ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿಮ್ಲಾ ಆಸ್ಪತ್ರೆಯಲ್ಲಿರುವ ಮೈಸೂರು ಮಹಿಳೆಯ ನೆರವಿಗೆ ನಿಂತ ಎಚ್ಡಿಕೆ

|
Google Oneindia Kannada News

ಬೆಂಗಳೂರು, ಜುಲೈ 24: ಹಿಮಾಚಲ ಪ್ರದೇಶದ ಶಿಮ್ಲಾ ಆಸ್ಪತ್ರೆಯಲ್ಲಿರುವ ಮೈಸೂರಿನ ಪದ್ಮಾ ಎಂಬ ಮಹಿಳೆಯೊಬ್ಬರನ್ನು ವಾಪಸ್ ಮೈಸೂರಿಗೆ ಕರೆತರುವ ವ್ಯವಸ್ಥೆ ಮಾಡುವಂತೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಮೈಸೂರು ಜಿಲ್ಲಾಧಿಕಾರಿಗೆ ಆದೇಶಿಸಿದ್ದಾರೆ.

ಶಿಮ್ಲಾದಲ್ಲಿರುವ ಹಿಮಾಚಲ ಹಾಸ್ಪಿಟಲ್ ಆಫ್ ಮೆಂಟಲ್ ಹೆಲ್ತ್ ಅಂಡ್ ರಿಹೆಬಿಲಿಟೇಶನ್ ನಲ್ಲಿ ಕಳೆದ ಎರಡು ವರ್ಷದಿಂದ ತಂಗಿರುವ ಮಹಿಳೆಯೊಬ್ಬರಿಗೆ ಭಾಷೆಯ ಕಾರಣದಿಂದ ಬೇರೆಯವರೊಂದಿಗೆ ಸಂವಹನ ನಡೆಸಲು ಸಾಧ್ಯವಾಗುತ್ತಿಲ್ಲ. ಆಕೆಗೆ ಕನ್ನಡವಲ್ಲದೆ ಬೇರೆ ಭಾಷೆ ಮಾತನಾಡಲು ಸಾಧ್ಯವಾಗದ ಕಾರಣ ಎರಡು ವರ್ಷಗಳಿಂದ ಇಲ್ಲಿಯೇ ಇದ್ದಾರೆ.

ಕರ್ನಾಟಕ ಸರ್ಕಾರದ ನೆರವು ಬೇಡುತ್ತಿರುವ ಶಿಮ್ಲಾದಲ್ಲಿರುವ ಮೈಸೂರು ಮಹಿಳೆಕರ್ನಾಟಕ ಸರ್ಕಾರದ ನೆರವು ಬೇಡುತ್ತಿರುವ ಶಿಮ್ಲಾದಲ್ಲಿರುವ ಮೈಸೂರು ಮಹಿಳೆ

ಮಾಧ್ಯಮಗಳಲ್ಲಿ ಈ ಸುದ್ದಿಯನ್ನು ನೋಡಿದ ಎಚ್ಡಿಕೆ, ಮಹಿಳೆಯನ್ನು ವಾಪಸ್ ಕರೆತರುವ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದ್ದಾರಲ್ಲದೆ, ಮೈಸೂರು ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಅವರಿಗೂ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

CM Kumaraswamy directs to bring Mysuru woman back from Shimla hospital

ಹಿಮಾಚಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಈಕೆ ಈಗ ಸಂಪೂರ್ಣ ಗುಣಮುಖರಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಮೂಲತಃ ಮೈಸೂರಿನವರಾದ ಪದ್ಮಾ, ಕಳೆದ ಎರಡು ವರ್ಷಗಳಿಂದ ಹಿಮಾಚಲ ಪ್ರದೇಶದಲ್ಲಿದ್ದಾರೆ. ಅವರು ಅಲ್ಲಿಗೆ ಹೋಗಿದ್ದು ಹೇಗೆ ಇತ್ಯಾದಿ ಮಾಹಿತಿಗಳು ಲಭ್ಯವಿಲ್ಲ. ಅವರಿಗೆ ಕನ್ನಡ ಬಿಟ್ಟು ಬೇರೆ ಭಾಷೆ ಬಾರದ ಕಾರಣ ಅವರಿಗೆ ಸಂವಹನ ನಡೆಸುವುದಕ್ಕೆ ಸಾಧ್ಯವಾಗುತ್ತಿಲ್ಲ.

English summary
Karnataka Chief Minister HD Kumaraswamyon Monday directed Deputy Commissioner of Mysuru to take necessary steps to bring back Mysuru woman, who was found in Himachal Hospital of Mental Health and Rehabilitation (HHMHR) in Shimla.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X