• search

ವಿದ್ಯಾಭ್ಯಾಸ ಮಾಡಿದ ಜಯನಗರ ನ್ಯಾಷನಲ್‌ ಕಾಲೇಜಿಗೆ ಕುಮಾರಸ್ವಾಮಿ ಭೇಟಿ

By Nayana
Subscribe to Oneindia Kannada
For Quick Alerts
ALLOW NOTIFICATIONS
For Daily Alerts
    ಬೆಂಗಳೂರಿನ ಜಯನಗರದ ಕಾಲೇಜಿಗೆ ಭೇಟಿ ನೀಡಿದ ಎಚ್ ಡಿ ಕುಮಾರಸ್ವಾಮಿ | Oneindia Kannada

    ಬೆಂಗಳೂರು, ಜೂನ್ 4: ಎಚ್‌ಡಿ ಕುಮಾರಸ್ವಾಮಿಯವರು ಅವರು ಓದಿದ ಬೆಂಗಳೂರು ನ್ಯಾಷನಲ್‌ ಕಾಲೇಜಿಗೆ ಸೋಮವಾರ(ಜೂನ್.4)ರಂದು ಬೆಳಗ್ಗೆ 10.30ಗಂಟೆಗೆ ಭೇಟಿ ನೀಡಲಿದ್ದಾರೆ. ಕುಮಾರಸ್ವಾಮಿ ಇದೇ ಕಾಲೇಜಿನಲ್ಲಿ ಅಧ್ಯಯನ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಭೇಟಿಗೆ ಮಹತ್ವ ಬಂದಿದೆ.

    ನ್ಯಾಷನಲ್ ಕಾಲೇಜಿನ ಕೀರ್ತಿ ಶಿಖರ ಶಿಕ್ಷಣ ತಜ್ಞ ಡಾ.ಎಚ್.ನರಸಿಂಹಯ್ಯ ಅವರನ್ನು ಈ ಭೇಡಿಗೆ ಮುನ್ನ ಸ್ಮರಿಸಿರುವ ಕುಮಾರಸ್ವಾಮಿ, ನಾನು ಓದಿದ ಬೆಂಗಳೂರು ನ್ಯಾಷನಲ್ ಕಾಲೇಜಿಗೆ ಇಂದು ಭೇಟಿ ನೀಡುತ್ತೇನೆ.

    ಪರೀಕ್ಷೆಗೆ ಶುಭ ಕೋರಿದ ಕುಮಾರಸ್ವಾಮಿ: ಬೆಚ್ಚಿಬೀಳಿಸುವ ವಿದ್ಯಾರ್ಥಿಗಳ ಮರುಪ್ರಶ್ನೆ

    ಈ ಕಾಲೇಜು ಮತ್ತು ಅಲ್ಲಿನ ಗುರುಗಳಾಗಿದ್ದ ಹೆಚ್ ನರಸಿಂಹಯ್ಯ ಅವರು ನನ್ನ ಬದುಕಿಗೆ ದಾರಿದೀಪ. ನ್ಯಾಷನಲ್ ‌ಕಾಲೇಜಿನ ಸಂಸ್ಥಾಪಕರಾಗಿದ್ದ ಅವರು, ಗಾಂಧೀವಾದಿಯಾಗಿದ್ದರು.20ನೇ ‌ಶತಮಾನದ ಖ್ಯಾತ ಗಾಂಧೀವಾದಿಯಾದ ಹೆಚ್ ನರಸಿಂಹಯ್ಯ ಅವರಿಗೆ ಗೌರವಪೂರ್ವಕ ನಮನ ಸಲ್ಲಿಸುತ್ತೇನೆ. ಎಂದು ಟ್ವೀಟ್‌ ಮಾಡಿದ್ದಾರೆ.

    ಗಾಂಧಿವಾದಿ ದೊರೆಸ್ವಾಮಿಯನ್ನೂ ಭೇಟಿ ಮಾಡಿ

    ಕುಮಾರಸ್ವಾಮಿಯವರು ನ್ಯಾಷನಲ್ ಕಾಲೇಜಿಗೆ ಭೇಟಿ ನೀಡುತ್ತಿರುವ ವಿಚಾರದ ಕುರಿತು ಟ್ವೀಟ್ ಮಾಡಿರುವ ದೇವರಾಜ್ ಗೌಡನವರ್ ತುಂಬಾ ಒಳ್ಳೆಯದು ಸಾರ್, ಹಾಗೆ ಶತಾಯಸಿ ಗಾಂಧಿವಾದಿ ದೊರೆಸ್ವಾಮಿ ಅವರನ್ನೂ ಭೇಟಿಮಾಡಬಹುದು ಎಂದಿದ್ದಾರೆ.

    ವೈಎಸ್‌ವಿ ದತ್ತಾ ಅವರನ್ನು ಗೌರವದಿಂದ ನೋಡಿ

    ಎಚ್. ನರಸಿಂಹಯ್ಯನವರ ಹಾಗೆ ವೈ.ಎಸ್.ವಿ.ದತ್ತಾರವರು,ನಿಮ್ಮ ಅಂತರಿಕ ವ್ಯತಿರಿಕ್ತಗಳೇನೆ ಇರಲಿ ಅದನ್ನ ಬದಿಗಿಟ್ಟು ಅವರನ್ನ ಗೌರವದಿಂದ ಕಂಡಲ್ಲಿ ನಿಮ್ಮ ಬಗ್ಗೆ ಇರುವ ಗೌರವಾಭಿಮಾನ ಇನ್ನು ಹಚ್ಚಾಗುವುದು ಎಂದು ಪ್ರೀತಮ್ ಪಟೇಲ್ ಟ್ವೀಟ್ ಮಾಡಿದ್ದಾರೆ.

    ಕುಮಾರಸ್ವಾಮಿ ಕಾಲೇಜು ದಿನಗಳನ್ನು ನೆನಪಿಸಿ ಟ್ವೀಟ್

    ಕುಮಾರಸ್ವಾಮಿಯವರು ಕಾಲೇಜಿನಲ್ಲಿದ್ದಾಗ ಹೇಗಿದ್ದರು, ಅವರ ನಡವಳಿಕೆ ಹೇಗಿತ್ತು ಎನ್ನುವುದರ ಬಗ್ಗೆ ಪ್ರಾರಂಶುಪಾಲರು ನೀಡಿದ್ದ ಹೇಳಿಕೆ ದಿನಪತ್ರಿಕೆಯೊಂದರಲ್ಲಿ ಪ್ರಕಟವಾಗಿತ್ತು. ಅದರಲ್ಲಿ ಕುಮಾರಸ್ವಾಮಿಯವರು ವಿದ್ಯಾರ್ಥಿಯಾಗಿದ್ದಾಗ ಪರೀಕ್ಷೆಯಲ್ಲಿ ಕಾಪಿ ಮಾಡುತ್ತಿದ್ದ ಸಂದರ್ಭ ಅವರು ಸಿಕ್ಕಿಹಾಕಿಕೊಳ್ಳುತ್ತಾರೆ ನಂತರ ಗುರುಗಳ ಕೈಕಚ್ಚಿ ಓಡಿಹೋಗುತ್ತಾರೆ ಎಂದು ಹಾಸ್ಯಮಯವಾಗಿ ಬರೆಯಲಾಗಿದೆ. ಆ ಬರಹವನ್ನು ಸಚಿನ್ ಆಗುಂಬೆ ಟ್ವೀಟ್ ಮಾಡಿದ್ದಾರೆ.

    ಪದವೀಧರ ಶಿಕ್ಷಕರ ನೇಮಕ ಪಟ್ಟಿ ಬಿಡುಗಡೆ ಮಾಡಿ

    ಸರ್ ನಿಮ್ಮ ಆಧಿಕಾರ ಅವಧಿಯಲ್ಲಿ ನಡೆದ 6-8 ಪದವೀಧರ ಶಿಕ್ಷಕರ ನೇಮಕ ಪ್ರಕ್ರಿಯೆ ಪಟ್ಟಿ ಬಿಡುಗಡೆ ಮಾಡಿಲ್ಲ. ಪರೀಕ್ಷೆ ಬರೆದು 6 ತಿಂಗಳ ಆಗಿದೆ ನಮ್ ಅಂತಾ ನಿರುದ್ಯೋಗಿ ಗಳ ಪಾಡು ಏನು..? ಬೇಗ ಪಟ್ಟಿ ಬಿಡುಗಡೆ ಮಾಡಿ, ಎಲ್ಲಿ ಅಕ್ರಮ ಆಗುತ್ತೆ ಅಂತಾ ಭಯ ಕಾಡ್ತಾ ಇದೇಇದಕ್ಕೆ ಉತ್ತರ ನೀಡಿ ಎಂದು ಸುಹೇಬ್ ಎನ್ನುವವರು ಟ್ವೀಟ್ ಮಾಡಿದ್ದಾರೆ.

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    English summary
    Chief minister H.D. Kumaraswamy will visit national college in Bengaluru on Monday where himself studied his degree.

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more