ದ ಡಿಕೆಶಿ

ಈ ಹಿನ್ನೆಲೆಯಲ್ಲಿ ಡಿಕೆ ಶಿವಕುಮಾರ್ ಪತ್ರಿಕಾಗೋಷ್ಠಿ ನಡೆಸಿದ್ದರು ಬಳಿಕ ಅಪೊಲೊ ಆಸ್ಪತ್ರೆಗೆ ಮತ್ತೆ ದಾಖಲಾಗಿದ್ದರು, ಗುರುವಾರ ಬೆಳಗ್ಗೆ ಶಿವಕುಮಾರ್ ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಾರೆ ಎಂದು ಹೇಳಲಾಗಿತ್ತು ಆದರೆ ಸಿಎಂ ಕುಮಾರ ಸ್ವಾಮಿ ಗುರುವಾರ ಬೆಳಗ್ಗೆ ಹಠಾತ್ ಭೇಟಿ ನೀಡಿರುವುದು ಅನಿಶ್ಚಿತತೆ ಮುಂದುವರೆದಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ. ಕುಮಾರಸ್ವಾಮಿಯವರೊಂದಿಗೆ 22 ಎಂಎಲ್ ಎ ಗಳು ಕೂಡ ಹಾಜರಿದ್ದರು ಎಂದು ತಿಳಿದುಬಂದಿದೆ.

ಅನಾರೋಗ್ಯ ಕಾರಣ ಆಸ್ಪತ್ರೆಗೆ ದಾಖಲಾದ ಡಿ.ಕೆ.ಶಿವಕುಮಾರ್ ಅನಾರೋಗ್ಯ ಕಾರಣ ಆಸ್ಪತ್ರೆಗೆ ದಾಖಲಾದ ಡಿ.ಕೆ.ಶಿವಕುಮಾರ್

ಶಿವಕುಮಾರ್ ಸಂಜೆಯ ವೇಳೆಗೆ ಬಿಡುಗಡೆಯಾಗುತ್ತಾರೆ ಎನ್ನಲಾಗಿದೆಯಾದರೂ ಬಿಡುಗಡೆಯಾಗುವುದಾದರೆ ಕುಮಾರಸ್ವಾಮಿ ಭೇಟಿ ನೀಡಿರುವುದು ಏಕೆ ಎಂಬ ಪ್ರಶ್ನೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಶಿವಕುಮಾರ್ ಹಾಗೂ ಕುಮಾರಸ್ವಾಮಿ ಭೇಟಿ ತೀವ್ರ ಕುತೂಹಲ ಕೆರಳಿಸಿದೆ.

ದೆಹಲಿಯಲ್ಲಿ ಬಿಜೆಪಿಯಿಂದ ಬ್ರಹ್ಮಾಸ್ತ್ರ, ಕಾಂಗ್ರೆಸ್‌ಗೆ ಡಿಕೆಶಿ ಎಟಿಎಂ ಎಂದ ಪಾತ್ರ

ದೆಹಲಿಯಲ್ಲಿ ಬಿಜೆಪಿಯಿಂದ ಬ್ರಹ್ಮಾಸ್ತ್ರ, ಕಾಂಗ್ರೆಸ್‌ಗೆ ಡಿಕೆಶಿ ಎಟಿಎಂ ಎಂದ ಪಾತ್ರ

ಕರ್ನಾಟಕದ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ಕೋಟ್ಯಂತರ ರುಪಾಯಿಯ ಹವಾಲಾ ಹಣವನ್ನು ಎಐಸಿಸಿಗೆ ಸಂಧಾನ ಮಾಡಿದ್ದಾರೆ ಎಂದು ಆರೋಪ ಮಾಡಿರುವ ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರಾ ಅವರು ಜಾರಿ ನಿರ್ದೇಶನಾಲಯ ದಾಖಲಿಸಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಬಿಡುಗಡೆ ಮಾಡಿದ್ದರು.

ಕಾಂಗ್ರೆಸ್ವಿರುದ್ಧ ಟೀಕಾ ಪ್ರಹಾರ ನಡೆಸಿದ್ದ ಸಂಬಿತ್ ಪಾತ್ರಾ, ಡಿಕೆಶಿ ಕಾಂಗ್ರೆಸ್ ಪಾಲಿನ ಎಟಿಎಂ ಆಗಿದ್ದಾರೆ. ಕೆಜಿ ಅನ್ನುವ ಕೋಡ್ ವರ್ಡ್ ಮೂಲಕ ಹಣ ಸಂದಾಯ ಮಾಡಿದ್ದಾರೆ. 65 ಕೆಜಿ ಹಣ ಸಂದಾಯ ಮಾಡಿರುವ ಬಗ್ಗೆ ಬರೆಯಲಾಗಿದೆ. ಡೈರಿಯಲ್ಲಿ ಎಸ್‌ಜಿ ಮತ್ತು ಆರ್‌ಜಿ ಎನ್ನುವ ವರ್ಡ್‌ಗಳಿವೆ. ಎಸ್‌ಜಿ ಎಂದರೆ ಸೋನಿಯಾ ಗಾಂಧಿ , ಆರ್‌ಜಿ ಎಂದರೆ ರಾಹುಲ್ ಗಾಂಧಿ ಆಗಿದ್ದಾರೆ' ಎಂದು ಗಂಭೀರ ಆರೋಪ ಮಾಡುವ ಮೂಲಕ ಸಂಚಲನ ಮೂಡಿಸಿದ್ದಾರೆ. ವಿಚಾರಣೆ ನಡೆಸಿರುವ ದಾಖಲೆಗಳ ಬಿಡುಗಡೆ ಮಾಡಿದ ಪಾತ್ರಾ, ಡಿಕೆಶಿ ಆಪ್ತ ಆಂಜನೇಯ ಹನುಮಂತಯ್ಯ ಅವರು ಆದಾಯ ತೆರಿಗೆ ಅಧಿಕಾರಿಗಳ ಮುಂದೆ ತಪ್ಪೊಪ್ಪಿಗೆ ಹೇಳಿಕೆ ನೀಡಿರುವ ಕುರಿತ ವಿವರಣೆಯ ದಾಖಲೆಯನ್ನು ಓದಿದರು.

ಆಸ್ಪತ್ರೆಯಿಂದ ಎದ್ದುಬಂದ ಡಿಕೆಶಿ ರಾತ್ರೋರಾತ್ರಿ ಮತ್ತೆ ಅಪೊಲೊ ಸೇರಿದ್ದೇಕೆ?

ಆಸ್ಪತ್ರೆಯಿಂದ ಎದ್ದುಬಂದ ಡಿಕೆಶಿ ರಾತ್ರೋರಾತ್ರಿ ಮತ್ತೆ ಅಪೊಲೊ ಸೇರಿದ್ದೇಕೆ?

ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರ ಬುಧವಾರ ಡಿಕೆಶಿ ವಿರುದ್ಧವಾಗಿ ದೆಹಲಿಯಲ್ಲಿ ಕೆಲವು ದಾಖಲೆಗಳನ್ನು ಬಿಡುಗಡೆ ಮಾಡಿದ್ದರು, ಆದರೆ ಇದೆಲ್ಲವೂ ಸುಳ್ಳು ಎಂದು ಹೇಳಲು, ಡಿಕೆ ಶಿವಕುಮಾರ್ ಬುಧವಾರ ಪತ್ರಿಕಾಗೋಷ್ಠಿ ಕರೆದಿದ್ದರು, ಆದರೆ ಬುಧವಾರ ಸಂಜೆಯೇ ಡಿಸ್ಚಾರ್ಜ್ ಆಗಬೇಕಿದ್ದ ಡಿಕೆಶಿ ಮತ್ತೆ ಅಪೊಲೊ ಆಸ್ಪತ್ರೆಗೆ ಬಂದು ದಾಖಲಾಗಿದ್ದರು, ಇದರ ಹಿಂದಿರುವ ಮರ್ಮವೇನು ಎನ್ನುವುದು ಬಹಿರಂಗವಾಗಬೇಕಿದೆ.

ಡಿಕೆಶಿ ಡಿಸ್ಚಾರ್ಜ್ ಆಗುವುದಾದರೆ ಆತುರವಾಗಿ ಸಿಎಂ ಭೇಟಿ ಮಾಡಿದ್ದೇಕೆ?

ಡಿಕೆಶಿ ಡಿಸ್ಚಾರ್ಜ್ ಆಗುವುದಾದರೆ ಆತುರವಾಗಿ ಸಿಎಂ ಭೇಟಿ ಮಾಡಿದ್ದೇಕೆ?

ಸಚಿವ ಡಿಕೆ ಶಿವಕುಮಾರ್ ಅವರು ಒಂದೊಮ್ಮೆ ಡಿಸ್ಚಾರ್ಜ್ ಆಗುವುದಾಗಿದ್ದರೆ ಆತುರಾತುರವಾಗಿ ಸಿಎಂ ಕುಮಾರಸ್ವಾಮಿಯವರು ಇಂದು ಅಪೊಲೊ ಆಸ್ಪತ್ರೆಗೆ ಭೇಟಿ ನೀಡಿದ್ದು ಯಾಕೆ ಎನ್ನುವ ಪ್ರಶ್ನೆ ಉದ್ಭವವಾಗುತ್ತದೆ. ಅವರೊಂದಿಗೆ 20ಕ್ಕಿಂತಲೂ ಹೆಚ್ಚು ಮಂದಿ ಶಾಸಕರು ಕೂಡ ತೆರಳಿರುವುದು ಸಂಶಯಕ್ಕೆ ದಾರಿ ಮಾಡಿಕೊಟ್ಟಿದೆ.

ಡಿಕೆಶಿಗೆ ಅದೆಂಥ ಉದರಬೇನೆ? ಸಂಜೆ ಆಸ್ಪತ್ರೆಯಿಂದ ಹೋಗ್ತಾರಾ ಮನೆಗೆ?

ಡಿಕೆಶಿಗೆ ಅದೆಂಥ ಉದರಬೇನೆ? ಸಂಜೆ ಆಸ್ಪತ್ರೆಯಿಂದ ಹೋಗ್ತಾರಾ ಮನೆಗೆ?

ಜಾರಿ ನಿರ್ದೇಶನಾಲಯದಿಂದ ಬಂಧನ ಭೀತಿ ಎದುರಿಸುತ್ತಿರುವ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಅವರು ಉದರ ಬೇನೆ ಎಂದು ಅಪೊಲೊ ಆಸ್ಪತ್ರೆಯಲ್ಲಿ ದಾಖಲಾಗಿದ್ದರು, ಆದರೆ ಅವರಿಗೆ ನಿಜವಾಗಿಯೂ ಆಗಿರುವ ತೊಂದರೆ ಏನು ಎಂದು ಇನ್ನೂ ಬಹಿರಂಗಗೊಂಡಿಲ್ಲ.

English summary
Chief minister H.D.Kumaraswamy has met Water Resources Minister D.K.Shivakumar along with several MLAs and minister Bandeppa Khashempur at Apolo hospital and wished him speed recovery from illness. Sources said during the visit both discussed several political issues.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X