ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಾಧ್ಯಮಗಳ ಮೇಲೆ ಕುಮಾರಸ್ವಾಮಿ ತೀವ್ರ ಅಸಮಾಧಾನ

By Manjunatha
|
Google Oneindia Kannada News

Recommended Video

ಮಾಧ್ಯಮದವರ ಮೇಲೆ ಬೇಸರಿಸಿಕೊಂಡ ಎಚ್ ಡಿ ಕುಮಾರಸ್ವಾಮಿ | Oneindia Kannada

ಬೆಂಗಳೂರು, ಜುಲೈ 14: ಮುಖ್ಯಮಂತ್ರಿ ಕುಮಾರಸ್ವಾಮಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳು ತಮ್ಮನ್ನು ವಿಲನ್ ನನ್ನಾಗಿ ಚಿತ್ರಿಸುತ್ತಿವೆ ಎಂದು ಅವರು ಹೇಳಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ನಮ್ಮದು ಜನಪರವಾದ ಸರ್ಕಾರ ಆದರೆ ಮಾಧ್ಯಮಗಳು ಅದನ್ನು ಮುಚ್ಚಿಟ್ಟು ನಕಾರಾತ್ಮಕ ಅಂಶಗಳನ್ನೇ ಜನರ ಮುಂದಿಟ್ಟು ನನ್ನನ್ನು ವಿಲನ್‌ನಂತೆ ಬಿಂಬಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಅವರು ಮಾಧ್ಯಮಗಳ ಮೇಲೆ ಹರಿಹಾಯ್ದರು.

ಬಜೆಟ್‌ ಬಗ್ಗೆ ವಿರೋಧ ಪಕ್ಷದ ಪ್ರಶ್ನೆಗಳಿಗೆ ಕುಮಾರಸ್ವಾಮಿ ಖಡಕ್ ಉತ್ತರ ಬಜೆಟ್‌ ಬಗ್ಗೆ ವಿರೋಧ ಪಕ್ಷದ ಪ್ರಶ್ನೆಗಳಿಗೆ ಕುಮಾರಸ್ವಾಮಿ ಖಡಕ್ ಉತ್ತರ

ಪೆಟ್ರೋಲ್, ಡೀಸೆಲ್ ಮೇಲಿನ ಸೆಸ್‌ ಏರಿಕೆ ಬಗ್ಗೆ ಕೇಳಿದ್ದ ಪ್ರಶ್ನೆಗೆ ಮೇಲಿನಂತೆ ಉತ್ತರಿಸಿದ ಕುಮಾರಸ್ವಾಮಿ, 'ಮೋದಿ ಅವರು ಇಂಧನ ಬೆಲೆ 20 ರೂಪಾಯಿ ಏರಿಸಿದಾಗ ಸುಮ್ಮನಿದ್ದಿರಿ, ಗ್ಯಾಸ್ ಬೆಲೆ 300 ಏರಿಸಿದಾಗ ಸುಮ್ಮನಿದ್ದಿರಿ' ಎಂದು ಅವರು ಹರಿಹಾಯ್ದಿದ್ದಾರೆ.

CM Kumaraswamy unhappy with media

ನಮ್ಮ ಸರ್ಕಾರಕ್ಕೆ ಇನ್ನೂ 2 ತಿಂಗಳಷ್ಟೆ ನಾಡಿನ ಸರ್ವತೋಮುಖ ಅಭಿವೃದ್ಧಿಯೇ ನಮ್ಮ ಗುರಿ. ಮಾಧ್ಯಮಗಳು ಆತುರದಲ್ಲಿ ಸರ್ಕಾರದ ವಿಶ್ಲೇಷಣೆಯಲ್ಲಿ ತೊಡಗಿವೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಹೆಚ್ಚಾಗಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಜನರು ಕೊಡಲು ನಿರ್ಧರಿಸಿದ್ದಾರೆ ನೀವು ಯಾಕೆ ಅದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದೀರಾ? ಎಂದು ಮಾಧ್ಯಮದವರಿಗೆ ಕುಮಾರಸ್ವಾಮಿ ಪ್ರಶ್ನೆ ಮಾಡಿದರು.

English summary
CM Kumaraswamy said media showing him as a villain to Karnataka people. He also said media shut their mouth while Modi hiked fuel price but now opposing me.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X